Vastu tips : ವಾಸ್ತು ಶಾಸ್ತ್ರದಲ್ಲಿ ಪ್ರತಿನಿತ್ಯ ಮನುಷ್ಯ ಮಾಡಬಾರದ ಅನೇಕ ವಿಷಯಗಳನ್ನು ಉಲ್ಲೇಖಿಸಿಲಾಗಿದೆ.. ವಿಶೇಷವಾಗಿ ಬೆಳಿಗ್ಗೆ ಎದ್ದ ನಂತರ ಕೆಲವು ವಿಷಯಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. ಬನ್ನಿ ಹಾಗಿದ್ರೆ ಬೆಳಿಗ್ಗೆ ಎದ್ದ ತಕ್ಷಣ ನೋಡಲೇಬಾರದ ಆ ವಸ್ತುಗಳು ಯಾವುವು ಅಂತ ತಿಳಿಯೋಣ..
ನಂಬಿಕೆಯ ಪ್ರಕಾರ, ಲಕ್ಷ್ಮಿ ದೇವಿಯು ನಮ್ಮ ಅಂಗೈಯಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಕೆಲವು ವಯಸ್ಕರು ತಮ್ಮ ಮಕ್ಕಳಿಗೆ ಬೆಳಿಗ್ಗೆ ಎದ್ದಾಗ ಅಂಗೈಯನ್ನು ನೋಡುವಂತೆ ಹೇಳುತ್ತಾರೆ. ಆದರೆ ನಮ್ಮ ದಿನಚರಿಯಲ್ಲಿ ಬೆಳಗ್ಗೆ ಎದ್ದಾಗ ನೋಡಲೇಬಾರದ ಹಲವಾರು ವಸ್ತುಗಳು, ದೃಶ್ಯಗಳಿವೆ.. ನೀವು ಬೆಳಿಗ್ಗೆ ಎದ್ದಾಗ ಯಾವತ್ತೂ ನೋಡಬಾರದ 5 ವಸ್ತುಗಳು ಯಾವುವು? ಇದಕ್ಕೆ ಕಾರಣವೇನು? ಬನ್ನಿ ತಿಳಿಯೋಣ..
ಕಟ್ಟು ನಿಂತ ಗಡಿಯಾರ: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಗೋಡೆಯ ಮೇಲೆ ನಿಂತ ಅಥವಾ ಹಾಳಾದ ಗಡಿಯಾರವನ್ನು ಇಡಬಾರದು.. ಮುಂಜಾನೆ ಎದ್ದ ತಕ್ಷಣ ಒಂದು ನಿಂತ ಅಥವಾ ಕೆಟ್ಟ ಗಡಿಯಾರವನ್ನು ನೋಡಿದರೆ, ನಿಮ್ಮ ಜೀವನದಲ್ಲಿ ಏನಾದರೂ ದೊಡ್ಡ ಸಮಸ್ಯೆ ಬರಲಿದೆ ಎಂಬುದರ ಸಂಕೇತವಾಗಿರುತ್ತದೆ..
ಒಡೆದ ವಿಗ್ರಹಗಳು: ಭಗ್ನಗೊಂಡ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಬೆಳಿಗ್ಗೆ ಎದ್ದಾಗ ಇಂತಹ ಮೂರ್ತಿಗಳನ್ನು ನೋಡಬಾರದು. ಅದೇ ರೀತಿ ಮುರಿದ ದೇವರ ವಿಗ್ರಹಗಳನ್ನು ಪೂಜಾ ಕೋಣೆಯಲ್ಲಿ ಇಡಬಾರದು. ಇವು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಒಡೆದ ಕನ್ನಡಿ : ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡಬಾರದು. ಬೆಳಗ್ಗೆ ಎದ್ದ ಮೇಲೆ ಇಂತಹ ಕನ್ನಡಿಯನ್ನು ನೋಡುವುದರಿಂದ ದುರಾದೃಷ್ಟ ಬರುತ್ತದೆ ಎಂಬುದು ನಂಬಿಕೆ.
ನೆರಳು: ಬೆಳಿಗ್ಗೆ ಎದ್ದಾಗ ನೆರಳನ್ನು ನೋಡಬೇಡಿ. ಅದು ನಿಮ್ಮ ನೆರಳೋ ಅಥವಾ ಇತರರ ನೆರಳೋ ಎಂಬುವುದು ಮುಖ್ಯವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಬೆಳಿಗ್ಗೆ ಕಣ್ಣು ತೆರೆದಾಗ ನೆರಳು ಕಂಡರೆ ಅದು ನಿಮಗೆ ದುರಾದೃಷ್ಟವನ್ನು ತರುತ್ತದೆ.
ಒಡೆದ ಪಾತ್ರೆಗಳು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದಾಗ ಒಡೆದ ಮತ್ತು ಕೊಳೆಯಾದ ಪಾತ್ರೆಗಳನ್ನು ನೋಡಬಾರದು. ಏಕೆಂದರೆ ಅವರು ಸಂಬಂಧಗಳಲ್ಲಿ ಬಿರುಕು ಉಂಟುಮಾಡುತ್ತಾರೆ ಎಂದು ನಂಬಲಾಗಿದೆ. ಅಲ್ಲದೆ, ಮನೆಯ ವಾತಾವರಣ, ಒತ್ತಡವನ್ನು ಉಂಟುಮಾಡಬಹುದು. ಇವು ಬಡತನಕ್ಕೂ ಕಾರಣವಾಗಬಹುದು.
ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಮತ್ತು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರಿತವಾಗಿದೆ.. Zee Kannada News ಇದನ್ನು ಖಚಿತಪಡಿಸಿಲ್ಲ.