2025ರಲ್ಲಿ ಈ 3 ರಾಶಿಯವರ ಬದುಕಿನಲ್ಲಿ ಶುಭ ಕಾಲ ಶುರುವಾಗಲಿದೆ; ಗುರು-ಶುಕ್ರನ ಸಂಯೋಗದಿಂದ ಮುಟ್ಟಿದೆಲ್ಲಾ ಚಿನ್ನ!!

Conjunction of Jupiter-Venus: ಗುರು-ಶುಕ್ರನ ಸಂಯೋಗದಿಂದ ರೂಪುಗೊಳ್ಳಲಿರುವ ಗಜಲಕ್ಷ್ಮಿ ಯೋಗದಿಂದ ಕೆಲವು ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ. 2025ರಲ್ಲಿ ಪ್ರಮುಖವಾಗಿ 3 ರಾಶಿಯವರ ಬದುಕಿನಲ್ಲಿ ಶುಭ ಕಾಲ ಶುರುವಾಗಲಿದೆ.

Conjunction of Jupiter-Venus: ದೈತ್ಯರ ಗುರುವಾಗಿರುವ ಶುಕ್ರನು ಮುಂದಿನ ವರ್ಷದ ಜುಲೈ ತಿಂಗಳಿನಲ್ಲಿ ಮಿಥುನ ರಾಶಿಗೆ ಕಾಲಿಡಲಿದ್ದಾನೆ. ಗುರು ಹಾಗೂ ಶುಕ್ರರ ನಡುವೆ ಈ ಸಂದರ್ಭದಲ್ಲಿ ಸಂಯೋಗ ಉಂಟಾಗಲಿದೆ. ಈ ಸಂಯೋಗವು ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಪ್ರಮುಖವಾದ ಯೋಗಗಳಲ್ಲಿ ಒಂದಾಗಿರುವಂತಹ ಗಜಲಕ್ಷ್ಮಿ ಯೋಗವನ್ನು ನಿರ್ಮಾಣ ಮಾಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

ಗುರು-ಶುಕ್ರನ ಸಂಯೋಗದಿಂದ ರೂಪುಗೊಳ್ಳಲಿರುವ ಗಜಲಕ್ಷ್ಮಿ ಯೋಗದಿಂದ ಕೆಲವು ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ. 2025ರಲ್ಲಿ ಪ್ರಮುಖವಾಗಿ 3 ರಾಶಿಯವರ ಬದುಕಿನಲ್ಲಿ ಶುಭ ಕಾಲ ಶುರುವಾಗಲಿದೆ. ಗುರು-ಶುಕ್ರನ ಸಂಯೋಗದಿಂದ ಈ ರಾಶಿಯ ಜನರು ಮುಟ್ಟಿದೆಲ್ಲಾ ಚಿನ್ನವಾಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಯಿರಿ...

2 /4

ಗಜಲಕ್ಷ್ಮಿ ಯೋಗದ ಪ್ರಭಾವದಿಂದ ಮಿಥುನ ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ. ಶುಕ್ರ ಹಾಗೂ ಗುರುವಿನ ಆಶೀರ್ವಾದದ ಪ್ರಭಾವ ಸಹ ಮಿಥುನ ರಾಶಿಯ ಜಾತಕದವರ ಮೇಲಿರಲಿದೆ. ಸಂತಾನಕ್ಕೆ ಸಂಬಂಧಪಟ್ಟಂತೆ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಈ ಸಂದರ್ಭದಲ್ಲಿ ಪರಿಹಾರವಾಗಲಿದೆ. ಹಣ ಸಂಪಾದನೆ ಮಾಡುವುದಕ್ಕೆ 2025ರಲ್ಲಿ ನಿಮಗೆ ಹೊಸ ಅವಕಾಶಗಳು ಸಿಗಲಿವೆ. ಆರ್ಥಿಕ ಪರಿಸ್ಥಿತಿಯ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಕಾದ ಯಾವುದೇ ಅಗತ್ಯವಿರಲ್ಲ. ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದು ಸಹ ಸಾಧ್ಯವಾಗಲಿದೆ.

3 /4

ಸಿಂಹ ರಾಶಿಯವರ 11ನೇ ಸ್ಥಾನದಲ್ಲಿ ಗುರು ಹಾಗೂ ಶುಕ್ರರ ಸಂಯೋಗ ಕಂಡು ಬರಲಿದೆ. ಇದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ಸಿಂಹ ರಾಶಿಯ ಜಾತಕದವರ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಸ್ಥಗಿತವಾಗಿರುವ ಕೆಲಸಗಳು ಸಹ ಯಶಸ್ವಿಯಾಗಿ ಪೂರ್ತಿಯಾಗಲಿವೆ. ನಿಮಗೆ ಹಠಾತ್ ಧನ ಲಾಭವಾಗುವಂತಹ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಿಮಗೆ ಒಳ್ಳೆಯ ಪಾಲು ಸಿಗಲಿದೆ. ಒಡಹುಟ್ಟಿದವರ ಜೊತೆಗೆ ನಿಮ್ಮ ಸಂಬಂಧ ಇನ್ನಷ್ಟು ಉತ್ತಮವಾಗಲಿದೆ. ಉದ್ಯೋಗದಲ್ಲಿ ನೀವು ಮತ್ತಷ್ಟು ಅಭಿವೃದ್ಧಿಯ ಹಂತವನ್ನು ಏರಲಿದ್ದೀರಿ.

4 /4

ಗಜಲಕ್ಷ್ಮಿ ಯೋಗವು ತುಲಾ ರಾಶಿಯವರಿಗೆ ಸಾಕಷ್ಟು ಉತ್ತಮ ಅವಕಾಶಗಳನ್ನು ತಂದು ಕೊಡಲಿದೆ. ಈ ಸಮಯದಲ್ಲಿ ತುಲಾ ರಾಶಿಯ ಜಾತಕದವರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಭಿರುಚಿ ಉಂಟಾಗಲಿದೆ. ಸಂತಾನಕ್ಕೆ ಸಂಬಂಧಪಟ್ಟಂತೆ ಈ ಸಂದರ್ಭದಲ್ಲಿ ನಿಮಗೆ ಸಿಹಿಸುದ್ದಿ ಸಿಗಲಿದೆ. ಕುಟುಂಬದ ಜೊತೆಗೆ ಸಾಕಷ್ಟು ಸಮಯಗಳ ನಂತರ ಉತ್ತಮ ಕ್ಷಣಗಳನ್ನು ಕಳೆಯಲು ಅವಕಾಶ ದೊರಕಲಿದೆ. ಹಣ ಸಂಪಾದನೆ ಮಾಡಲು ನಿಮಗೆ ಹೊಸ ಮಾರ್ಗಗಳು ದೊರೆಯಲಿವೆ.