Data Leak Alert...! 70 ಲಕ್ಷ ಬ್ಯಾಂಕ್ ಗ್ರಾಹಕರ ಖಾತೆ ಖಾಲಿ ಸಾಧ್ಯತೆ ಎಚ್ಚರ...!

Data Leak Alert...! 70 ಲಕ್ಷ ಬ್ಯಾಂಕ್ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ (Credit Card and Debit Card) ದತ್ತಾಂಶಗಳು ಆನ್ಲೈನ್ ನಲ್ಲಿ ಸೋರಿಕೆಯಾಗಿವೆ. 

  • Dec 12, 2020, 10:59 AM IST

Data Leak Alert...! 70 ಲಕ್ಷ ಬ್ಯಾಂಕ್ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ (Credit Card and Debit Card) ದತ್ತಾಂಶಗಳು ಆನ್ಲೈನ್ ನಲ್ಲಿ ಸೋರಿಕೆಯಾಗಿವೆ. ಡಾರ್ಕ್ ವೆಬ್ (Dark Web) ಮೇಲೆ ಈ ಡೇಟಾ ಲೀಕ್ ಮಾಡಲಾಗಿದೆ . ಮಾಧ್ಯಮ ವರದಿಗಳ ಪ್ರಕಾರ ಇಂಟರ್ನೆಟ್ ಸಿಕ್ಯೋರಿಟಿ ವರದಿ ಪ್ರಕಾರ ಇಂಟರ್ನೆಟ್ ಸಿಕ್ಯೋರಿಟಿ ಸಂಶೋಧಕ ರಾಜಶೇಖರ್ ರಜಾಹರಿಯಾ ಹೇಳುವಂತೆ ಲೀಕ್ ಮಾಡಲಾಗಿರುವ ಮಾಹಿತಿಗಳಲ್ಲಿ  User Name, Phone Number ನಿಂದ ಹಿಡಿದು ವಾರ್ಷಿಕ ಆದಾಯ ಕೂಡ ಶಾಮೀಲಾಗಿದೆ ಎನ್ನಲಾಗಿದೆ.

 

ಇದನ್ನು ಓದಿ- ALERT...! ನೀವೂ Income Tax Fake Noticeಗೆ ಬಲಿಯಾಗಿದ್ದೀರಾ? ಹೀಗೆ ಪರಿಶೀಲಿಸಿ

1 /6

ಸೋರಿಕೆಯಾದ ದತ್ತಾಂಶಗಳಲ್ಲಿ ಇಮೇಲ್ ಐಡಿ, ವೈಯಕ್ತಿಕ ಮಾಹಿತಿ, ವಾರ್ಷಿಕ ಗಳಿಕೆ ಸೇರಿದಂತೆ ಅನೇಕ ವೈಯಕ್ತಿಕ ಮಾಹಿತಿಯನ್ನು ಇದು ಒಳಗೊಂಡಿದೆ. ಲೀಕ್ ಆಗಿರುವ ದತ್ತಾಂಶಗಳ ಗಾತ್ರ 2ಜಿಬಿ ಗಳಷ್ಟಿದೆ. ಇದರಲ್ಲಿ ಯಾವ ರೀತಿಯ ಬ್ಯಾಂಕ್ ಖಾತೆ ಇದೆ ಮತ್ತು ಮೊಬೈಲ್ ಅಲರ್ಟ್ ಸೌಲಭ್ಯವು ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆಯೆ? ಎಂಬೆಲ್ಲಾ ಸಂಗತಿಗಳನ್ನು ತಿಳಿಸಲಾಗಿದೆ.

2 /6

ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾದ ಡೇಟಾವು 2010 ರಿಂದ 2019 ರವರೆಗೆ ಮಾಹಿತಿ ಒಳಗೊಂಡಿದ್ದು,  ಇದನ್ನು ಹ್ಯಾಕರ್‌ಗಳು ಬಳಸುವ ಸಾಧ್ಯತೆ ಇದೆ. ಸೋರಿಕೆಯಾದ ವೈಯಕ್ತಿಕ ವಿವರಗಳನ್ನು ಬಳಸಿಕೊಂಡು ಫಿಶಿಂಗ್ ಅಥವಾ ಬೇರೆ ರೀತಿಯಲ್ಲಿ ಹ್ಯಾಕರ್‌ಗಳು ಕಾರ್ಡ್ ಹೊಂದಿರುವವರನ್ನು ಗುರಿಯಾಗಿಸಬಹುದು.

3 /6

ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಸೋರಿಕೆಯಾಗಿಲ್ಲ ಎನ್ನಲಾಗಿದೆ. ಆದರೆ , ಈ ಡೇಟಾವು ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರಿಂದ ಬಂದಿದೆ ಎಂದು ಹೇಳಲಾಗಿದೆ. ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳನ್ನು ಪೂರೈಸಲು ಬ್ಯಾಂಕ್ ಇವರೊಂದಿಗೆ ಒಪ್ಪಂದ ಮಾಡಿಕೊಂಡಿರಬಹುದು ಎನ್ನಲಾಗಿದೆ. ಸೋರಿಕೆಯಾದ ದತ್ತಾಂಶದಲ್ಲಿ ಸುಮಾರು 5 ಲಕ್ಷ ಗ್ರಾಹಕರ PAN Number ಕೂಡ ಸೇರಿದೆ.

4 /6

ಆದರೆ, 70 ಲಕ್ಷ ಬಳಕೆದಾರರ ಸೋರಿಕೆಯಾದ ಈ ಡೇಟಾ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭದ್ರತಾ ಸಂಶೋಧಕರು ಕೆಲವು ಬಳಕೆದಾರರ ಡೇಟಾವನ್ನು ಸಹ ಪರಿಶೀಲಿಸಿದ್ದಾರೆ, ಇದರಲ್ಲಿ ಹೆಚ್ಚಿನ ಮಾಹಿತಿಯು ನಿಖರವಾಗಿದೆ. ರಾಜಹ್ರಿಯಾ ಪ್ರಕಾರ - ಯಾರಾದರೂ ಈ ಡೇಟಾ / ಲಿಂಕ್ ಅನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಿದ್ದಾರೆ ಮತ್ತು ನಂತರ ಅದು ಸಾರ್ವಜನಿಕವಾಗಿದೆ ಎಂದಿದ್ದಾರೆ.

5 /6

ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾದ ಡೇಟಾವು ಆಕ್ಸಿಸ್ ಬ್ಯಾಂಕ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಭೆಲ್), ಕೆಲ್ಲಾಗ್‌ನ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಮೆಕೆಂಜಿ & ಕಂಪನಿಯ ಕೆಲವು ಉದ್ಯೋಗಿಗಳಿಗೆ ಸೇರಿದೆ.

6 /6

ವರದಿಗಳ ಪ್ರಕಾರ ಈ ನೌಕರರ ವಾರ್ಷಿಕ ಆದಾಯ 7 ಲಕ್ಷ ರೂ.ಗಳಿಂದ 75 ಲಕ್ಷ ರೂ.ಗಳಾಗಿದೆ ಎನ್ನಲಾಗಿದೆ.