Male Teachers Wear Skirts Across Spain: ಸಾಮಾಜಿಕ ಮಾಧ್ಯಮಗಳಲ್ಲಿ ಯಾವಾಗಲು ವಿವಿಧ ರೀತಿಯ ಕ್ಯಾಂಪೇನ್ ಗಳು ನಡೆಯುತ್ತಲೇ ಇರುತ್ತವೆ. ಇಂತಹುದೇ ಒಂದು ಕ್ಯಾಂಪೇನ್ ಸ್ಪೇನ್ (Spain) ನಲ್ಲಿ ನಡೆಯುತ್ತಿದೆ. ಅಲ್ಲಿನ ಶಾಲಾ ಸ್ಖಿಕ್ಷಕರು ಸ್ಕರ್ಟ್ (Skirts) ಧರಿಸಿ ಶಾಲೆಗೇ ಬರಲು ಆರಂಭಿಸಿದ್ದಾರೆ. ಸ್ಪೇನ್ ದೇಶಾದ್ಯಂತ ಈ ಕ್ಯಾಂಪೇನ್ ಆಂದೋಲನದ ರೂಪ ಪಡೆದುಕೊಂಡಿದೆ.
ಇದನ್ನೂ ಓದಿ- Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಸ್ಕರ್ಟ್ ಧರಿಸಿ ಶಾಲೆಗೆ ಏಕೆ ಬರುತ್ತಿದ್ದಾರೆ ಶಿಕ್ಷಕರು - 'ಡೈಲಿ ಮೇಲ್'ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಅಕ್ಟೋಬರ್ 2020ರಲ್ಲಿ ವಿದ್ಯಾರ್ಥಿಯೊಬ್ಬ ಶಾಲೆಗೇ ಸ್ಕರ್ಟ್ ಧರಿಸಿ ಬಂದ ಕಾರಣ ಆತನನ್ನು ಕ್ಲಾಸ್ ನಿಂದ ಹೊರಹಾಕಲಾಗಿತ್ತು. ಜೊತೆಗೆ ಆತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿ ಮನೋವೈದ್ಯರ ಬಳಿ ಕಳುಹಿಸಲಾಗಿತ್ತು. ಇದೀಗ ಆ ವಿದ್ಯಾರ್ಥಿಯನ್ನು ಬೆಂಬಲಿಸಿರುವ ಶಿಕ್ಷಕರು ಇಡೀ ದೇಶಾದ್ಯಂತ ಕ್ಯಾಂಪೇನ್ ನಡೆಸುತ್ತಿದ್ದಾರೆ. ಕೇವಲ ಶಿಕ್ಷಕರಷ್ಟೇ ಅಲ್ಲ ಬೇರೆ ಜನರು ಕೂಡ ಸ್ಕರ್ಟ್ ಧರಿಸುತ್ತಿದ್ದಾರೆ.
2. ದಿ ಕ್ಲಾಥ್ಸ್ ಹ್ಯಾವ್ ನೋ ಜೆಂಡರ್ - ಜೆಂಡರ್ ಏಕ್ವಾಲಿಟಿಯನ್ನು ಬೆಂಬಲಿಸಿ (Gender Equality Movement) ಈ ಆಂದೋಲನವನ್ನು ನಡೆಸಲಾಗುತ್ತಿದೆ ಹಾಗೂ ಇದೀಗ ಸಂಪೂರ್ಣ ಸ್ಪೇನ್ ನಲ್ಲಿ 'ದಿ ಕ್ಲಾತ್ಸ್ ಹ್ಯಾವ್ ನೋ ಜೆಂಡರ್' ಕ್ಯಾಂಪೇನ್ ನಡೆಸಲಾಗುತ್ತಿದೆ. ಸದ್ಯ ಈ ಕ್ಯಾಂಪೇನ್ ಗೆ ದೇಶಾದ್ಯಂತದ ಜನರಿಂದ ಬೆಂಬಲ ಸಿಗುತ್ತಿದೆ.
