ಭದ್ರ ಮಹಾಪುರುಷ ರಾಜಯೋಗ ನಿರ್ಮಾಣಕ್ಕೆ ಕ್ಷಣಗಣನೆ ಆರಂಭ, 3 ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಡೇಸ್ ಆರಂಭ!

Bhadra Mahapurusha Rajayog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೂ ಕೆಲವೆ ಗಂಟೆಗಳಲ್ಲಿ ಕನ್ಯಾ ರಾಶಿಗೆ ಬುಧನ ಸಂಕ್ರಮಣ ನೆರವೇರಲಿದೆ. ಇದರಿಂದ ಕನ್ಯಾ ರಾಶಿಯಲ್ಲಿ ಭದ್ರಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ. ಈ ಯೋಗ 3 ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಈ ಜನರ ಜೀವನದಲ್ಲಿ ಗೋಲ್ಡನ್ ಡೇಸ್ ಆರಂಭಗೊಳ್ಳಲಿದ್ದು, ಅಪಾರ ಧನಲಾಭ ಪ್ರಾಪ್ತಿಯಾಗಲಿದೆ (Spiritual News In Kannada). 
 

ಬೆಂಗಳೂರು: ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ಓರ್ವ ವ್ಯಕ್ತಿಯ ಜಾತಕದಲ್ಲಿ ಶುಭ ಯೋಗವು ರೂಪುಗೊಳ್ಳುತ್ತಿದ್ದರೆ, ಅದು ವ್ಯಕ್ತಿಯ ಜೀವನದಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ನಮ್ಮ ಕರ್ಮಕ್ಕನುಗುಣವಾಗಿ ಜೀವನದಲ್ಲಿ ಸುಖ-ದುಃಖ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ, ಒಳ್ಳೆಯ ಕೆಲಸ ಮಾಡುವ ಜನರು ಜಾತಕದಲ್ಲಿ ಶುಭ ಯೋಗ ನಿರ್ಮಾಣಗೊಳ್ಳುವುದನ್ನು ನಾವು ನೋಡಬಹುದು (Spiritual News In Kannada), ಪ್ರಸ್ತುತ ಕೆಲ ರಾಶಿಗಳ ಜನರ ಜಾತಕದಲ್ಲಿ ಭದ್ರ ಮಹಾಪುರುಷ ರಾಜಯೋಗ ನಿರ್ಮಾಣಗೊಳ್ಳುತ್ತಿದೆ, ಏಕೆಂದರೆ, ಬುಧ ಗ್ರಹವು ಜಾತಕದಲ್ಲಿ ತನ್ನ ಸ್ವರಾಶಿ ಅಂದರೆ ಕನ್ಯಾರಾಶಿ ಅಥವಾ ಮಿಥುನ ರಾಶಿಯಲ್ಲಿ ಇದ್ದಾಗ, ಈ ಭದ್ರ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ. ಶಾಸ್ತ್ರಗಳ ಪ್ರಕಾರ, ಬುಧನು ತನ್ನ ಸ್ವಂತ ರಾಶಿಯಲ್ಲಿ ಮೊದಲ, ನಾಲ್ಕನೇ, ಏಳನೇ ಮತ್ತು ಹತ್ತನೇ ಮನೆಯಲ್ಲಿದ್ದಾಗ, ಭದ್ರ ಯೋಗವು ರೂಪುಗೊಳ್ಳುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ಬುಧವು ತನ್ನದೇ ಆದ ರಾಶಿಯಲ್ಲಿದ್ದಾಗ ಮತ್ತು ಚಂದ್ರನ ಜಾತಕದಲ್ಲಿ ಮೊದಲ, ನಾಲ್ಕನೇ, ಏಳನೇ ಮತ್ತು ಹತ್ತನೇ ಮನೆಯಲ್ಲಿದ್ದಾಗ, ಆಗಲೂ ಕೂಡ ಭದ್ರ ಯೋಗವು ರೂಪುಗೊಳ್ಳುತ್ತದೆ. ಭದ್ರ ಯೋಗವು ವ್ಯಕ್ತಿಯ ಹೆಸರಿಗೆ ತಕ್ಕಂತೆ ಫಲಿತಾಂಶಗಳನ್ನು ನೀಡುತ್ತದೆ. ಈ ಯೋಗವನ್ನು ಬಹಳ ಅಪರೂಪವೆಂದು ಪರಿಗಣಿಸಲಾಗಿದೆ ಏಕೆಂದರೆ ಕೆಲವೇ ಜನರು ತಮ್ಮ ಜಾತಕದಲ್ಲಿ ಭದ್ರ ಯೋಗವನ್ನು ಹೊಂದಿರುತ್ತಾರೆ. ಇನ್ನೂ ಕೆಲವೇ ಗಂಟೆಗಳಲ್ಲಿ ಈ ಭದ್ರ ಯೋಗ ಅಥವಾ ಭದ್ರ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತಿದೆ, ಇದು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನು ಬೀರಲಿದೆ. ಆದರೆ ಮೂರು ರಾಶಿಗಳ ಜನರ ಮೇಲೆ ಇದರ ಪ್ರಭಾವ ವಿಶೇಷವಾಗಿಯಲಿದೆ. ಬನ್ನಿ ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-ಅಕ್ಟೋಬರ್ 30 ರಂದು ಅಂತ್ಯವಾಗಲಿದೆ ಗುರು-ಚಾಂಡಾಲ ಯೋಗದ ಪ್ರಭಾವ, 4 ರಾಶಿಗಳ ಜನರಿಗೆ ಭರಪೂರ ಲಾಭ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ ಮತ್ತು ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣವು ಅವರ ಆಕರ್ಷಣೆಯನ್ನು ಹೆಚ್ಚಿಸಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಏನಾದರೂ ದೊಡ್ಡ ಸಾಧನೆ ಮಾಡುವ ಸಾಮರ್ಥ್ಯವನ್ನು ಪಡೆಯುವಿರಿ. ಈ ಸಂಚಾರದ ಮಂಗಳಕರ ಪರಿಣಾಮದಿಂದ, ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದೇ ವೇಳೆಲ್ಲಿ, ಉದ್ಯಮಿಗಳು ಈ ಅವಧಿಯಲ್ಲಿ  ದೊಡ್ಡ ಲಾಭವನ್ನು ಗಳಿಸುವ ಅವಕಾಶವನ್ನು ಪಡೆಯುವ ಸಾಧ್ಯತೆ ಇದೇ. ನಿಮ್ಮ ಮನೆಯಲ್ಲಿ ಒಂದು ಶುಭ ಕಾರ್ಯಕ್ರಮವನ್ನು ಆಯೋಜಿಸಬಹುದು ಮತ್ತು ನಿಮ್ಮ ತಾಯಿಯೊಂದಿಗಿನ ನಿಮ್ಮ ಸಂಬಂಧವೂ ಸುಧಾರಿಸುತ್ತದೆ. ಬುಧವು ನಿಮ್ಮ ಹತ್ತನೇ ಮನೆಯನ್ನು ನೋಡುತ್ತಿರುವುದರಿಂದ ನಿಮ್ಮ ವೃತ್ತಿಜೀವನದಲ್ಲಿ ತ್ವರಿತ ಪ್ರಗತಿಯ ಸಾಧ್ಯತೆಯಿದೆ.  

2 /5

ಕನ್ಯಾರಾಶಿ: ಕನ್ಯಾ ರಾಶಿಯವರಿಗೆ ಅವರ ಲಗ್ನ ಭಾವದಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಕನ್ಯಾರಾಶಿಯಲ್ಲಿ ಬುಧ ಸಂಕ್ರಮಿಸಿದಾಗ, ಈ ರಾಶಿಯ ಜನರ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯಗಳು ಸುಧಾರಿಸುತ್ತವೆ. ಅದೇ ಸಮಯದಲ್ಲಿ, ಕನ್ಯಾ ರಾಶಿಯ ಉದ್ಯಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಸಂಚಾರದ ಸಮಯದಲ್ಲಿ, ನಿಮ್ಮ ವ್ಯವಹಾರದಲ್ಲಿ ಕೆಲ ಯೋಜನೆಗಳನ್ನು ಮಾಡಲಿದ್ದು, ಅದರ ಸಹಾಯದಿಂದ ನೀವು ಉತ್ತಮ ಲಾಭವನ್ನು ಗಳಿಸುವ ಅವಕಾಶವನ್ನು ಪಡೆಯುವಿರಿ. ಈ ಸಾಗಣೆಯ ಸಮಯದಲ್ಲಿ ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಜನರು ಸಹ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ನೀವು ಅಥ್ಲೀಟ್ ಆಗಿದ್ದರೆ ಮತ್ತು ನಿಮ್ಮ ಜಾತಕದಲ್ಲಿ ಬುಧನು ಮಂಗಳಕರ ಸ್ಥಾನದಲ್ಲಿದ್ದರೆ, ಈ ಸಮಯವು ನಿಮ್ಮ ವೃತ್ತಿಜೀವನಕ್ಕೆ ಬಹಳ ಫಲಪ್ರದವಾಗಿರುತ್ತದೆ.  

