CSIR Research: ಈ ಎರಡು Blood Group ಹೊಂದಿರುವ ಜನರಿಗೆ ಕೊರೊನಾ ಸೋಂಕಿನ ಅಪಾಯ ಹೆಚ್ಚು

CSIR Research: ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೇ CSIR ಸಂಶೋಧನಾ ವರದಿಯೊಂದು ಬೆಳಕಿಗೆ ಬಂದಿದೆ. ಈ ವರದಿಯಲ್ಲಿ ಉಳಿದ ಎಲ್ಲ ಬ್ಲಡ್ ಗ್ರೂಪ್ ಗೆ ಹೋಲಿಸಿದರೆ AB ಹಾಗೂ B ಬ್ಲಡ್ ಗ್ರೂಪ್ ಹೊಂದಿರುವ ಹಣರು ಹೆಚ್ಚು ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ ಎಂದು ಹೇಳಿದೆ.

ವದೆಹಲಿ: CSIR Research - ಕೊರೊನಾ ವೈರಸ್ (Coronavirus) ಗೆ ಸಂಬಂಧಿಸಿದಂತೆ ದೇಶದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಪ್ರಕಟಗೊಂಡ ಅಂಕಿ-ಅಂಶಗಳು ಭೀತಿ ಹುಟ್ಟಿಸುವಂತಿವೆ. ಇನ್ನೊಂದೆಡೆ ಎಂದಿನಿಂದ ಈ ಮಹಾಮಾರಿಯ ಪ್ರಕೋಪ ಆರಂಭಗೊಂಡಿದೆಯೋ ಅಂದಿನಿಂದಲೇ  ಮಾಹಾಮಾರಿಗೆ ಸಂಬಂಧಿಸಿದಂತೆ ಸಂಶೋಧನೆ ಹಾಗೂ ಅಧ್ಯನಗಳು ಕೂಡ ಮುಂದುವರೆದಿವೆ. ಈ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಯಾವ ಜನರಿಗೆ ಈ ಸೋಂಕು ತಗಲುವ ಸಾಧ್ಯತೆ ಇದೆ ಎಂಬ ಅಂಶವೂ ಶಾಮೀಲಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಕೂಡ ಈ ಕುರಿತು ಒಂದು ಅಧ್ಯಯನ ನಡೆಸಿದ್ದು, ಇತರ ಬ್ಲಡ್ ಗ್ರೂಪ್ ಗಳಿಗೆ ಹೋಲಿಸಿದರೆ AB ಹಾಗೂ B ಬ್ಲಡ್ ಗ್ರೂಪ್ ಗಳನ್ನು (Blood Group)ಹೊಂದಿರುವವರಿಗೆ ಈ ಸೋಂಕಿನ ಪ್ರಭಾವಕ್ಕೆ ಬೇಗ ಒಳಗಾಗುತ್ತಾರೆ ಎಂದಿದೆ.

 

ಇದನ್ನೂ ಓದಿ- Good News: ವ್ಯಾಕ್ಸಿನ್ ಹಾಕಿಸಿಕೊಂಡ್ರಾ? ಇಲ್ಲ ಎಂದಾದರೆ ಮೊದಲು ಈ ಮಾಹಿತಿ ತಿಳಿದುಕೊಂಡು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /8

1. ಸಕ್ರೀಯ ಪ್ರಕರಣಗಳಲ್ಲಿ ಇಳಿಕೆ -ಆದರೆ ದೇಶಾದ್ಯಂತ ಕೊವಿಡ್ ರಿಕವರಿ ರೇಟ್ ಮತ್ತೆ ಹೆಚ್ಚಾಗುತ್ತಿರುವುದು ಒಂದು ನೆಮ್ಮದಿ ನೀಡುವ ಸಂಗತಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ 25 ಸಾವಿರಗಳಷ್ಟು ಇಳಿಕೆಯಾಗಿದೆ.

2 /8

2. ಆತಂಕ ವ್ಯಕ್ತಪಡಿಸಿದ WHO - ಕೊವಿಡ್ (Covid-19) ನಿಂದ ಸಂಭವಿಸುತ್ತಿರುವ ಸಾವುಗಳು ಹಾಗೂ ಅವುಗಳ ಅಂತ್ಯಸಂಸ್ಕಾರದ ಕುರಿತು ಪ್ರಕಟಗೊಳ್ಳುತ್ತಿರುವ ವರದಿಗಳ ಮಧ್ಯೆಯೇ, ವಿಶ್ವ ಆರೋಗ್ಯ ಸಂಸ್ಥೆ ಕೊವಿಡ್ ಸಾವಿನ ಸಂಖ್ಯೆಗಳ ಕುರಿತು ಆತಂಕ ಹೊರಹಾಕಿದೆ. ವಿಶ್ವ ಆರೋಗ್ಯ ಸಂಘಟನೆಯ ಪ್ರಮುಖ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, ಸರ್ಕಾರ ಕೊವಿಡ್-19 ನಿಂದ ಸಂಭವಿಸುತ್ತಿರುವ ಸಾವುಗಳ ನಿಖರ ಸಂಖ್ಯೆಯ ಮಾಹಿತಿ ನೀಡಬೇಕು ಎಂದಿದ್ದಾರೆ.

