KCC-2023 ಪಂದ್ಯಾವಳಿಗೆ ಸಿಎಂ ಚಾಲನೆ-ಕನ್ನಡಾಂಬೆಗೆ ತಲೆಬಾಗಿದ ಗಣ್ಯರು: ಅಮೋಘ ಕ್ಷಣಗಳ ಫೋಟೋ ಇಲ್ಲಿವೆ

Kannada Chalanachitra Cup-2023: ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್‌ 2023ರ ಮೂರನೇ ಆವೃತ್ತಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.

1 /5

ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್‌ 2023ರ ಮೂರನೇ ಆವೃತ್ತಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.

2 /5

ಕನ್ನಡ ಚಲನಚಿತ್ರ ಕಪ್‌ ಎಂಬುದು ಸ್ಯಾಂಡಲ್‌ವುಡ್‌’ನ ತಾರೆಯರು, ತಂತ್ರಜ್ಞರು, ಚಲನಚಿತ್ರ ನಿರ್ಮಾಪಕರು ಮುಂತಾದವರನ್ನು ಒಳಗೊಂಡ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಎರಡು ದಿನಗಳ ಈವೆಂಟ್ ನಲ್ಲಿ ಸಿನಿಮಾ ಕ್ಷೇತ್ರದ ಆರು ತಂಡಗಳು ಭಾಗವಹಿಸಲಿವೆ.

3 /5

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ 2023 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.

4 /5

ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್ ಹಾಗೂ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರು ಹಾಜರಿದ್ದರು.

5 /5

ಪಂದ್ಯಾವಳಿಯ ಪೂರ್ವಭಾವಿಯಾಗಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಟ ಕಿಚ್ಚ ಸುದೀಪ್, “ಪಂದ್ಯಾವಳಿಯ ಆಯೋಜನೆ ಕಾರ್ಯದಲ್ಲಿದ್ದು, ಆಡುತ್ತಿರುವ ವಿವಿಧ ನಟರ ಅಭಿಮಾನಿಗಳು ಆಟವನ್ನು ಶಾಂತಿಯುತವಾಗಿ ಆನಂದಿಸಿ ಮತ್ತು ಯಾವುದೇ ಗಲಾಟೆ ಸೃಷ್ಟಿಸಬೇಡಿ” ಎಂದು ವಿನಂತಿಸಿದ್ದರು.