ಹವಳ (Coral)

  • Nov 13, 2020, 09:03 AM IST
1 /6

ನವದೆಹಲಿ: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಕತ್ತಲಿನಿಂದ ಬೆಳಕಿನೆಡೆಗೆ ಕರೋದೊಯ್ಯುವ ಹಬ್ಬ. ದೀಪಾವಳಿಯ ಸಂದರ್ಭದಲ್ಲಿ ಜನರು ಲೋಹ ಅಥವಾ ಆಭರಣಗಳನ್ನು ಖರೀದಿಸುತ್ತಾರೆ ಏಕೆಂದರೆ ಈ ದಿನ ಖರೀದಿಸಿದ ಯಾವುದೇ ಅಮೂಲ್ಯ ವಸ್ತು ಮುಂಬರುವ ವರ್ಷದಲ್ಲಿ ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ರತ್ನದ ಕಲ್ಲುಗಳನ್ನು ಖರೀದಿಸುವುದನ್ನೂ ಸಹ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯು ಎಲ್ಲರ ಮೇಲೆ ತನ್ನ ಆಶೀರ್ವಾದವನ್ನು ಸುರಿಸುತ್ತಾಳೆ ಎಂಬ ನಂಬಿಕೆ ಇದೆ. ಕರೋನಾ ಪ್ರತಿಯೊಬ್ಬರ ಜೀವನದಲ್ಲೂ ಸಾಕಷ್ಟು ಅನಿಶ್ಚಿತತೆಯನ್ನು ತಂದೊಡ್ಡಿದೆ. ಅಂತಹ ಪರಿಸ್ಥಿತಿಯಲ್ಲಿ  ದೀಪಾವಳಿಯಂದು ಕೆಲವು ರತ್ನಗಳನ್ನು ಧರಿಸುವುದು ನಿಮಗೆ ಸೂಕ್ತವೆಂದು ಸಾಬೀತುಪಡಿಸಬಹುದು. ಈ ಹಬ್ಬದ ಋತುವಿನಲ್ಲಿ ನೀವು ಈ ರತ್ನಗಳನ್ನು ಸಹ ಧರಿಸಬಹುದು. ಇದು ನಿಮ್ಮ ಹಣಕಾಸಿನ ತೊಂದರೆಗಳನ್ನು ನಿವಾರಿಸುವುದರ ಜೊತೆಗೆ ನಿಮ್ಮ ಕುಟುಂಬ ಸದಾ ಸುಖ-ಶಾಂತಿಯಿಂದ ಉತ್ತಮ ಜೀವನ ನಡೆಸಲು ಸಹಕರಿಸುತ್ತದೆ ಎಂದು ಹಲವು ಜೋತಿಷಿಗಳು ಸಲಹೆ ನೀಡುತ್ತಾರೆ. ಅಂತಹ ಕೆಲವು ರತ್ನಗಳ ಬಗ್ಗೆ ಇಂದು ತಿಳಿಯೋಣ...

2 /6

ಕ್ರೈಸೊಬೆರಿಲ್ ಅಂದರೆ ವೈಡೂರ್ಯವನ್ನು ಕ್ಯಾಟ್ ಐ (Cat Eye) ಎಂದೂ ಕರೆಯುತ್ತಾರೆ. ಇದು ದುಷ್ಟಶಕ್ತಿಗಳು ಮತ್ತು ನಿಮ್ಮ ಮೇಲೆ ಯಾರ ಕೆಟ್ಟ ಕಣ್ಣೂ ಬೀಳದಂತೆ ನಿಮ್ಮನ್ನು ರಕ್ಷಿಸುತ್ತದೆ. ಇದನ್ನು ಧರಿಸಿದವರು ತಮ್ಮ ಸುತ್ತಲಿನ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯನ್ನು ತಪ್ಪಿಸಬಹುದು. ಕಳೆದುಹೋದ ಹಣವನ್ನು ಮತ್ತೆ ಪಡೆಯಲು ಬಯಸುವವರಿಗೆ ಅಥವಾ ಮುಳುಗಿಹೋಗಿರುವ  ವ್ಯವಹಾರವನ್ನು ಪುನರಾರಂಭಿಸಲು ಬಯಸುವವರಿಗೆ ಈ ಕಲ್ಲು ತುಂಬಾ ಪ್ರಯೋಜನಕಾರಿಯಾಗಿದೆ.

