Kalpana Chawla: ಕಲ್ಪನಾ ಚಾವ್ಲಾ ದೇಶಕ್ಕೆ ಕೊನೆಯದಾಗಿ ಕಳುಹಿಸಿದ ಆ ಸಂದೇಶ ಏನು ಗೊತ್ತಾ! ತಿಳಿದರೆ ಕಣ್ಣೀರು ಬರುತ್ತೆ ಖಂಡಿತ

Kalpana Chawla last message: ಕಲ್ಪನಾ ಚಾವ್ಲಾ ಒಬ್ಬ ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಮತ್ತು ಅಂತರಿಕ್ಷಯಾನ ಇಂಜಿನಿಯರ್. ಇವರು ಬಾಹ್ಯಾಕಾಶಕ್ಕೆ ಯಾನ ಬೆಳೆಸಿದ ಭಾರತೀಯ ಮೂಲದ ಮೊದಲ ಮಹಿಳೆ. ಅವರು ಮೊದಲು 1997 ರಲ್ಲಿ ಬಾಹ್ಯಾಕಾಶ ನೌಕೆ ಕೊಲಂಬಿಯಾದಲ್ಲಿ ಮಿಷನ್ ಸ್ಪೆಷಲಿಸ್ಟ್ ಮತ್ತು ಪ್ರಾಥಮಿಕ ರೊಬೊಟಿಕ್ ಆರ್ಮ್ ಆಪರೇಟರ್ ಆಗಿ ಗಗನಯಾನ ಕೈಗೊಂಡರು.

1 /8

ಕಲ್ಪನಾ ಚಾವ್ಲಾ ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ. ಇವರು ಬಾಹ್ಯಾಕಾಶಕ್ಕೆ ಯಾನ ಬೆಳೆಸಿದ ಭಾರತೀಯ ಮೂಲದ ಮೊದಲ ಮಹಿಳೆ. ಅವರು ಮೊದಲು 1997 ರಲ್ಲಿ ಬಾಹ್ಯಾಕಾಶ ನೌಕೆ ಕೊಲಂಬಿಯಾದಲ್ಲಿ ಮಿಷನ್ ಸ್ಪೆಷಲಿಸ್ಟ್ ಮತ್ತು ಪ್ರಾಥಮಿಕ ರೊಬೊಟಿಕ್ ಆರ್ಮ್ ಆಪರೇಟರ್ ಆಗಿ ಗಗನಯಾನ ಕೈಗೊಂಡರು.

2 /8

ಆಕೆ ಎರಡನೇ ಬಾರಿ ಬಾಹ್ಯಾಕಾಶ ಯಾನ ಕೈಗೊಂಡಿದ್ದು 2003 ರಲ್ಲಿ. ಅದು ಕೊಲಂಬಿಯಾದ STS-107 ಫೈನಲ್ ಫ್ಲೈಟ್’ನಲ್ಲಿ. ಆದರೆ ಫೆಬ್ರವರಿ 1 ರಂದು ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣಕ್ಕೆ ಪ್ರವೇಶ ಮಾಡುತ್ತಿರುವಾಗಲೇ ದುರಂತವೊಂದು ಸಂಭವಿಸಿತ್ತು. ಆ ದುರಂತದಲ್ಲಿ ಸಾವನ್ನಪ್ಪಿದ ಏಳು ಸಿಬ್ಬಂದಿಗಳಲ್ಲಿ ಚಾವ್ಲಾ ಕೂಡ ಒಬ್ಬರಾಗಿದ್ದರು.

3 /8

ಕಲ್ಪನಾ ಚಾಬ್ಲಾ ಮರಣೋತ್ತರವಾಗಿ ಕಾಂಗ್ರೆಷನಲ್ ಸ್ಪೇಸ್ ಮೆಡಲ್ ಆಫ್ ಆನರ್ ಅನ್ನು ನೀಡಲಾಯಿತು, ಹಲವಾರು ಬೀದಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳಿಗೆ ಅವರ ಗೌರವಾರ್ಥವಾಗಿ ಈಗ ಹೆಸರಿಡಲಾಗಿದೆ.

4 /8

"ನಮ್ಮ ಮಿಷನ್ ಯಶಸ್ವಿಯಾಗಿದೆ ಮತ್ತು ನಾವೆಲ್ಲರೂ ಇಲ್ಲಿ ಚೆನ್ನಾಗಿದ್ದೇವೆ" ಎಂದು ಕಲ್ಪನಾ ಚಾವ್ಲಾ ಕೊನೆಯದಾಗಿ ದೇಶಕ್ಕೆ ಸಂದೇಶ ಕಳುಹಿಸಿದ್ದರು. ಇದು ಇಂಡೋ-ಅಮೆರಿಕನ್ ಗಗನಯಾತ್ರಿ, ಭಾರತದ ಹೆಮ್ಮೆಯ ಪುತ್ರಿ ಆಡಿದ ಮತ್ತು ಭಾರತದ ಅವರ ಸರ್ವ ಕುಟುಂಬ ಕೇಳಿಸಿಕೊಂಡ ಕೊನೆಯ ಸಂದೇಶವಾಗಿದೆ. ಈ ಸಂದೇಶ ಎಂಥವರನ್ನೂ ಕೂಡ ಮನಸ್ಸು ಕರಗುವಂತೆ ಮಾಡುತ್ತದೆ.

