ಈ ರಾಶಿಯವರ ಮೇಲೆ ಶನಿ ಕೃಪೆ! ಇನ್ನು 30 ತಿಂಗಳು ಇವರ ಬದುಕು ಬಂಗಾರ

Shani gochara 2023 : ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ಚಿಹ್ನೆಯನ್ನು ಬದಲಾಯಿಸುತ್ತದೆ. ನ್ಯಾಯದ ದೇವರಾದ ಶನಿ ದೇವರು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹ ಇದಾಗಿದೆ. 
 

ಬೆಂಗಳೂರು : ಜನವರಿ 17, 2023 ರಂದು,  ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇನ್ನು ಮುಂದಿನ ಎರಡೂವರೆ ವರ್ಷಗಳ ಕಾಲ ಕುಂಭ ರಾಶಿಯಲ್ಲಿರುತ್ತಾನೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಶನಿಯು ಕುಂಭ ರಾಶಿಯಲ್ಲಿ ಸಂಕ್ರಮಿಸಿರುವ ಕಾರಣ ಶಶ ರಾಜಯೋಗ ರೂಪುಗೊಂಡಿದೆ. ಈ ರಾಜಯೋಗದ ಮೂಲಕ ಶನಿಯು 5 ರಾಶಿಯವರ ಜೀವನದ ಕಷ್ಟವನ್ನು ಕಳೆದು ಬಾಳು ಬೆಳಗುತ್ತಾನೆ.  

2 /7

ಈ ಅವಧಿಯಲ್ಲಿ ಶನಿಗ್ರಹದ ಅಸ್ತ ಮತ್ತು ಉದಯದಲ್ಲಿಯೂ ಬದಲಾವಣೆಗಳು ಕಂಡುಬರುತ್ತವೆ. ಶನಿಯ ಸಂಚಾರದಲ್ಲಿಯೂ ಬದಲಾವಣೆಯಾಗಲಿದೆ. ಶನಿ ಸಂಕ್ರಮಣದಿಂದ ರೂಪುಗೊಂಡ ಶಶರಾಜಯೋಗವು ಯಾವ ರಾಶಿಯವರಿಗೆ ಮಂಗಳಕರವಾಗಿರುತ್ತದೆ ಯಾರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ನೋಡೋಣ. 

3 /7

ಶನಿ ಸಂಕ್ರಮಣದಿಂದ ರೂಪುಗೊಂಡ ಶಶರಾಜ ಯೋಗವು ವೃಷಭ ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ತಂದು ಕೊಡುತ್ತದೆ. ಈ ರಾಶಿಯವರು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.  ಆದಾಯದಲ್ಲಿ ಹೆಚ್ಚಳವಾಗಲಿದೆ. ಉದ್ಯೋಗದಲ್ಲಿ ಇರುವವರಿಗೂ ಇದು ಸುವರ್ಣ ಕಾಲ ಆಗಿರಲಿದೆ. ಕಲೆ, ಬರವಣಿಗೆ ಮತ್ತು ಮಾಧ್ಯಮದವರು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.   

4 /7

ಶನಿ ಸಂಕ್ರಮಣದಿಂದ ರೂಪುಗೊಂಡ ಶಶ ರಾಜಯೋಗವು ಮಿಥುನ ರಾಶಿಯ ಜನರ ಅದೃಷ್ಟವನ್ನು ತೆರೆಯುತ್ತದೆ. ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಅದೃಷ್ಟ ಕೈ ಹಿಡಿಯಲಿದೆ. ಹಣದ ಹರಿವು ಹೆಚ್ಚಾಗುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಂಪತ್ತು ಹೆಚ್ಚಾಗುತ್ತದೆ.  

5 /7

ಶನಿಯು ತುಲಾ ರಾಶಿಯವರ ಭವಿಷ್ಯವನ್ನೂ ಬದಲಾಯಿಸುತ್ತಾನೆ.  ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಇಲ್ಲಿಯವರೆಗೆ ಅನುಭವಿಸಿದ್ದ ಎಲ್ಲಾ ಕಷ್ಟಗಳು ಕೊನೆಯಾಗುತ್ತವೆ. ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ.  ಜೀವನದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಸಂತೋಷ ಎದುರಾಗುತ್ತದೆ. ಜೀವನ ಪ್ರೀತಿ ಉತ್ತಮವಾಗಿರುತ್ತದೆ.   

6 /7

ಸಿಂಹ ರಾಶಿಯವರಿಗೆ ಶನಿ ಸಂಚಾರವು ವರದಾನವಾಗಿ ಪರಿಣಮಿಸಲಿದೆ.  ಜಂಟಿ ಉದ್ಯಮಗಳಲ್ಲಿ ತೊಡಗಿರುವವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಇರುವವರು ಪ್ರಗತಿ ಹೊಂದುತ್ತಾರೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

7 /7

ಶನಿಯು ತನ್ನ ಸ್ವಂತ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದಂತೆ, ಈ ರಾಶಿಯವರ ಜೀವನದಲ್ಲಿ ಎಲ್ಲವೂ ಶುಭ. ಕುಂಭ ರಾಶಿಯವರ ಜಾತಕದಲ್ಲಿ ಏಳೂವರೆ ವರ್ಷದ ಶನಿ ದೆಸೆ ನಡೆಯುತ್ತಿದ್ದರೂ, ಶನಿ ಪ್ರಭಾವ ಅಷ್ಟೇನೂ ಇರುವುದಿಲ್ಲ. ಶನಿಯು ಕುಂಭ ರಾಶಿಯ ಅಧಿಪತಿಯಾಗಿರುವುದರಿಂದ, ಈ ರಾಶಿಯವರ ಜಾತಕದ  ಲಗ್ನ ಮನೆಯಲ್ಲಿ ಶಶರಾಜಯೋಗವು ರೂಪುಗೊಳ್ಳುತ್ತದೆ.