ಅನೇಕ ಸಲ ನಾವು ಕನಸಿನಲ್ಲಿ ಹಾವು -ಮುಂಗುಸಿ ಕಾಳಗವನ್ನು ನೋಡುತ್ತೇವೆ. ಇದರರ್ಥ ಕೋರ್ಟ್ ಕಚೇರಿಯ ವ್ಯವಹಾರದಲ್ಲಿ ಸಿಲುಕುತ್ತೀರಿ ಎಂದರ್ಥ.
ನವದೆಹಲಿ : ಜನರು ಸಾಮಾನ್ಯವಾಗಿ ನಿದ್ರಿಸುವಾಗ ವಿವಿಧ ರೀತಿಯ ಕನಸುಗಳನ್ನು ಕಾಣುತ್ತಾರೆ. ಇವುಗಳಲ್ಲಿ ಕೆಲವು ಒಳ್ಳೆಯ ಕನಸಾಗಿದ್ದರೆ, ಕೆಲವು ಭಯ ಬೀಳಿಸುತ್ತವೆ. ಅನೇಕ ಬಾರಿ ಕನಸಿನಲ್ಲಿ ಹಾವುಗಳು ಕಾಣುವುದುಂಟು. ಈ ಹಾವುಗಳು ಕನಸಿನಲ್ಲಿ ಕಂಡರೆ ಏನರ್ಥ. ಇದು ಯಾವ ಸಂಕೇತವನ್ನು ನೀಡುತ್ತವೆ. ಒಬ್ಬ ವ್ಯಕ್ತಿಯ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಅನೇಕ ಸಲ ನಾವು ಕನಸಿನಲ್ಲಿ ಹಾವು -ಮುಂಗುಸಿ ಕಾಳಗವನ್ನು ನೋಡುತ್ತೇವೆ. ಇದರರ್ಥ ಕೋರ್ಟ್ ಕಚೇರಿಯ ವ್ಯವಹಾರದಲ್ಲಿ ಸಿಲುಕುತ್ತೀರಿ ಎಂದರ್ಥ. ಇನ್ನು ಕನಸಿನಲ್ಲಿ ಬಿಳಿ ಬಣ್ಣದ ಹಾವು ಕಂಡರೆ, ಶುಭ ಸುದ್ದಿ ಕೇಳಲಿದ್ದೇವೆ ಎಂಬ ಸಂಕೇತ ಸಿಗುತ್ತದೆ.
ಕನಸಿನಲ್ಲಿ ಹಾವು ನಿಮಗೆ ಕಚ್ಚುವುದು ಕಂಡರೆ, ಶೀಘ್ರದಲ್ಲೇ ನೀವು ಗಂಭೀರ ಅನಾರೋಗ್ಯದಿಂದ ಬಳಲುತ್ತೀರಿ ಎಂದು. ನಿಮ್ಮ ಕನಸಿನಲ್ಲಿ ಹಾವಿನ ಹಲ್ಲುಗಳನ್ನು ನೋಡಿದರೆ, ನಿಮ್ಮ ಆಪ್ತರು ಅಥವಾ ಹಿತೈಷಿಗಳು ನಿಮಗೆ ಮೋಸ ಮಾಡಲಿದ್ದಾರೆ ಎಂದು ಅರ್ಥ.
ಕನಸಿನಲ್ಲಿ ಹಾವು ನಿಮ್ಮನ್ನು ಬೆನ್ನಟ್ಟುತ್ತಿರುವುದನ್ನು ನೋಡಿದರೆ, ನಿಜ ಜೀವನದಲ್ಲಿ ಯಾವುದಾದರೂ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಹೆದರಿದ್ದೀರಿ ಎಂದರ್ಥ. ನಿಮ್ಮ ಕನಸಿನಲ್ಲಿ ಹಾವು ಕೊಲ್ಲುವುದನ್ನು ಅಥವಾ ಸತ್ತ ಹಾವನ್ನು ನೋಡಿದರೆ, ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುವ ಸಂಕೇತವಾಗಿರುತ್ತದೆ.
ಹಾರುವ ಹಾವನ್ನು ಸ್ವಪ್ನದಲ್ಲಿ ಕಂಡರೆ, ಜೀವನದಲ್ಲಿ ಅಹಿತಕರ ಘಟನೆಗಳು ನಡೆಯಲಿವೆ ಎನ್ನುವುದನ್ನು ಸೂಚಿಸುತ್ತದೆ. ಮತ್ತೊಂದೆಡೆ, ಅನೇಕ ಹಾವುಗಳು ನಿಮ್ಮನ್ನು ಸುತ್ತುವರಿದಿದ್ದು, ನೀವು ಸುರಕ್ಷಿತವಾಗಿ ಅಲ್ಲಿಂದ ಹೊರಬಂದರೆ, ದೊಡ್ಡ ಸಮಸ್ಯೆಯಿಂದ ಹೊರ ಬರುತ್ತೀರಿ ಎಂದರ್ಥ.
ನಿಮ್ಮ ಕನಸಿನಲ್ಲಿ ಪದೇ ಪದೇ ಹಾವುಗಳು ಕಂಡುಬಂದರೆ, ಧರ್ಮಗ್ರಂಥಗಳ ಪ್ರಕಾರ ಇದು ಕಾಳ ಸರ್ಪ ದೋಷದ ಸಂಕೇತವಾಗಿದೆ. ಕಾಲ ಸರ್ಪ ದೋಷವಿದ್ದರೆ, ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜಾತಕದಲ್ಲಿ ಈ ರೀತಿಯ ಕಾಳ ಸರ್ಪ ದೋಷವಿದ್ದರೆ, ಅದರ ಪರಿಹಾರ ಮಾಡಿಸಿಕೊಳ್ಳಬೇಕು.