Smartphone Charging Common Mistakes: ರಾತ್ರಿಯಿಡೀ ಚಾರ್ಜ್ ಮಾಡುವುದರಿಂದ ಬ್ಯಾಟರಿಯು ಹೆಚ್ಚು ಚಾರ್ಜ್ ಆಗಬಹುದು. ಇದು ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಫೋನ್ ಬಿಸಿಯಾಗಬಹುದು, ಇದು ಸ್ಫೋಟದ ಅಪಾಯವನ್ನು ಹೆಚ್ಚಿಸುತ್ತದೆ.
ಸ್ಮಾರ್ಟ್ಫೋನ್ ಚಾರ್ಜಿಂಗ್ ಮಾಡುವಾಗ ಮಾಡುವ ಸಾಮಾನ್ಯ ತಪ್ಪುಗಳು: ಸ್ಮಾರ್ಟ್ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಫೋನ್ ಚಾರ್ಜ್ ಮಾಡದಿದ್ದರೆ ಜನರಿಗೆ ಚಟಪಟಿಕೆ ಶುರುವಾಗುತ್ತದೆ. ಫೋನ್ ಸ್ಫೋಟ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ಇದಕ್ಕೆ ಬ್ಯಾಟರಿ ಕಾರಣ. ಅನೇಕ ಸಣ್ಣ ತಪ್ಪುಗಳು ದೊಡ್ಡ ದುರ್ಘಟನೆಗೆ ಕಾರಣವಾಗುತ್ತವೆ. ಫೋನ್ ಚಾರ್ಜ್ ಮಾಡುವಾಗ ಮಾಡಬಾರದ 5 ತಪ್ಪುಗಳ ಬಗ್ಗೆ ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸ್ಮಾರ್ಟ್ಫೋನ್ ಬಳಸುವಾಗ ಬ್ಯಾಟರಿಯ ಮೇಲೆ ಹೆಚ್ಚುವರಿ ಒತ್ತಡವಿರುತ್ತದೆ. ಇದು ಬ್ಯಾಟರಿಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಫೋನ್ ಹೆಚ್ಚು ಬಿಸಿಯಾಗಬಹುದು, ಇದು ಚಾರ್ಜ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಮತ್ತು ಬ್ಯಾಟರಿಗೆ ಹಾನಿಯುಂಟು ಮಾಡಬಹುದು.
ರಾತ್ರಿಯಿಡೀ ಚಾರ್ಜ್ ಮಾಡುವುದರಿಂದ ಬ್ಯಾಟರಿಯು ಹೆಚ್ಚು ಚಾರ್ಜ್ ಆಗಬಹುದು. ಇದು ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಫೋನ್ ಬಿಸಿಯಾಗಬಹುದು, ಇದು ಸ್ಫೋಟದ ಅಪಾಯವನ್ನು ಹೆಚ್ಚಿಸುತ್ತದೆ.
ಅಧಿಕೃತವಲ್ಲದ ಚಾರ್ಜರ್ಗಳು ಭದ್ರತಾ ಮಾನದಂಡಗಳನ್ನು ಹೊಂದಿರುವದಿಲ್ಲ. ಒರಿಜಿನಲ್ ಚಾರ್ಜರ್ ಬದಲು ನೀವು ನಕಲಿ ಚಾರ್ಜರ್ ಬಳಸುವುದು ಫೋನ್ಗೆ ಹಾನಿಗೊಳಿಸುತ್ತದೆ. ಇದರಿಂದ ಬ್ಯಾಟರಿ ಬಿಸಿಯಾಗಬಹುದು, ಸ್ಫೋಟದ ಅಪಾಯವನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಜನರು ತಮ್ಮ ಫೋನ್ಗಳನ್ನು ಸುರಕ್ಷಿತವಾಗಿಡಲು ದಪ್ಪವಾದ ಕೇಸ್ಗಳನ್ನು ಬಳಸುತ್ತಾರೆ. ಇದರಿಂದ ಒಳಗಿರುವ ಬಿಸಿಗಾಳಿ ಹೊರ ಬರಲು ಸಾಧ್ಯವಾಗುವುದಿಲ್ಲ. ಇದರಿಂದಲೂ ಸಹ ಫೋನ್ ಸ್ಫೋಟವಾಗುವ ಸಾಧ್ಯತೆ ಇರುತ್ತದೆ.
ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗುವವರೆಗೂ ಬಿಡುವುದು ಬ್ಯಾಟರಿಯ ಆರೋಗ್ಯಕ್ಕೆ ಹಾನಿಕಾರಕ. ನಿಮ್ಮ ಫೋನ್ ಬ್ಯಾಟರಿ 20%- 80% ಚಾರ್ಜ್ ಆಗಿರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಖಾಲಿಯಾಗುವವರೆಗೆ ಬ್ಯಾಟರಿ ಬಿಟ್ಟರೆ ಅದರಿಂದ ತೊಂದರೆ ಉಂಟಾಗುತ್ತದೆ.