ಇಂದಿನ ಯುವ ಪೀಳಿಗೆ ಆರೋಗ್ಯಕರ ಆಹಾರಕ್ಕಿಂತ ಜಂಕ್ ಫುಡ್ ತಿನ್ನುವುದನ್ನೇ ಇಷ್ಟಪಡುತ್ತಾರೆ. ಮಕ್ಕಳು ಕೂಡಾ ಜಂಕ್ ಫುಡ್ ನ ಬೇಡಿಕೆ ಇಡುತ್ತಲೇ ಇರುತ್ತಾರೆ. ಜಂಕ್ ಫುಡ್ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನವದೆಹಲಿ : ಕರೋನಾ ಕಾಲದಲ್ಲಿ ಆಹಾರ ಪಾನೀಯನಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಆಹಾಋ ಸೇವಿಸುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಆದರೆ ಇಂದಿನ ಯುವ ಪೀಳಿಗೆ ಆರೋಗ್ಯಕರ ಆಹಾರಕ್ಕಿಂತ ಜಂಕ್ ಫುಡ್ ತಿನ್ನುವುದನ್ನೇ ಇಷ್ಟಪಡುತ್ತಾರೆ. ಮಕ್ಕಳು ಕೂಡಾ ಜಂಕ್ ಫುಡ್ ನ ಬೇಡಿಕೆ ಇಡುತ್ತಲೇ ಇರುತ್ತಾರೆ. ಜಂಕ್ ಫುಡ್ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಇವತ್ತು ನಾವು ಹೇಳುವ ಈ ಟ್ರಿಕ್ ಜಂಕ್ ಫುಡ್ ನಿಂದ ದೂರ ಉಳಿಯಲು ಬಯಸುವವರಿಗೆ ಸಹಾಯವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ನೀವು ಕೂಡಾ ಜಂಕ್ ಫುಡ್ ತಿನ್ನಲು ಹಂಬಲಿಸುತ್ತಿದ್ದರೆ, ಕೇವಲ ಒಂದು ಒಣದ್ರಾಕ್ಷಿಯನ್ನು ಬಾಯಿಗೆ ಹಾಕಿಕೊಳ್ಳಿ. ಈ ಒಣ ದ್ರಾಕ್ಷಿಯನ್ನು ನಿಧಾನವಾಗಿ ತಿನ್ನಿ. ಹೀಗೆ ಮಾಡುವುದರಿಂದ ನಿಧಾನವಾಗಿ ಜಂಕ್ ಫುಡ್ ತಿನ್ನುವ ಬಯಕೆ ಕಡಿಮೆಯಾಗುತ್ತದೆಯಂತೆ.
ಒಣದ್ರಾಕ್ಷಿ ತಿನ್ನುವಾಗ, ಬಾಯಿಗೆ ಹಾಕಿದ ಕೂಡಲೇ ಹಾಗೇ ತಿಂದು ಮುಗಿಸಬೇಡಿ. ನಿಧಾನವಾಗಿ ತಿನ್ನಿ. ತಿನ್ನುವಾಗ ನಿಮ್ಮ ಗಮನ ಣ ದ್ರಾಕ್ಷಿ ತಿನ್ನುವ ಮೇಲೆಯೇ ಇರಲಿ.
ಒಣದ್ರಾಕ್ಷಿ ಸೇವಿಸುವುದರಿಂದ ಬಹಳಷ್ಟು ಸಮಯದವರೆಗೆ ಹಸಿವಾಗುವುದಿಲ್ಲ. ಒಣದ್ರಾಕ್ಷಿಯಲ್ಲಿರುವ ಲೆಪ್ಟಿನ್, ಥರ್ಮೋಜೆನೆಸಿಸ್ ಪ್ರಕ್ರಿಯೆಯನ್ನು ಹೆಚ್ಚಿಸುವ ಮೂಲಕ ಕೊಬ್ಬು ನಿವಾರಿಸುವ ಕೆಲಸ ಮಾಡುತ್ತದೆ.
ಇನ್ನು ಒಣದ್ರಾಕ್ಷಿಯಲ್ಲದೆ, ಬಾಳೆಹಣ್ಣು ಮತ್ತು ಹಸಿರು ಸೇಬು ಕೂಡಾ, ಜಂಕ್ ಫುಡ್ ಮೇಲಿನ Craving ಅನ್ನು ಕಡಿಮೆ ಮಾಡುತ್ತದೆ.