ಇಲ್ಲಿ ತರಗತಿ ಲೆವೆಲ್ ಹೆಚ್ಚಾಗುತ್ತಿದ್ದಂತೆ, ಹುಡುಗಿಯರ ಯೂನಿಫಾರ್ಮ್ ಗಾತ್ರ ಕಡಿಮೆಯಾಗುತ್ತೆ! ಇದೆಂಥಾ ಸ್ಕೂಲ್ ಮಾರ್ರೇ??

Japanese School Girls Short Skirts:​ ಶಾಲೆಗಳೆಂದರೆ ಸಾಕು ಅಲ್ಲಿ ನಿಯಮಗಳು ಕಟ್ಟುನಿಟ್ಟಾಗಿರುತ್ತವೆ. ಆದರೆ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ನಿಯಮಗಳು ಮಾತ್ರ ವಿಭಿನ್ನ. ಇವೆಲ್ಲದರ ಹೊರತಾಗಿಯೂ, ಜಪಾನ್‌’ನಲ್ಲಿ ಶಾಲಾ ಹುಡುಗಿಯರು ತರಗತಿಗೆ ಅನುಗುಣವಾಗಿ ಸ್ಕರ್ಟ್‌ಗಳನ್ನು ಧರಿಸುತ್ತಾರೆ ಎಂದು ಹೇಳಲಾಗುತ್ತದೆ. ಜಪಾನಿನ ಶಾಲಾ ಹುಡುಗಿಯರ ಸ್ಕರ್ಟ್‌ಗಳಿಗೆ ಸಂಬಂಧಿಸಿದ ಸುದ್ದಿ ಇಂಟರ್ನೆಟ್ ಜಗತ್ತಿನಲ್ಲಿ ಭಾರೀ ಸುದ್ದಿಯಾಗುತ್ತವೆ.

1 /8

ಭಾರತದಂತೆಯೇ, ಜಪಾನ್‌ನ ಹೆಚ್ಚಿನ ಶಾಲೆಗಳು ತಮ್ಮದೇ ಆದ ಪ್ರತ್ಯೇಕ 'S`N eifuku' ಅಂದರೆ ಶಾಲಾ ಸಮವಸ್ತ್ರವನ್ನು ಹೊಂದಿವೆ. ಜಪಾನಿನ ಹುಡುಗಿಯರ ಸಮವಸ್ತ್ರದಲ್ಲಿ ಅನೇಕ ರೀತಿಯ ವಿಶಿಷ್ಟ ಕಲಾಕೃತಿಗಳನ್ನು ಮಾಡಲಾಗುತ್ತದೆ. ಅಂತರ್ಜಾಲದಲ್ಲಿ ಜಪಾನಿನ ಶಾಲಾ ಹುಡುಗಿಯರ ಯೂನಿಫಾರ್ಮ್ ಬಗ್ಗೆ ಅನೇಕ ರೀತಿಯ ಸುದ್ದಿ ಮತ್ತು ಲೇಖನಗಳಿವೆ.

2 /8

ಜಪಾನಿನ ಬಾಲಕಿಯರ ಶಾಲಾ ಉಡುಪಿನ ಕೆಲವು ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಅವುಗಳಲ್ಲಿ ಒಂದು ಅವರ ಸ್ಕರ್ಟ್‌ಗಳ ಗಾತ್ರ ಭಾರೀ ಚಿಕ್ಕದಾಗಿರುತ್ತವೆ.

3 /8

ಅದೇನೆಂದರೆ, ಶಾಲೆಯಲ್ಲಿನ ಯೂನಿಫಾರ್ಮ್ ಗಳ ಬಗ್ಗೆ ಚರ್ಚಿಸಿದಾಗ, ಜಪಾನ್ ಅನ್ನು ಖಂಡಿತವಾಗಿಯೂ ಉಲ್ಲೇಖಿಸಲಾಗುತ್ತದೆ. ಜಪಾನಿನ ಶಾಲೆಗಳಲ್ಲಿ ಹುಡುಗಿಯರು ಪ್ರಪಂಚದ ಉಳಿದ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಚಿಕ್ಕದಾದ ಸ್ಕರ್ಟ್ಗಳನ್ನು ಧರಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ಶಾರ್ಟ್ ಸ್ಕರ್ಟ್‌ಗಳ ಬಗ್ಗೆ ಅನೇಕ ಸಿದ್ಧಾಂತಗಳನ್ನು ಹೇಳಲಾಗುತ್ತದೆ.

4 /8

ಕೆಲವು ವರದಿಗಳಲ್ಲಿ ಹುಡುಗಿಯರ ಸಮವಸ್ತ್ರದ ಉದ್ದವನ್ನು ವರ್ಗದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ, ಅವರ ವರ್ಗ ಹೆಚ್ಚಾದಂತೆ, ಅದರ ಪ್ರಕಾರ ಹುಡುಗಿಯರ ಸ್ಕರ್ಟ್‌ಗಳ ಗಾತ್ರವೂ ಚಿಕ್ಕದಾಗುತ್ತದೆಯಂತೆ.