3 /8

3.ನದಿಗಳಲ್ಲಿ ಹರಿದಾಡುತ್ತಿವೆ ಶವಗಳು - ದೇಶದಲ್ಲಿ ತನ್ನ ರೌದ್ರನರ್ತನ ಮುಂದುವರೆಸಿರುವ ಕೊವಿಡ್ -19 ಎರಡನೇ ಅಲೆಯ ಹಿನ್ನೆಲೆ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಆಸ್ಪತ್ರೆಗಳಲ್ಲಿ ಜಾಗ ಇಲ್ಲ. ಇನ್ನೊಂದೆಡೆ ಆಕ್ಸಿಜನ್ ಹಾಗೂ ವ್ಯಾಕ್ಸಿನ್ ಕೊರತೆ ಕೂಡ ಎದುರಾಗಿದೆ. ಹಗಲು-ರಾತ್ರಿ ಎನ್ನದೆ ಚಿತೆಗಳು ಹೊತ್ತಿ ಉರಿಯುತ್ತಿವೆ. ಪರಿಸ್ಥಿತಿ ಯಾವ ರೀತಿ ಇದೆ ಎಂದರೆ ಇದೀಗ ನದಿಗಳಲ್ಲಿಯೂ ಕೂಡ ಶವಗಳು ತೆಲಾಡುತ್ತಿರುವುದು ಕಂಡುಬರುತ್ತಿದೆ. ಯುಪಿ ಮತ್ತು ಬಿಹಾರ ರಾಜ್ಯಗಳಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

4 /8

4. ದೊಡ್ಡ ಪ್ರಮಾಣದಲ್ಲಿ ಸರ್ವೇ ಕಾರ್ಯ ನಡೆಯಬೇಕಿದೆ - CSIR ನಡೆಸಿರುವ ಸಮೀಕ್ಷೆ ಕುರಿತು ಮಾತನಾಡಿರುವ ಹಿರಿಯ ಫಿಸಿಸಿಯನ್ ಡಾ. ಎಸ್.ಕೆ.ಕಾಲರಾ, 'ಇದು ಕೇವಲ ಸಮೀಕ್ಷೆಯ ಒಂದು ನಮೂನೆಯಾಗಿದ್ದು, ಇದು ಸೈಂಟಿಫಿಕ್ ರಿಸರ್ಚ್ ಪೇಪರ್ ಅಲ್ಲ. ಆದ್ದರಿಂದ ವೈಜ್ಞಾನಿಕ ತಿಳುವಳಿಕೆಯಿಲ್ಲದೆ ವಿವಿಧ ರಕ್ತ ಗುಂಪುಗಳ ಜನರಲ್ಲಿ ಸೋಂಕಿನ ಪ್ರಮಾಣವನ್ನು ಹೇಗೆ ನಿರ್ಧರಿಸಲು ಸಾಧ್ಯ. 'ಓ' ರಕ್ತ ಗುಂಪಿನ ಜನರು ಸೋಂಕಿನ ವಿರುದ್ಧ ಹೋರಾಡಲು ಉತ್ತಮ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಹೇಳುವುದರಲ್ಲಿ ಅವಸರ ಬೇಡ.  ಆದ್ದರಿಂದ ಇದಕ್ಕಾಗಿ ದೊಡ್ಡ ಪ್ರಮಾಣದ ಸಮೀಕ್ಷೆ ನಡೆಸಬೇಕು' ಎಂದಿದ್ದಾರೆ.  

5 /8

5. ಸೋಂಕಿತರಲ್ಲಿ AB ರಕ್ತ ಗುಂಪು ಹೊಂದಿದವರು ಹೆಚ್ಚಿನ ಜನರಿದ್ದಾರೆ - ಈ ಕಿರು ಸಮೀಕ್ಷೆಯ ಪ್ರಕಾರ ಕೊರೊನಾ ಸೊಂಕಿತರಾದವರಲ್ಲಿ ಹೆಚ್ಚಿನವರು AB ರಕ್ತದ ಗುಂಪು ಹೊಂದಿದವರಾಗಿದ್ದಾರೆ. ಇವರ ಬಳಿಕ ಕೊರೊನಾ ಸೋಂಕಿಗೆ ಗುರಿಯಾದ ಇತರ ಜನರಲ್ಲಿ B ರಕ್ತದ ಗುಂಪು ಹೊಂದಿದವರು ಜಾಸ್ತಿಯಾಗಿದ್ದಾರೆ.

