ರವಿಚಂದ್ರನ್ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಈ ನಟಿಯರ ಪೈಕಿ ಒಬ್ಬರನ್ನು ರವಿಚಂದ್ರನ್ ಬಹಳವಾಗಿ ಪ್ರೀತಿಸುತ್ತಿದ್ದರಂತೆ.
ಬೆಂಗಳೂರು :ಪ್ರೀತಿಗೆ ಇನ್ನೊಂದು ಹೆಸರೇ ರವಿಚಂದ್ರನ್. ರವಿಚಂದ್ರನ್ ಅಂದರೆ ಉಲ್ಲಾಸ, ಉತ್ಸಾಹದ ಚಿಲುಮೆ. ಇವರ ಚಿತ್ರದಲ್ಲಿ ಪ್ರೀತಿ, ಪ್ರೇಮ, ಪ್ರಣಯಕ್ಕೆ ವಿಶೇಷ ಆದ್ಯತೆ. ಇಷ್ಟಿದ್ದರೂ ರವಿಚಂದ್ರನ ನಿಜ ಜೀವನದಲ್ಲಿ ಆಗಿದ್ದು, ಅರೆಂಜ್ ಮ್ಯಾರೇಜ್. ಹೌದು, ಎಲ್ಲರಿಗೂ ತಿಳಿದಿರುವಂತೆ ರವಿಚಂದ್ರನ್ ಪತ್ನಿ
ಸುಮತಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರವಿಚಂದ್ರನ್ ತಂದೆ ಎನ್. ರಾಸ್ವಾಮಿ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ. ಹಾಗಾಗಿ ಕ್ರೇಜಿಸ್ಟಾರ್ ಚಿತ್ರರಂಗಕ್ಕೆ ಕಾಲಿಡುವುದು ಕಷ್ಟವಾಗಲಿಲ್ಲ. ಸಿನಿಮಾದ ಗೀಳು ಇಲ್ಲಿಂದಲೇ ಶುರುವಾಗಿದ್ದು ಎಂದರೂ ತಪ್ಪಲ್ಲ.
ರವಿಚಂದ್ರನ್ ಪತ್ನಿ ಸುಮತಿ.ತನ್ನ ಬದುಕಿನ ಏಳು ಬೀಳುಗಳಲ್ಲಿ ಜೊತೆ ನಿಂತ ಪತ್ನಿ ಬಗ್ಗೆಯೂ ರವಿಚಂದ್ರನ್ ಬಹಳ ಹೆಮ್ಮೆಯಾಗುತ್ತಾರೆ. ತನ್ನ ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದ ಪತ್ನಿ ಸುಮತಿ ಬಗ್ಗೆ ವಿಶೇಷ ಗೌರವ, ಪ್ರೀತಿ ಇದೆ.
ರವಿಚಂದ್ರನ್ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಈ ನಟಿಯರ ಪೈಕಿ ಒಬ್ಬರನ್ನು ರವಿಚಂದ್ರನ್ ಬಹಳವಾಗಿ ಪ್ರೀತಿಸುತ್ತಿದ್ದರಂತೆ.
ಆದರೆ ರವಿಚಂದ್ರನ್ ತಂದೆ ಅದಾಗಲೇ ಸುಮತಿ ಅವರನ್ನು ರವಿಚಂದ್ರನ್ ಗೆ ತಂದುಕೊಳ್ಳುವ ಬಗ್ಗೆ ನಿರ್ಧಾರ ಮಾಡಿ ಆಗಿತ್ತಂತೆ.ಈ ಮಧ್ಯೆ ತನ್ನ ಪ್ರೀತಿಯ ಮಾತು ತಂದೆಗೆ ಹೇಳಿ ಮನಸ್ಸು ನೋಯಿಸಬಾರದು ಎಂದು ಸುಮ್ಮನಾದ್ರಂತೆ ರವಿಮಾಮ.
ಅಪ್ಪ ತನಗೆ ನೀಡಿದ ಪ್ರೀತಿ ದೊಡ್ಡದು. ಅವರ ಪ್ರೀತಿ ಮುಂದೆ ತನ್ನ ಪ್ರೀತಿ ಏನೂ ಅಲ್ಲ ಅಂದುಕೊಂಡು ತನ್ನ ಪ್ರೀತಿ ಬಗ್ಗೆ ಬಾಯಿ ಬಿಡಲೇ ಇಲ್ಲವಂತೆ. ಈ ವಿಚಾರವನ್ನು ರವಿಚಂದ್ರನ್ ಅನೇಕ ಬಾರಿ ಹೇಳಿಕೊಂಡಿದ್ದಾರೆ.