Deepak Chahar Wife: ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನೇ ಮೀರಿಸುವ ದೀಪಕ್ ಚಹಾರ್ ಪತ್ನಿ!

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ದೀಪಕ್ ಚಹಾರ್ ಜೂನ್ 7ರಂದು ತನ್ನ ಗೆಳತಿ ಜಯಾ ಭಾರದ್ವಾಜ್ ಅವರನ್ನು ವಿವಾಹವಾದರು.

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ದೀಪಕ್ ಚಹಾರ್ ಜೂನ್ 7ರಂದು ತನ್ನ ಗೆಳತಿ ಜಯಾ ಭಾರದ್ವಾಜ್ ಅವರನ್ನು ವಿವಾಹವಾದರು. ದೀಪಕ್ ಮತ್ತು ಜಯಾ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಜಯಾ ಭಾರದ್ವಾಜ್ ಅವರ ಸೌಂದರ್ಯ ಯಾವ ಬಾಲಿವುಡ್ ನಟಿಗೂ ಕಡಿಮೆ ಇಲ್ಲ. ಇಬ್ಬರ ಪ್ರೇಮಕಥೆಯೂ ಯಾವ ಬಾಲಿವುಡ್ ಸಿನಿಮಾಗಿಂತಲೂ ಕಡಿಮೆಯಿಲ್ಲ. ಈ ಜೋಡಿಯ ಮತ್ತಷ್ಟು ಇಂಟರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜಯಾ ಭಾರದ್ವಾಜ್ ಲೈಮ್ ಲೈಟ್‍ನಿಂದ ದೂರ ಉಳಿದಿದ್ದಾರೆ. ಇವರು ದೆಹಲಿಯ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದೀಪಕ್ ಚಹಾರ್ ಅವರ ಸಹೋದರಿ ಮಾಲ್ತಿ ಚಹಾರ್ ಅವರು ಜಯಾರನ್ನು ದೀಪಕ್ ಭೇಟಿಯಾಗುವಂತೆ ಮಾಡಿದ್ದರು. ಜಯಾ ಅವರ ಸಹೋದರ ಸಿದ್ಧಾರ್ಥ್ ಭಾರದ್ವಾಜ್ ಒಬ್ಬ ನಟ ಮತ್ತು ಟಿವಿ ಶೋ ಬಿಗ್ ಬಾಸ್ ಮತ್ತು ಸ್ಪ್ಲಿಟ್ಸ್ವಿಲ್ಲಾದಲ್ಲಿ ಕಾಣಿಸಿಕೊಂಡಿದ್ದಾರೆ.

2 /5

ಐಪಿಎಲ್ 2021ರ ಸಂದರ್ಭದಲ್ಲಿ ದೀಪಕ್ ಚಹಾರ್ ಅವರು ಜಯಾ ಭಾರದ್ವಾಜ್‍ರಿಗೆ ಪ್ರಪೋಸ್ ಮಾಡಿದ್ದರು. ಆ ವೇಳೆ ಜಯಾ ಐಪಿಎಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಕುಳಿತಿದ್ದರು. ದೀಪಕ್ ಚಹಾರ್ ಎಲ್ಲರನ್ನು ಬೆರಗುಗೊಳಿಸುವ ಮೂಲಕ ಜಯಾರಿಗೆ ಕ್ರೀಡಾಂಗಣದಲ್ಲಿಯೇ ತಮ್ಮ ಲವ್ ಪ್ರಪೋಸಲ್ ನೀಡಿದ್ದರು.  

3 /5

ದೀಪಕ್ ಚಹಾರ್ ಮತ್ತು ಜಯಾ ಭಾರದ್ವಾಜ್ ಜೂನ್ 7ರಂದು ಆಗ್ರಾದಲ್ಲಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ದೀಪಕ್ ಚಹಾರ್ ಮತ್ತು ಜಯಾ ಭಾರದ್ವಾಜ್ ನಡುವಿನ ಸಂಬಂಧವು ದೀರ್ಘಕಾಲದವರೆಗೆ ಸುದ್ದಿಯಲ್ಲಿತ್ತು.   

4 /5

ಜಯಾ ಭಾರದ್ವಾಜ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ ಹಂಚಿಕೊಳ್ಳುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ದೀಪಕ್ ಚಹಾರ್ ಬೆಂಬಲಿಸಲು ಅವರು ಕ್ರಿಕೆಟ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ತೆರಳುತ್ತಾರೆ.

5 /5

ದೀಪಕ್ ಚಾಹರ್ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣಿತ ಆಟಗಾರ. ತಮ್ಮ ಆಲ್‍ರೌಂಡರ್‍ ಪ್ರದರ್ಶನದಿಂದ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.