6 /8

6. ಶಾಕಾಹಾರಿ ಊಟ ಸೋಂಕನ್ನು ತಡೆಯುತ್ತದೆ - ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ ಹೊಂದಿರುವ ಆಹಾರ ಆಂಟಿ-ಇನ್ಫ್ಲೇಮೇಟರಿ ಆಗಿರುತ್ತದೆ. ಇದು ದೇಹದ ಮೇಲಾಗುವ ಸೋಂಕಿನ ದಾಳಿಯನ್ನು ತಡೆಯುತ್ತದೆ. ಒಂದು ವೇಳೆ ವ್ಯಕ್ತಿ ಸೋಂಕಿಗೆ ಗುರಿಯಾದರೂ ಕೂಡ ಸೋಂಕಿನ ಅಪಾಯ ದೇಹದ ಮೇಲೆ ಕಡಿಮೆ ಇರುತ್ತದೆ.

7 /8

7. ನಾನ್-ವೆಜ್ ತಿನ್ನುವವರಲ್ಲಿ ಸೋಂಕಿನ ಅಪಾಯ ಹೆಚ್ಚು - ದೇಶಾದ್ಯಂತ ನಡೆದ ಸಿರೋಪಾಸಿಟಿವ್ ಸರ್ವೇ ಮೇಲೆ ಆಧರಿತವಾಗಿರುವ CSIRನ ಈ ವರದಿಯಲ್ಲಿ ಶಾಕಾಹಾರಿ ಊಟ ಮಾಡುವವರ ಹೋಲಿಕೆಯಲ್ಲಿ ಮಾಂಸಾಹಾರಿ ಊಟ ಮಾಡುವವರಲ್ಲಿ ಕೊವಿಡ್-19 ಸೋಂಕಿನ ಅಪಾಯ ಜಾಸ್ತಿಯಾಗಿದೆ ಎಂದು ಹೇಳಲಾಗಿದೆ. ಈ ಸಂಶೋಧನೆ ದೇಶಾದ್ಯಂತ ಸುಮಾರು 10 ಸಾವಿರ ಜನರಿಂದ ಪಡೆದ ಸ್ಯಾಂಪಲ್ ಮೇಲೆ ಆಧರಿಸಿದೆ. ಸುಮಾರು 140 ವೈದ್ಯರು ಇದರ ವಿಶ್ಲೇಷಣೆ ನಡೆಸಿದ್ದು, ಶಾಕಾಹಾರಿ ಊಟ ಮಾಡುವವರಲ್ಲಿ ನಾರಿನ ಅಂಶ ಜಾಸ್ತಿ ಇರುವ ಕಾರಣ ಅವರು ಕಡಿಮೆ ಸೋಂಕಿಗೆ ಗುರಿಯಾಗಿದ್ದಾರೆ ಎಂದು ಹೇಳಿದ್ದಾರೆ.

8 /8

8. 'O' ರಕ್ತದ ಗುಂಪು ಹೊದಿದವರಿಗೆ ಸೋಂಕಿನ ಅಪಾಯ ಕಡಿಮೆ - CSIR ತನ ವರದಿಯಲ್ಲಿ ಕೊರೊನಾ ಸೋಂಕಿನ ಅಪಾಯ ಕಡಿಮೆ ಇರುವ ರಕ್ತದ ಗುಂಪಿನ ಜನರ ಕುರಿತು ಕೂಡ ಮಾಹಿತಿ ನೀಡಿದೆ. ಸಂಶೋಧನೆಯ ಪ್ರಕಾರ, ಹೆಚ್ಚಿನ O ಬ್ಲಡ್ ಗ್ರೂಪ್ ಹೊಂದಿರುವ ಜನರು ಲಕ್ಷಣರಹಿತವಾಗಿದ್ದಾರೆ. ಒಂದು ವೇಳೆ ಅವರಲ್ಲಿ ಲಕ್ಷಣಗಳು ಇದ್ದರೂ ಕೂಡ ಅವು ಕಡಿಮೆ ತೀವ್ರತೆಯ ಲಕ್ಷಣಗಳಾಗಿವೆ ಎಂದು ಹೇಳಲಾಗಿದೆ.

You May Like

Sponsored by Taboola