3. ಸ್ಕರ್ಟ್ ಧರಿಸಿ ವಿದ್ಯಾರ್ಥಿ ಶಾಲೆಗೇ ಏಕೆ ಬಂದಿದ್ದ - ಶಾಲೆಯಿಂದ ಹೊರಹಾಕಲಾದ ಬಳಿಕ ವಿದ್ಯಾರ್ಥಿ ತನ್ನ ಕಥೆಯನ್ನು ಟಿಕ್ ಟಾಕ್ (TikTok) ಮೂಲಕ ಹಂಚಿಕೊಂಡಿದ್ದಾನೆ ಹಾಗೂ ಈ ರೀತಿ ಮಾಡುವುದರ ಮೂಲಕ ತಾನು ಮಹಿಳಾವಾದ ಹಾಗೂ ವಿವಿಧತೆಯನ್ನು ಬೆಂಬಲಿಸಿದ್ದೆ ಎಂದಿದ್ದಾನೆ.
4. ಕ್ಯಾಂಪೇನ್ ಆರಂಭಿಸಿದ್ದು ಯಾರು? - ಸ್ಕರ್ಟ್ ಧರಿಸಿದ ಕಾರಣ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಲಾದ ಬಳಿಕ ಮಾಥ್ಸ್ ಟೀಚರ್ ಆಗಿರುವ ಜೋಸ್ ಪಿನಾಸ್ ನವೆಂಬರ್ ತಿಂಗಳಿನಲ್ಲಿ 'ದಿ ಕ್ಲಾತ್ಸ್ ಹ್ಯಾವ್ ನೋ ಜೆಂಡರ್' (#LaRopaNoTieneGenero) ಕ್ಯಾಂಪೇನ್ ಆರಂಭಿಸಿದ್ದರು. ಆದರೆ, ಕಳೆದ ತಿಂಗಳು ವಿರ್ಜೆನ್ ಡಿ ಸೆಸೆಡಾನ್ ಪ್ರೈಮರಿ ಸ್ಕೂಲ್ ಟೀಚರ್ ಗಳಾದ ಮ್ಯಾನ್ಯುಯೆಲ್ ಒರ್ಟೇಗಾ ಹಾಗೂ ಬೋರಜಾ ವೆಲ್ಲಾಕ್ಕೆಜ್ ಶಾಲೆಗೇ ಸ್ಕರ್ಟ್ ಧರಿಸಿ ಬಂದ ಬಳಿಕ ಈ ಆಂದೋಲನ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
5. ಕಳೆದ ಒಂದು ತಿಂಗಳಿನಿಂದ ಸ್ಕರ್ಟ್ ಧರಿಸಿ ಶಾಲೆಗೇ ಬರುತ್ತಿದ್ದಾರೆ ಶಿಕ್ಷಕರು - ಈ ಕುರಿತು ಮಾತನಾಡಿರುವ 37 ವರ್ಷದ ಮ್ಯಾನ್ಯುಯೇಲ್ (Mr Ortega) ಹಾಗೂ 36 ವರ್ಷದ ಬೋರ್ಜಾ ವೇಲಾಕ್ಕೊಜ್ (Mr Velazquez), ಕಳೆದ ಒಂದು ತಿಂಗಳಿನಿಂದ ನಾವು ಶಾಲೆಗೇ ಸ್ಕರ್ಟ್ ಧರಿಸಿ ಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಆಂದೋಲನವನ್ನು ಆರಂಭಿಸಿದ ಜೋಸ್ ಪಿನಾಸ್ (Jose Pinas), ಕಳೆದ ವರ್ಷದಿಂದಲೇ ಶಾಲೆಗೆ ಸ್ಕರ್ಟ್ ಧರಿಸಿ ಬರುತ್ತಿದ್ದಾರೆ. ಚೀಪ್ ಪಬ್ಲಿಸಿಟಿ ಪಡೆಯುವುದು ಇದರ ಹಿಂದಿನ ಉದ್ದೇಶವಾಗಿರದೇ ಲೈಂಗಿಕ ತಾರತಮ್ಯ ನಿವಾರಣೆಯ ಒಂದು ಪ್ರಯತ್ನ ಇದಾಗಿದೆ ಎನ್ನುತ್ತಾರೆ.