Indian Cricket : ಕ್ರಿಕೆಟ್ ನಂತರ ರಾಜಕೀಯದಲ್ಲಿ ಮಿಂಚಿದ ಭಾರತದ ಈ 5 ಆಟಗಾರರು..!

ಕೆಲ ಆಟಗಾರರು ಕ್ರಿಕೆಟ್ ನಂತರ ರಾಜಕೀಯಕ್ಕೆ ಸೇರಿದ 5 ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಕ್ರೀಡೆ ಕ್ರಿಕೆಟ್, ಇಂದಿನ ಕಾಲದಲ್ಲಿ, ಕ್ರಿಕೆಟಿಗರು ನಿವೃತ್ತಿಯ ನಂತರ ಕ್ರಿಕೆಟ್ ಕಾಮೆಂಟರಿ ಅಥವಾ ಕೋಚ್ ಪಾತ್ರದಲ್ಲಿ ಮುಂದುವರೆಯುತ್ತಾರೆ. ಹಾಗೆ ಕೆಲ ಆಟಗಾರರು ಕ್ರಿಕೆಟ್ ನಂತರ ರಾಜಕೀಯಕ್ಕೆ ಸೇರಿದ 5 ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

 

1 /5

ಟೀಂ ಇಂಡಿಯಾದ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಹರ್ಭಜನ್ ಸಿಂಗ್ ಇತ್ತೀಚೆಗೆ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಹರ್ಭಜನ್ ಸಿಂಗ್ ಜುಲೈ 18, 2022 ರಂದು ಆಮ್ ಆದ್ಮಿ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹರ್ಭಜನ್ ಸಿಂಗ್ ಭಾರತದ ಪರ ಒಟ್ಟು 103 ಟೆಸ್ಟ್ ಪಂದ್ಯಗಳು, 236 ODIಗಳು ಮತ್ತು 28 ಟಿ20 ಪಂದ್ಯಗಳನ್ನು ಆಡಿದ್ದಾರೆ.

2 /5

2007 ರ ಟಿ 20 ವಿಶ್ವಕಪ್ ಮತ್ತು 2011 ರ ವಿಶ್ವಕಪ್‌ನ ಭಾಗವಾಗಿದ್ದ ಲೆಜೆಂಡರಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ 2019 ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಗಂಭೀರ್ ಭಾರತೀಯ ಜನತಾ ಪಕ್ಷದ ಲೋಕಸಭಾ ಸಂಸದರಾಗಿದ್ದಾರೆ.

3 /5

ಮನೋಜ್ ತಿವಾರಿ ಭಾರತೀಯ ತಂಡದಲ್ಲಿ ಹೆಚ್ಚು ಯಶಸ್ವಿಯಾಗಲಿಲ್ಲ, ಆದರೆ ರಾಜಕೀಯದಲ್ಲಿ ಅವರ ವೃತ್ತಿಜೀವನವು ಉತ್ತಮವಾಗಿ ಸಾಗುತ್ತಿದೆ. ಮನೋಜ್ ತಿವಾರಿ ಪ್ರಸ್ತುತ ಬಂಗಾಳ ಸರ್ಕಾರದಲ್ಲಿ ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

4 /5

ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 2009 ರಲ್ಲಿ ಕಾಂಗ್ರೆಸ್ ನಿಂದ ಲೋಕಸಭೆ ಚುನಾವಣೆಯೊಂದಿಗೆ ರಾಜಕೀಯ ಪ್ರವೇಶಿಸಿದರು. ಅಜರುದ್ದೀನ್ ಭಾರತದ ಪರ 99 ಟೆಸ್ಟ್ ಮತ್ತು 334 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

5 /5

1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಆಲ್ ರೌಂಡರ್ ಕೀರ್ತಿ ಆಜಾದ್ ಕೂಡ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೀರ್ತಿ ಆಜಾದ್ ಅವರ ತಂದೆ ಭಗವತ್ ಝಾ ಆಜಾದ್ ಕೂಡ ರಾಜಕೀಯ ನಾಯಕರು. ಕೀರ್ತಿ ಆಜಾದ್ ಪ್ರಸ್ತುತ TMC ಪಕ್ಷದ ಜೊತೆ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ.