ಕೊತ್ತಂಬರಿ ಸೊಪ್ಪಿನಲ್ಲಿ ಇರುವಂತಹ ಆ್ಯಂಟಿ-ಆಕ್ಸಿಡೆಂಟ್ಗಳು ಒತ್ತಡದ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ನೆನಪಿನ ಶಕ್ತಿ ಚುರುಕುಗೊಳಿಸುವ ಕೆಲಸ ಮಾಡುತ್ತದೆ.
ಬೆಂಗಳೂರು : ಕೊತ್ತಂಬರಿ ಸೊಪ್ಪು ಹಾಕಿದರೆ ಅಡುಗೆಯ ಘಮವೇ ಬದಲಾಗುತ್ತದೆ. ಹೀಗಾಗಿಹೆಚ್ಚಿನ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸಲಾಗುತ್ತದೆ. ಇದು ಅಡುಗೆಯ ರುಚಿ ಮತ್ತು ಘಮ ಎರಡನ್ನೂ ಹೆಚ್ಚಿಸುತ್ತದೆ. ಇದು ಆಹಾರದ ರುಚಿ ಮತ್ತು ಪರಿಮಳ ಹೆಚ್ಚಿಸುವುದು ಮಾತ್ರವಲ್ಲ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಕೂಡಾ ನಿವಾರಿಸುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿ ಇರುವ ಕಿಣ್ವಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕೊತ್ತಂಬರಿ ಸೊಪ್ಪಿನಲ್ಲಿ ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್ಗಳು ಸಮೃದ್ಧವಾಗಿದೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪು ಚಯಾಪಚಯವನ್ನು ಹೆಚ್ಚಿಸುವುದಲ್ಲದೆ, ವಾಯು ಮತ್ತು ಮಲಬದ್ಧತೆಯಿಂದ ನಿಮಗೆ ಪರಿಹಾರವನ್ನು ನೀಡುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿ ಇರುವಂತಹ ಆ್ಯಂಟಿ-ಆಕ್ಸಿಡೆಂಟ್ಗಳು ಒತ್ತಡದ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ನೆನಪಿನ ಶಕ್ತಿ ಚುರುಕುಗೊಳಿಸುವ ಕೆಲಸ ಮಾಡುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ಗಳು ಮತ್ತು ಪ್ರೋಟೀನ್ಗಳಲ್ಲದೆ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್ ಕೂಡ ಇದೆ. ಈ ಎಲ್ಲಾ ಅಂಶಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಕೊತ್ತಂಬರಿ ಸೊಪ್ಪನ್ನು ಸೇವಿಸಿದರೆ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ಕೊತ್ತಂಬರಿ ಸೊಪ್ಪಿನ ನಿಯಮಿತ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದಂತಹ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿ ಇದ್ದಾಗ, ಸೋಂಕಿನ ಅಪಾಯವೂ ಕಡಿಮೆಯಾಗುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿವೆ, ಇದು ಹೊಟ್ಟೆಯ ಸೋಂಕಿನಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪು ಮೂತ್ರದ ಸೋಂಕಿನಿಂದ ರಕ್ಷಿಸಲು ಸಹ ಕೆಲಸ ಮಾಡುತ್ತದೆ .