3 /6

ಹವಳವು ಜೀವನದಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಮಂಗಳ ದೋಷವನ್ನು ನಿವಾರಿಸಿ ದುಷ್ಟಶಕ್ತಿಯ ಪ್ರಭಾವವನ್ನು ತಡೆಯುವ ಶಕ್ತಿ ಹವಳಕ್ಕೂ ಇದೆ. ಈ ಕಲ್ಲು ಸ್ಮರಣೆಯನ್ನು ಬಲಪಡಿಸಲು ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4 /6

ಗೋಮೇಧದ ಗುಣಲಕ್ಷಣಗಳ ಬಗ್ಗೆ ಕೆಲವರಿಗೆ ತಿಳಿದಿರಬಹುದು. ನಿಮ್ಮ ಗುಪ್ತ ಶತ್ರುಗಳ ವಿರುದ್ಧ ಅದೃಶ್ಯ ಗುರಾಣಿಯಾಗುವ ಮೂಲಕ ಅನಗತ್ಯ ಒತ್ತಡಗಳನ್ನು ಕಡಿಮೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ರಾಜಕೀಯಕ್ಕೆ ಸೇರಲು ಸಿದ್ಧರಿರುವವರು ಅಥವಾ ತಮ್ಮ ವೃತ್ತಿಜೀವನದ ಬಗ್ಗೆ ತುಂಬಾ ಗಂಭೀರವಾಗಿರುವವರು ಇದನ್ನು ಧರಿಸಬಹುದು.

5 /6

ಕೆಲವರು ತುಂಬಾ ಭಾವುಕರಾಗಿರುತ್ತಾರೆ ಮತ್ತು ಎಂತಹದೇ ಸಂದರ್ಭದಲ್ಲಿಯೂ ಅವರ ಭಾವನೆಗಳನ್ನು ನಿಯಂತ್ರಿಸಲು ಸಹ ಸಾಧ್ಯವಿರುವುದಿಲ್ಲ. ಅಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಯಾರಿಗಾದರೂ ರೂಬಿ ಹರಳು ಸಹಾಯಕವಾಗಬಹುದು. ಈ ಸುಂದರವಾದ ಕಲ್ಲು ಧರಿಸಿದವರಿಗೆ ಭಾವನಾತ್ಮಕ ಶಕ್ತಿಯನ್ನು ಒದಗಿಸಲು ಇದು ಸಹಾಯ ಮಾಡುತ್ತದೆ. ಈ ಹರಳು ನಿಮ್ಮ ಜೀವನದ ಭಾಗ್ಯದ ಬಾಗಿಲನ್ನು ತೆರೆಯುವ ಮೂಲಕ ಸಂತೋಷದ ಭಾವನೆಯನ್ನು ಉತ್ತೇಜಿಸುತ್ತದೆ.

6 /6

ನೀಲ ಅತ್ಯಂತ ಪ್ರಮುಖವಾದ ಕಲ್ಲುಗಳಲ್ಲಿ ಒಂದಾಗಿದೆ. ಇದನ್ನು ಧರಿಸಿದವರಿಗೆ ಅವರ ಸ್ಥಿತಿ ಮತ್ತು ವ್ಯಕ್ತಿತ್ವದೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ. ಈ ಕಲ್ಲು ವೃತ್ತಿಪರ ಅಭಿವೃದ್ಧಿಯನ್ನು ಉತ್ತೇಜಿಸುವ ಗುಣಗಳನ್ನು ಹೊಂದಿದೆ ಮತ್ತು ಹೊಸ ಅವಕಾಶಗಳಿಗಾಗಿ ಬಾಗಿಲು ತೆರೆಯುತ್ತದೆ. ಶನಿಯ ಎಲ್ಲಾ ದುಷ್ಪರಿಣಾಮಗಳನ್ನು ಜೀವನದಿಂದ ತೆಗೆದುಹಾಕುವಲ್ಲಿ ನೀಲ ಪರಿಣಾಮಕಾರಿ ಎಂದು ಪಂಡಿತರು ಹೇಳುತ್ತಾರೆ. ಇದು ಸಂಬಂಧಿಕರ ನಡುವಿನ ಯಾವುದೇ ರೀತಿಯ ಉದ್ವೇಗವನ್ನು, ಮನಸ್ತಾಪವನ್ನು ನಿವಾರಿಸುತ್ತದೆ.