ಯಶ್ ದಕ್ಷಿಣ ಭಾರತದ ಸೂಪರ್ ಸ್ಟಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಜಿಎಫ್ ನಿಂದಾಗಿ ಯಶ್ ಪ್ರತಿಭೆ ಉತ್ತರಭಾರತದಕ್ಕೂ ಹರಡಿದ್ದಾಯಿತು.
ನವದೆಹಲಿ : ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ (KGF) ಪಂಚ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ತೆರೆ ಕಂಡ ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಕೂಡಾ ಆಗಿತ್ತು. ಯಶ್ ದಕ್ಷಿಣ ಭಾರತದ ಸೂಪರ್ ಸ್ಟಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಜಿಎಫ್ ನಿಂದಾಗಿ ಯಶ್ (Yash)ಪ್ರತಿಭೆ ಉತ್ತರಭಾರತದಕ್ಕೂ ಹರಡಿದ್ದಾಯಿತು. ಯಶ್ ಉತ್ತರಭಾರತದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡದ ರಾಕಿಭಾಯಿ (Rocking Star) ಹಿಂದಿಯಲ್ಲೂ ಅದ್ಭುತವಾಗಿ ಡೈಲಾಗ್ ಹೊಡೆದಿದ್ದಾರೆ. ಈ ಡೈಲಾಗ್ ಗಳಿಗೆ ಸಿಳ್ಳೆ ಹೊಡೆಸಿಕೊಂಡಿದ್ದಾರೆ. ಆದರೆ ಚಿತ್ರ ಹಿಂದಿಗೆ ಡಬ್ಬಿಂಗ್ ಆದಾಗ ಯಶ್ ಅವರ ಪಾತ್ರಕ್ಕೆ ಕಂಠದಾನ (Dubbing) ಮಾಡಿದ್ದು ಯಾರು ಗೊತ್ತಾ? ಕೆಜಿಎಫ್ ಹಿಂದಿ ಚಿತ್ರದಲ್ಲಿ ಯಶ್ ಪಾತ್ರಕ್ಕೆ ಕಂಠದಾನ ಮಾಡಿರುವ ವ್ಯಕ್ತಿಯ ಹೆಸರು ಸಚಿನ್ ಗೋಲ್..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನ್ನಡ ಚಿತ್ರ ಕೆಜಿಎಫ್ ಚಿತ್ರ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಂಡಿತ್ತು. ಚಿತ್ರದ ಹಿಂದಿ ಆವೃತಿಯನ್ನು ಕೂಡಾ ಜನ ಬಹಳವಾಗಿ ಮೆಚ್ಚಿದ್ದರು. ಚಿತ್ರ ಅಷ್ಟು ಅದ್ಬುತವಾಗಿ ಮೂಡಿ ಬರಲು ಯಶ್ ಅಭಿನಯ ಕಾರಣ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ ನಟನೆಯ ಜೊತೆ ಡೈಲಾಗ್ ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. (ಫೋಟೋ: ಸಚಿನ್ ಗೋಲ್ ಇನ್ಸ್ಟಾಗ್ರಾಮ್)
ಉತ್ತರಭಾರತದ ಜನರಿಗೂ ಚಿತ್ರ ಅರ್ಥವಾಗಲಿ ಎಂಬ ಉದ್ದೇಶದಿಂದ ಚಿತ್ರವನ್ನು ಹಿಂದಿಗೆ ಡಬ್ಬಿಂಗ್ ಮಾಡಲಾಗಿತ್ತು. ಹಿಂದಿ ಆವೃತಿಯಲ್ಲಿ ಕೇಳಿ ಬರುವ ವಾಯ್ಸ್ ಯಶ್ ಅವರದ್ದಲ್ಲ. ಬದಲಿಗೆ ಇಂಡಸ್ಟ್ರೀಯ ಡಬ್ಬಿಂಗ್ ಆರ್ಟಿಸ್ಟ್ ಸಚಿನ್ ಗೋಲ್ ಅವರದ್ದು. (ಫೋಟೋ: ಸಚಿನ್ ಗೋಲ್ ಇನ್ಸ್ಟಾಗ್ರಾಮ್)
2018 ರ ಮೆಗಾಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್ ಚಾಪ್ಟರ್ -1' ಅದ್ಭುತ ಕಥೆ ಮತ್ತು ಭರ್ಜರಿ ಸಂಭಾಷಣೆಯ ಕಾರಣದಿಂದಲೇ ಆ ಪರಿ ಹಿಟ್ ಆಗಿತ್ತು. ನಟ ಯಶ್ ರೂಪದಲ್ಲಿ ಈ ಪ್ರಬಲ ಸಂಭಾಷಣೆಗಳಿಗೆ ಸಚಿನ್ ಗೋಲ್ ಹಿಂದಿಯಲ್ಲಿ ಕಂಠದಾನ ಮಾಡಿದ್ದಾರೆ. . (ಫೋಟೋ: ಸಚಿನ್ ಗೋಲ್ ಇನ್ಸ್ಟಾಗ್ರಾಮ್)
ಸಚಿನ್ ಗೋಲ್ ಹಲವಾರು ದಕ್ಷಿಣದ ಚಲನಚಿತ್ರಗಳಿಗೆ ಡಬ್ಬಿಂಗ್ ಮಾಡಿದ್ದಾರೆ. ಅರ್ಜುನ್, ಯಶ್ ಮತ್ತು ಧನುಷ್ ಅವರಂತಹ ಇನ್ನೂ ಅನೇಕ ತಾರೆಯರ ಮುಖದ ಹಿಂದೆ ಸಚಿನ್ ಧ್ವನಿಯನ್ನು ಹಿಂದಿಯಲ್ಲಿ ಕೇಳಬಹುದು. ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳ ಹಿಂದಿ ಡಬ್ಬಿಂಗ್ನಲ್ಲಿ ಸಚಿನ್ ತಮ್ಮ ಧ್ವನಿಯೊಂದಿಗೆ ಚಿತ್ರಗಳಿಗೆ ಜೀವ ತುಂಬಿದ್ದಾರೆ. (ಫೋಟೋ: ಸಚಿನ್ ಗೋಲ್ ಇನ್ಸ್ಟಾಗ್ರಾಮ್)
ಕೆಜಿಎಫ್ 2ನಲ್ಲಿಯೂ ಮತ್ತೆ ಸಚಿನ್ ಗೋಲ್ ಅವರ ಧ್ವನಿಯನ್ನೇ ಕೇಳಬಹುದು. ಪಂಚಿಂಗ್ ಡೈಲಾಗ್ ಗಳಿಗೆ ಸಚಿನ್ ಅವರ ಜಬರ್ ದಸ್ತ್ ವಾಯ್ಸ್ ಚಿತ್ರದ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. (ಫೋಟೋ: ಸಚಿನ್ ಗೋಲ್ ಇನ್ಸ್ಟಾಗ್ರಾಮ್)