5 /8

ಕೊಲಂಬಿಯಾದಲ್ಲಿ ಗಗನಯಾತ್ರಿಗಳ ಕುಟುಂಬಗಳನ್ನು ಸಂಪರ್ಕಿಸಲು ನಾಸಾ ವ್ಯವಸ್ಥೆ ಮಾಡಿದ ಸಂದರ್ಭದಲ್ಲಿ ಕಲ್ಪನಾ ಅವರೊಂದಿಗೆ ಅವರ ಸಹೋದರಿ ದೀಪಾ ಜೊತೆ ಮಾತನಾಡಿದ್ದರು. ಆ ಸಂದರ್ಭದಲ್ಲಿ ಇದೊಂದು ಸಂದೇಶವನ್ನು ಕಳುಹಿಸಿದ್ದರು.

6 /8

ಕಲ್ಪನಾ ಸಾವು ಅವರ ಕುಟುಂಬದಲ್ಲಿ ಸಂಭವಿಸಿದ ಎರಡನೇ ದುರಂತವಾಗಿತ್ತು. 1990 ರಲ್ಲಿ, ಕಲ್ಪನಾ ಅವರ ಹಿರಿಯ ಸಹೋದರಿ ಸುನಿತಾ ಅವರು, ನೌಕಾಪಡೆಯ ಪೈಲಟ್ ಆಗಿದ್ದ ತಮ್ಮ ಪತಿ ಸುನಿಲ್ ಚೌಧರಿ ಅವರನ್ನು ಹೆಲಿಕಾಪ್ಟರ್ ದುರಂತದಲ್ಲಿ ಕಳೆದುಕೊಂಡಿದ್ದರು.

7 /8

ತಮ್ಮ ತಾಯಿಯಂತೆ, ಕಲ್ಪನಾ ಚಾವ್ಲಾ ಕೂಡ ಧಾರ್ಮಿಕವಾಗಿ ಆಳವಾದ ಯೋಚನೆಯನ್ನು ಹೊಂದಿದ್ದರು ಎಂದು ಕುಟುಂಬ ಮೂಲಗಳು ಹೇಳುತ್ತವೆ, ತುಂಬಾ ಸರಳವಾದ ಜೀವನವನ್ನು ನಡೆಸುತ್ತಿದ್ದ ಅವರು ಮನೆಯ ಪ್ರತೀ ಕೆಲಸಗಳನ್ನು ಖುದ್ದಾಗಿ ಅವರೇ ಮಾಡುತ್ತಿದ್ದರು ಎನ್ನಲಾಗಿದೆ, 1993 ರಲ್ಲಿ ಭಾರತಕ್ಕೆ ಬಂದಾಗ ಕುಟುಂಬವು ಕಲ್ಪನಾ ಜೊತೆ ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತದೆ. ಈ ಬಗ್ಗೆ ಅವರ ಚಿಕ್ಕಪ್ಪ ವಿಜಯ್ ಚಾವ್ಲಾ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

8 /8

ಪ್ರತಿ ವರ್ಷ ಕರ್ನಾಲ್‌’ನಲ್ಲಿರುವ ತನ್ನ ಶಾಲೆಯ ಇಬ್ಬರು ಮಕ್ಕಳನ್ನು ನಾಸಾಗೆ ಭೇಟಿ ಮಾಡಿಸುವ ವಿಶೇಷ ವ್ಯವಸ್ಥೆಯನ್ನು ಕಲ್ಪನಾ ಚಾವ್ಲಾ ಮಾಡಿದ್ದರಂತೆ. ಕಲ್ಪನಾ ಚಾವ್ಲಾ ಬಗ್ಗೆ ಭಾರತಕ್ಕೆ ವಿಶೇಷ ಹೆಮ್ಮೆಯಿದೆ. ಭೂಮಿಯಿಂದ ಬಾನೆತ್ತರಕ್ಕೆ ದೇಶದ ಕೀರ್ತಿಯನ್ನು ಪಸರಿಸಿದ ಮೊದಲ ಇಂಡೋ ಅಮೇರಿಕನ್ ಗಗನಯಾತ್ರಿ ಇವರು.