3 /5

ಧನು ರಾಶಿ: ಕನ್ಯಾರಾಶಿಯ ಸಂಕ್ರಮಣ ಮತ್ತು ಭದ್ರ ಯೋಗದ ನಿರ್ಮಾಣದ  ಸಮಯದಲ್ಲಿ ಬುಧ, ಧನು ರಾಶಿಯ ಹತ್ತನೇ ಮನೆಯಲ್ಲಿ ಇರುತ್ತಾನೆ. ನಟರು, ಕಲಾವಿದರು, ಕ್ರೀಡಾಪಟುಗಳು ಮತ್ತು ಉದ್ಯಮಿಗಳಿಗೆ ಈ ಸಮಯವು ತುಂಬಾ ಒಳ್ಳೆಯದಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹಣ ಮತ್ತು ಖ್ಯಾತಿಯನ್ನು ಗಳಿಸುವಿರಿ. ನಿಮ್ಮ ಜಾತಕದಲ್ಲಿ ಗುರುವು ಮಂಗಳಕರ ಸ್ಥಾನದಲ್ಲಿ ನೆಲೆಗೊಂಡಿದ್ದರೆ ಮತ್ತು ಜಾತಕದಲ್ಲಿ ಬೇರೆ ಯಾವುದೇ ಯೋಗವು ಸಹ ರೂಪುಗೊಳ್ಳುತ್ತಿದ್ದರೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಸಾಕಷ್ಟು ಹೆಸರನ್ನು ಗಳಿಸುವ ಅವಕಾಶವನ್ನು ಪಡೆಯುವಿರಿ.  

4 /5

ಭದ್ರ ಯೋಗದ ಸಮಯದಲ್ಲಿ ಈ ಉಪಾಯಗಳನ್ನು ಮಾಡಿ: ನೀವು ಗಣೇಶನನ್ನು ಪೂಜಿಸಬೇಕು ಮತ್ತು ಕರಿಕೆ ಮತ್ತು ದೇಸಿ ತುಪ್ಪದಿಂದ ಮಾಡಿದ ಲಡ್ಡುಗಳನ್ನು ಅರ್ಪಿಸಬೇಕು. ಬುಧ ಗ್ರಹವನ್ನು ಮೆಚ್ಚಿಸಲು ಹವನವನ್ನು ಮಾಡಿ. ನಿಮ್ಮ ಕುಟುಂಬದ ಮಹಿಳೆಯರಿಗೆ ಬಟ್ಟೆ ಮತ್ತು ಹಸಿರು ಬಳೆಗಳನ್ನು ಉಡುಗೊರೆಯಾಗಿ ನೀಡಿ. ಕಿನ್ನರರ ಆಶೀರ್ವಾದ ಪಡೆಯಿರಿ. ಹಸುವಿಗೆ ಪ್ರತಿದಿನ ಮೇವು ತಿನ್ನಿಸಿ. ನೆನೆಸಿದ ಮೂಂಗ್ ದಾಲ್ ಅನ್ನು ಪಕ್ಷಿಗಳಿಗೆ, ಅದರಲ್ಲೂ ವಿಶೇಷವಾಗಿ ಪಾರಿವಾಳಗಳು ಮತ್ತು ಗಿಳಿಗಳಿಗೆ ತಿನ್ನಿಸಿ. ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಬುಧ ಯಂತ್ರವನ್ನು ಸ್ಥಾಪಿಸಿ ಮತ್ತು ಅದನ್ನು ಪ್ರತಿದಿನ ಪೂಜಿಸಿ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)