Lydia Thomas talks with ghosts: ದೆವ್ವಗಳ ಜೊತೆಯೇ ಜೀವನ ಸಾಗಿಸುತ್ತಿರುವ ಈಕೆಗೆ ಬಾಯ್ ಫ್ರೆಂಡ್ ನ ಸತ್ತ ಅಜ್ಜಿ ಮಾಡಿದ್ದೇನು ಗೊತ್ತಾ?

Lydia Thomas talks with ghosts: ಸ್ವಯಂ-ಘೋಷಿತ ಸೈಕೋಪಾತ್ 'ಸೈಕಿಕ್-ಇಶ್' ವಿದೇಶಿ ಹುಡುಗಿ ತಾನು ದೆವ್ವಗಳೊಂದಿಗೆ ಮಾತನಾಡಬಲ್ಲೆ ಎಂದು ಹೇಳುವ ಮೂಲಕ ಸಂಚಲನವನ್ನು ಸೃಷ್ಟಿಸಿದ್ದಾಳೆ. ಆಗಾಗ್ಗ ನನ್ನ ಗೆಳೆಯನ ಮೃತ ಅಜ್ಜಿಯ ಆತ್ಮವು ತನ್ನ ಸುತ್ತಲೂ ನೃತ್ಯ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾಳೆ. 28 ವರ್ಷದ ಲಿಡಿಯಾ ಥಾಮಸ್ ಅವರು ಕೇವಲ 8 ವರ್ಷದವಳಿದ್ದಾಗ ಕೆಲವು ಆತ್ಮಗಳನ್ನು ನೋಡಲು ಪ್ರಾರಂಭಿಸಿದ್ದಾರಂತೆ. ತಾನು ಹುಟ್ಟುವುದಕ್ಕೂ ಮುನ್ನ ಸಾವನ್ನಪ್ಪಿದ ತನ್ನ ಅಜ್ಜಿಯ ಆತ್ಮವನ್ನು ನಾನು ಮೊದಲಿಗೆ ಕಂಡಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಮಲಗುವ ಕೋಣೆಯ ಬಾಗಿಲ ಬಳಿ ಲಿಡಿಯಾಗೆ ತನ್ನ ಅಜ್ಜಿ ಕಾಣಿಸಿಕೊಂಡಿದ್ದರಂತೆ.

1 /5

ಬ್ರಿಟಿಷ್ ಸುದ್ದಿ ವೆಬ್‌ಸೈಟ್ 'ದಿ ಮಿರರ್' ವರದಿಯ ಪ್ರಕಾರ, ಲಿಡಿಯಾ ಥಾಮಸ್ ತನ್ನ 8 ನೇ ವಯಸ್ಸಿನಲ್ಲಿ ತನ್ನ ಅಜ್ಜಿಯ ಆತ್ಮವನ್ನು ಮೊದಲ ಬಾರಿಗೆ ನೋಡಿದ್ದಾಳೆ. ಆಕೆಗೆ 10 ವರ್ಷ ತುಂಬಿದಾಗ ಈ ವಿಷಯವನ್ನು ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ. ಬಳಿಕ ಲಿಡಿಯಾ ತನ್ನ ಹದಿಹರೆಯದ ವಯಸ್ಸಿನಲ್ಲಿ ಆತ್ಮಗಳನ್ನು ನಿಯಂತ್ರಿಸಲು ಕಲಿಯುವವರೆಗೂ ಅಜ್ಜಿಯ ಆತ್ಮ ಕಂಡು ಹೆದರುತ್ತಿದ್ದಳಂತೆ.

2 /5

ಲಿಡಿಯಾ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಹೊಸ ಅಪ್ಡೇಟ್ ನೀಡುತ್ತಲೇ ಇರುತ್ತಾಳೆ. ಇಂಟರ್ನೆಟ್ ಲೋಕದಲ್ಲಿ ದೆವ್ವ, ಮಾಟ-ಮಂತ್ರಗಳನ್ನು ನಂಬುವವರದ್ದೇ ಬೇರೆ ಪ್ರಪಂಚ. ಹೀಗಿರುವಾಗ ಈಕೆ ನೀಡುವ ಮಾಹಿತಿ ಅನೇಕರಿಗೆ ಇಷ್ಟವಾಗಿದೆ.

3 /5

ಈಗ ಆತ್ಮಗಳೊಂದಿಗೆ ಮಾತನಾಡಲು ಅಭ್ಯಾಸವಾಗಿದೆ ಎಂದು ಲಿಡಿಯಾ ಹೇಳುತ್ತಾಳೆ. ಬಾಯ್ ಫ್ರೆಂಡ್ ಜೊತೆಗಿರುವಾಗಲೂ ಅವನ ಸತ್ತ ಅಜ್ಜಿಯ ದೆವ್ವ ಅವಳ ಸುತ್ತ ಕುಣಿಯುವಂತೆ ಕಾಣುತ್ತದೆ. ಅವರು ಫೆಬ್ರವರಿ 2019 ರಲ್ಲಿ ನಿಧನರಾಗಿದ್ದಾರೆ.

4 /5

ತನ್ನ ಸಂದರ್ಶನವೊಂದರಲ್ಲಿ ಲಿಡಿಯಾ ಮಾತನಾಡಿದ್ದು, ತನ್ನ ಬಾಲ್ಯದ ಕೆಲವು ವರ್ಷಗಳಲ್ಲಿ ದೆವ್ವಗಳೊಂದಿಗೆ ವಾಸಿಸುವ ಮತ್ತು ಮಾತನಾಡುವ ವ್ಯಸನಿಯಾಗಿದ್ದಳಂತೆ. ಇದಾದ ನಂತರ ಆಗಾಗ ಬರುತ್ತಿದ್ದ ಆತ್ಮಗಳಿಗೆ ಅವರವರ ಇಚ್ಛೆಯಂತೆ ಹೋಗುವಂತೆ ಹೇಳುತ್ತಿದ್ದಳಂತೆ.

5 /5

ಲಿಡಿಯಾ ಕೆನಡಾದ ವ್ಯಾಂಕೋವರ್‌ನಲ್ಲಿ ತನ್ನ ಗೆಳೆಯ ಸಾಫ್ಟ್‌ವೇರ್ ಇಂಜಿನಿಯರ್ ಡೇನಿಯಲ್‌ನೊಂದಿಗೆ ವಾಸಿಸುತ್ತಾಳೆ. ಲಿಡಿಯಾ ಅವರು ಡಿಸ್ಪ್ಯೂಟ್ ರೆಸೊಲ್ಯೂಶನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆತ್ಮಗಳೊಂದಿಗೆ ಮಾತನಾಡುವುದು ನನ್ನ ವೃತ್ತಿಯಲ್ಲ. ಈ ದೈವಿಕ ಶಕ್ತಿಯ ಬಗ್ಗೆ ಅನೇಕರಿಗೆ ತಿಳಿದಿದೆ. ಅದಕ್ಕಾಗಿಯೇ ಅನೇಕ ಮಾಂತ್ರಿಕರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ, ಆದರೆ ಅವರ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.