ನಿಮಗೂ ಪದೇ ಪದೇ ತಲೆನೋವಿನ ಸಮಸ್ಯೆ ಕಾಡುತ್ತಿದೆಯೇ? ಇವು ಕಾರಣವಾಗಿರಬಹುದು

ಬೆಂಗಳೂರು: ನಮ್ಮಲ್ಲಿ ಕೆಲವರಿಗೆ ಆಗಾಗ್ಗೆ ತಲೆನೋವು ಬರುವುದು ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಆದರೆ, ಆಯ್ಯೋ... ಈ ತಲೆನೋವು ಆಗಾಗ್ಗ ಇದ್ದದ್ದೇ ಎಂದು ಕೆಲವರು ಇದನ್ನು ನಿರ್ಲಕ್ಷಿಸುತ್ತಾರೆ. 

ಬೆಂಗಳೂರು: ನಮ್ಮಲ್ಲಿ ಕೆಲವರಿಗೆ ಆಗಾಗ್ಗೆ ತಲೆನೋವು ಬರುವುದು ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಆದರೆ, ಆಯ್ಯೋ... ಈ ತಲೆನೋವು ಆಗಾಗ್ಗ ಇದ್ದದ್ದೇ ಎಂದು ಕೆಲವರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ, ಪದೇ ಪದೇ ಈ ರೀತಿ ತಲೆನೋವು ಬರುವುದರ ಹಿಂದೆ ಹಲವು ಕಾರಣಗಳಿರಬಹುದು ಎಂದು ನಿಮಗೆ ತಿಳಿದಿದೆಯೇ? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಒತ್ತಡ: ಈಗಿನ ಒತ್ತಡದ ಜೀವನ ಶೈಲಿಯಲ್ಲಿ ತಲೆನೋವು ಸರ್ವೇ ಸಾಮಾನ್ಯ. ನಿಮಗೆ ಒತ್ತಡದಿಂದಾಗಿ ತಲೆನೋವು ಬರುತ್ತಿದ್ದರೆ ಅದನ್ನು ನಿವಾರಿಸಲು ಯೋಗ, ಪ್ರಾಣಾಯಾಮವನ್ನು ರೂಢಿಸಿಕೊಳ್ಳಿ.

2 /5

ದೃಷ್ಟಿ ದೋಷ: ಕಣ್ಣಿನ ದೃಷ್ಟಿದೋಷವೂ ಕೂಡ ತಲೆನೊವಿಗೆ ಕಾರಣವಾಗಿರಬಹುದು.  

3 /5

ನಿದ್ರಾಹೀನತೆ: ನಾವು ಆರೋಗ್ಯವಾಗಿರಲು ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯ. ನಿತ್ಯ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಅವಶ್ಯಕವಾಗಿದೆ. ಆದರೆ, ಸರಿಯಾಗಿ ನಿದ್ರೆ ಮಾಡದಿದ್ದರೆ ಅದು ತಲೆನೋವಿಗೆ ಕಾರಣವಾಗಬಹುದು. ನಿದ್ರೆಯ ಕೊರತೆಯು ತಲೆನೋವಿಗೆ ಮಾತ್ರವಲ್ಲ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನೂ ಸಹ ಉಂಟು ಮಾಡಬಹುದು.

4 /5

ರಕ್ತಹೀನತೆ: ದೇಹದಲ್ಲಿ ಹಿಮೊಗ್ಲೋಬಿನ ಕಡಿಮ ಆದಾಗಲೂ ಸಹ ಬೆಳಿಗ್ಗೆ ಎದ್ದ ತಕ್ಷಣ ತಲೆನೋವಿನ ಸಮಸ್ಯೆ ಕಾಡಬಹುದು. ಹಾಗಾಗಿ ಪದೇ ಪದೇ ತಲೆನೋವು ಬರುತ್ತಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ.

5 /5

ನಿರ್ಜಲೀಕರಣ: ದೇಹದಲ್ಲಿ ನೀರಿನ ಕೊರತೆ ಉಂಟಾದರೂ ಸಹ  ಬೆಳಿಗ್ಗೆ ಸಮಯದಲ್ಲಿ ತಲೆ ನೋವು ನಿಮ್ಮನ್ನು ಕಾಡಬಹುದು. ಇದನ್ನು ತಪ್ಪಿಸಲು ನಿತ್ಯ ಬೆಳಿಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾನ್ಯ ಮನೆಮದ್ದುಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.