ನಾವು ಆರೋಗ್ಯವಾಗಿರಬೇಕಾದರೆ ನಮ್ಮ ದೇಹದ ಪ್ರತಿಯೊಂದು ಅಂಗವೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಅವುಗಳಲ್ಲಿ ಕಿಡ್ನಿ ಕೂಡಾ ಒಂದು.
Kidney Damage Prevention: ನಮ್ಮ ಆರೋಗ್ಯ ಹೇಗಿದೆ ಎನ್ನುವುದು ನಾವು ಸೇವಿಸುವ ಆಹಾರದ ಮೇಲೆ ನಿರ್ಧರಿತವಾಗಿದೆ. ನಾವು ಆರೋಗ್ಯವಾಗಿರಬೇಕಾದರೆ ನಮ್ಮ ದೇಹದ ಪ್ರತಿಯೊಂದು ಅಂಗವೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಅವುಗಳಲ್ಲಿ ಕಿಡ್ನಿ ಕೂಡಾ ಒಂದು. ತಪ್ಪಾದ ರೀತಿಯಲ್ಲಿ ಮಾಡುವ ಆಹಾರ ಸೇವನೆಯಿಂದ ಕಿಡ್ನಿ ಮೇಲೆ ಪರಿಣಾಮವಾಗುತ್ತದೆ. ಮೂತ್ರಪಿಂಡವು ದುರ್ಬಲವಾಗಿದ್ದರೆ, ಕೆಲವೊಂದು ಆರೋಗ್ಯಕೆರ ಆಹಾರಗಳು ಕೂಡಾ ಸಮಸ್ಯೆ ಇನ್ನಷ್ಟು ಹೆಚ್ಚಾಗಲು ಕಾರಣವಾಗುತ್ತದೆ. ಮೂತ್ರಪಿಂಡವು ಹಾನಿಯಾಗದಂತೆ ರಕ್ಷಿಸಬೇಕಾದರೆ, ಆಹಾರದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಅವುಗಳು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಆದ್ದರಿಂದ ಕಿಡ್ನಿ ಸಮಸ್ಯೆಯಿದ್ದರೆ ಡ್ರೈ ಫ್ರೂಟ್ಸ್ ಸೇವನೆಯಿಂದ ದೂರವಿರಬೇಕು.
ಹೆಚ್ಚಿನ ಪ್ರಮಾಣದ ಉಪ್ಪು ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉಪ್ಪು ತಿನ್ನುವುದರಿಂದ, ಸೋಡಿಯಂ ಮತ್ತು ನೀರಿನ ಪ್ರಮಾಣವು ಹೆಚ್ಚಾಗಿ, ಮೂತ್ರಪಿಂಡದ ಮೇಲೆ ಹೊರೆಯಾಗುತ್ತದೆ.
ಸಿಹಿ ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಕಿಡ್ನಿ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಬಿಳಿ ಸಕ್ಕರೆ ಮೂತ್ರಪಿಂಡಕ್ಕೆ ಹಾನಿಕಾರಕವಾಗಿದೆ. ಮೂತ್ರಪಿಂಡವನ್ನು ಆರೋಗ್ಯವಾಗಿಡಬೇಕಾದರೆ ಸಿಹಿ ತಿನ್ನುವುದನ್ನು ತಪ್ಪಿಸಬೇಕು.
ಬೇಳೆಕಾಳುಗಳಲ್ಲಿ ಆಕ್ಸಲೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ. ಹುರುಳಿ ಬೀಜಗಳನ್ನು ತಿನ್ನುವುದು ತುಂಬಾ ಹಾನಿಕಾರಕ. ಹಾಲಿನಿಂದ ಮಾಡಿದ ವಸ್ತುಗಳು ಕೂಡಾ ಕಿಡ್ನಿಗೆ ಹಾನಿ ಉಂಟು ಮಾಡುತ್ತದೆ.
ಪ್ಯಾಕೇಜ್ ಮಾಡಿದ ಆಹಾರಗಳು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಮತ್ತು ಫಾಸ್ಫರಸ್ ಇದ್ದು ಇದು ಕಿಡ್ನಿಗೆ ಹಾನಿ ಉಂಟು ಮಾಡುತ್ತದೆ. ಹೀಗಾಗಿ ಕಿಡ್ನಿ ಆರೋಗ್ಯಕ್ಕಾಗಿ ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ನಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