5 /8

ಆದರೆ ಜಪಾನ್ ಶಾಲೆಯ ಹುಡುಗಿಯರ ಸ್ಕರ್ಟ್ ಕಥೆ ನಿಜವಾಗಿಯೂ ಏನು ಗೊತ್ತಾ?, ಅಷ್ಟಕ್ಕೂ ಜಪಾನಿನ ಹುಡುಗಿಯರು ಈ ರೀತಿ ಮಾಡುವುದರಲ್ಲಿ ಸತ್ಯವಿದೆಯೇ?. ಜಪಾನ್‌ನಲ್ಲಿ ಶಾಲಾ ಹುಡುಗಿಯರು ಶಾರ್ಟ್ ಸ್ಕರ್ಟ್ ಧರಿಸುತ್ತಾರೆ ಎಂಬುದು ನಿಜ. 'ಜಪಾನ್ ಇನ್‌ಸೈಡ್' ವರದಿಯ ಪ್ರಕಾರ, 1990 ರ ದಶಕದಲ್ಲಿ ಶಾರ್ಟ್ ಸ್ಕರ್ಟ್ ಧರಿಸುವ ಸಂಸ್ಕೃತಿ ಪ್ರಾರಂಭವಾಯಿತು.

6 /8

90 ರ ದಶಕದಲ್ಲಿ ಜಪಾನಿನ ಪ್ರಸಿದ್ಧ ಪಾಪ್ ತಾರೆ ನಮಿ ಅಮುರೊ ಅವರ ಕಾರಣದಿಂದಾಗಿ ಸಣ್ಣ ಸ್ಕರ್ಟ್ಗಳನ್ನು ಧರಿಸುವ ಸಂಸ್ಕೃತಿಯು ಹುಟ್ಟಿಕೊಂಡಿತು ಎಂದು ಹೇಳಲಾಗಿದೆ. ಮೊದಲು ಜನರು ಇದನ್ನು ಸಾಮಾನ್ಯ ಬಟ್ಟೆಗಳಂತೆ ಅಳವಡಿಸಿಕೊಂಡರು. ನಂತರ ಈ ಪ್ರವೃತ್ತಿಯು ಶಾಲಾ ಉಡುಗೆಯಲ್ಲಿ ವೇಗವಾಗಿ ಟ್ರೆಂಡ್ ಆಗಲು ಪ್ರಾರಂಭವಾಯಿತು. ಅಂದರೆ ಆ ಅವಧಿಯಲ್ಲಿ ಅನೇಕ ಶಾಲೆಗಳ ಹುಡುಗಿಯರು ತಮ್ಮ ಶಾಲಾ ಉಡುಗೆ ಅಂದರೆ ಶಾರ್ಟ್ ಸ್ಕರ್ಟ್ ನಲ್ಲಿ ಈ ಫ್ಯಾಷನ್ ಟ್ರೆಂಡ್ ಅನುಸರಿಸುತ್ತಿದ್ದರು.

7 /8

ಆದರೆ, ಶಾರ್ಟ್ ಸ್ಕರ್ಟ್‌ಗಳ ಬಗ್ಗೆ ಯಾವುದೇ ನಿಯಮವಿಲ್ಲ. ಶಾಲಾ ಹುಡುಗಿಯರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಇವೆಲ್ಲವನ್ನು ಮಾಡುತ್ತಾರೆ. ಇಲ್ಲಿ ವರ್ಗವಾರು ನಿಯಮವಿಲ್ಲ. ಅನೇಕ ಶಾಲೆಗಳು ಮೊಣಕಾಲಿನವರೆಗಿನ ಸ್ಕರ್ಟ್‌ಗಳನ್ನು ತೊಡಬೇಕು ಎಂದು ಸಲಹೆಯನ್ನು ನೀಡಿವೆ. ಆದರೆ ವಿದ್ಯಾರ್ಥಿಗಳು ಅವುಗಳನ್ನು ಸೊಂಟದ ಬಳಿ ಮಡಚಿ ಮತ್ತು ಸ್ಕರ್ಟ್‌ನ ಉದ್ದವನ್ನು ಕಡಿಮೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

8 /8

ರೆಟ್ರೊ ಮತ್ತು ಆಧುನಿಕ ಫ್ಯಾಷನ್ ಪ್ರಕಾರ ತಮ್ಮ ಶಾಲಾ ಉಡುಗೆಯನ್ನು ಚಿಕ್ಕದಾಗಿ ಮಾಡಲು ಹುಡುಗಿಯರು ಈ ಮೂರು ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಾರಂತೆ. ಅವುಗಳೆಂದರೆ 1. ಸ್ಕರ್ಟ್ ಅನ್ನು ಕತ್ತರಿಯಿಂದ ಕತ್ತರಿಸುವುದು 2. ಸೊಂಟದ ಪಟ್ಟಿಯನ್ನು ಮಡಚುವುದು 3. ಸ್ಕರ್ಟ್ ಬೆಲ್ಟ್ ಅನ್ನು ಬಳಸುವುದರ ಮೂಲಕ ಸ್ಕರ್ಟ್ನ ಎತ್ತರವನ್ನು ಸಹ ಕಡಿಮೆ ಮಾಡುವುದು.