ಬೆಳ್ಳುಳ್ಳಿ ಎದುರು ಕರೋನಾ ಆಟ ನಡೆಯೋದಿಲ್ಲ ಅನ್ನೋದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವಾಗುತ್ತಿರುವ ಲೇಟೆಸ್ಟ್ ಮನೆಮದ್ದು. ಈ ಮಾತಿನಲ್ಲಿ ಸತ್ಯ ಎಷ್ಟಿದೆ ಅನ್ನೋದನ್ನು ನಾವು ತಿಳಿದುಕೊಳ್ಳಲೇ ಬೇಕು.
ಬೆಂಗಳೂರು : ಕರೋನಾ ಕಾಲದಲ್ಲಿ ಒಂದಲ್ಲ ಒಂದು ಮನೆಮದ್ದು ಸೋಶಿಯಲ್ ಮೀಡಿಯಾಗಳಲ್ಲಿ (Social media) ವೈರಲ್ ಆಗುತ್ತಲೇ ಇರುತ್ತದೆ. ಅವನ್ನೆಲ್ಲಾ ಖಂಡಿತಾ ಕಣ್ಣು ಮುಚ್ಚಿ ನಂಬಬಾರದು. ಸದ್ಯ ಈಗ ಬೆಳ್ಳುಳ್ಳಿ (Garlic) ತಿಂದರೆ ಕರೋನಾ ವೈರಸ್ ಸಾಯುತ್ತದೆ. ಬೆಳ್ಳುಳ್ಳಿ ಎದುರು ಕರೋನಾ (Coroanavirus) ಆಟ ನಡೆಯಲ್ಲ ಎಂಬುದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಸತ್ಯ ಎಷ್ಟಿದೆ ನೋಡೋಣ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಬೆಳ್ಳುಳ್ಳಿ ಎದುರು ಕರೋನಾ ಆಟ ನಡೆಯೋದಿಲ್ಲ ಅನ್ನೋದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವಾಗುತ್ತಿರುವ ಲೇಟೆಸ್ಟ್ ಮನೆಮದ್ದು. ಈ ಮಾತಿನಲ್ಲಿ ಸತ್ಯ ಎಷ್ಟಿದೆ ಅನ್ನೋದನ್ನು ನಾವು ತಿಳಿದುಕೊಳ್ಳಲೇ ಬೇಕು. ಬೆಳ್ಳುಳ್ಳಿ ತಿಂದರೆ ಈ ಮಾರಕ ವೈರಸ್ ನಿಂದ ನಾವು ಬಚಾವ್ ಆಗ ಬಹುದೇ..? ಅದಕ್ಕೆ ಉತ್ತರ ಹುಡುಕೋಣ.
ಬೆಳ್ಳುಳ್ಳಿ ಒಂದು ಹೆಲ್ತಿ ಹರ್ಬ್. ಅದರಲ್ಲಿ ಎರಡು ಮಾತಿಲ್ಲ. ಇದನ್ನು ತಿಂದರೆ ಹೊಟ್ಟೆ ಸಮಸ್ಯೆ ಪರಿಹಾರವಾಗುತ್ತದೆ. ಇದರಿಂದ ಕರೋನಾ ವೈರಸ್ ಸಾಯುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಬೆಳ್ಳುಳ್ಳಿಯ ಉಷ್ಣ ಪ್ರವೃತ್ತಿಯ ಉಂಟುಮಾಡುವ ವಸ್ತು. ಕರೋನಾ ವೈರಸ್ ಕೊಲ್ಲುತ್ತದೆ ಎಂದು ಕೊಂಡು ಸಿಕ್ಕಾಪಟ್ಟೆ ಬೆಳ್ಳುಳ್ಳಿ ತಿಂದರೆ ಬೇಸಿಗೆ ಕಾಲದಲ್ಲಿ ಆರೋಗ್ಯ ಇನ್ನಷ್ಟು ಹದಗೆಡಬಹುದು.
ಬೆಳ್ಳುಳ್ಳಿ ಕರೋನಾ ವೈರಸ್ ನ್ನು ಕೊಲ್ಲುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅದು ಖಂಡಿತವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ತಿಂದರೆ ಇಮ್ಯೂನಿಟಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಬೆಳ್ಳುಳ್ಳಿ ಅನೇಕ ರೋಗಗಳಿಗೂ ರಾಮಬಾಣ.
ಅತಿ ಆದರೆ ಅಮೃತ ಕೂಡಾ ವಿಷ ಆಗುತ್ತದೆ. ಅದು ಬೆಳ್ಳುಳ್ಳಿ ವಿಚಾರದಲ್ಲೂ ಸತ್ಯ. ಇಮ್ಯೂನಿಟಿ ಹೆಚ್ಚಿಸುತ್ತದೆಯೆಂದು ಸಿಕ್ಕಾಪಟ್ಟೆ ಬೆಳ್ಳುಳ್ಳಿ ತಿಂದರೆ ಎದೆಯುರಿ, ಹೊಟ್ಟೆ ಉರಿ, ಡಯರಿಯಾ, ವಾಂತಿ ಉಂಟಾಗುತ್ತದೆ. ಇತ್ತೀಚೆಗೆ ಯಾವುದೇ ಅಪರೇಶನ್ ಆಗಿದ್ದರೂ ನೀವು ಬೆಳ್ಳುಳ್ಳಿ ತಿನ್ನಬೇಡಿ. ಬೆಳ್ಳುಳ್ಳಿ ಸಿಕ್ಕಾಪಟ್ಟೆ ತಿಂದರೆ ತ್ವಚೆ ಹಾಳಾಗುತ್ತದೆ. ತಲೆನೋವು, ಬ್ಲಡ್ ಪ್ರೆಶರ್ ಹೆಚ್ಚಾಗುತ್ತದೆ. ಹಾಗಾಗಿ ಎಷ್ಟು ಬೇಕು ಅಷ್ಟು ಮಾತ್ರ ತಿನ್ನಿ. ಎಲ್ಲಾದಕ್ಕೂ ಒಳ್ಳೆಯದು.