ಮೊಬೈಲ್ ಚಾರ್ಜಿಂಗ್ ಇಡುವ ವೇಳೆ ಮಾಡುವ ಈ ತಪ್ಪಿನಿಂದ ಭಾರೀ ನಷ್ಟವಾಗಬಹುದು

ಯಾವಾಗಲೂ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ಅದರ ಒರಿಜಿನಲ್ ಚಾರ್ಜರ್ ಅನ್ನೇ ಬಳಸಿ.

ನವದೆಹಲಿ : ಪ್ರಸ್ತುತ ಎಲ್ಲರೂ ಸ್ಮಾರ್ಟ್‌ಫೋನ್ (Smartphone) ಬಳಸುತ್ತಿದ್ದಾರೆ. ದಿನವಿಡೀ ಮೊಬೈಲ್ ಬಳಸಿದ ನಂತರ, ಫೋನ್ ಬ್ಯಾಟರಿ ಖಾಲಿಯಾಗುತ್ತದೆ ಮತ್ತೆ ಮೊಬೈಲ್ ಅನ್ನು ಚಾರ್ಜ್ ಮಾಡಬೇಕಾಗುತ್ತದೆ. ಕೆಲವರು ಮೊಬೈಲ್ ಚಾರ್ಜ್ (Mobile Charge) ಮಾಡುವ ವೇಳೆ, ಕೆಲ ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳಿಂದಾಗಿ ನಷ್ಟಅನುಭವಿಸಬೇಕಾಗುತ್ತದೆ.   ಮಾತ್ರವಲ್ಲ, ಮೊಬೈಲ್ ಅನ್ನು ಚಾರ್ಜ್ ಮಾಡುವ ವೇಳೆ ಮಾಡುವ ತಪ್ಪುಗಳಿಂದ ಬ್ಯಾಟರಿ ಹಾಳಾಗುವ ಸಾಧ್ಯತೆಗಳೂ ಇವೆ. ಮೊಬೈಲ್ ಚಾರ್ಜ್ ಮಾಡುವಾಗ ಸಾಮಾನ್ಯವಾಗಿ ಮಾಡುವ ತಪ್ಪುಗಳ ಬಗ್ಗೆ ಇಲ್ಲಿ ಹೇಳುತ್ತೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಯಾವಾಗಲೂ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ಅದರ ಒರಿಜಿನಲ್ ಚಾರ್ಜರ್ ಅನ್ನೇ ಬಳಸಿ. ಬೇರೆ ಚಾರ್ಜರ್ ನಿಂದ ಚಾರ್ಜ್ ಮಾಡಿದರೆ ಫೋನ್ ಏನೋ ಚಾರ್ಜ್ ಆಗುತ್ತದೆ ಆದರೆ ಪೋನಿನ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ.

2 /5

ಕೆಲವರಿಗೆ ಯಾವಾಗ ನೋಡಿದರೂ ಪೋನ್ ಚಾರ್ಜ್ ಗೆ ಇಡುವ ಅಭ್ಯಾಸವಿರುತ್ತದೆ. ಪೋನಿನಲ್ಲಿ 90 ಶೇ. ದಷ್ಟು ಚಾರ್ಜ್ ಇದ್ದರೂ ಮತ್ತೆ ಚಾರ್ಜ್ ಗೆ ಇಡುತ್ತಾರೆ.  ಹೀಗೆ ಪದೇ ಪದೇ ಫೋನನ್ನು ಚಾರ್ಜ್ ಗೆ ಇಡುವುದರಿಂದ ಪೋನಿನ ಬ್ಯಾಟರಿ ಹಾಳಾಗುತ್ತದೆ. 

3 /5

ನೆನಪಿಡಿ.. ಯಾವತ್ತೂ ಫೋನಿನಲ್ಲಿ 20 ಶೇ ದಷ್ಟು ಜಾರ್ಜ್ ಇರುವಾಗಲೇ, ಪೋನ್ ಅನ್ನು ಚಾರ್ಜ್ ಗೆ ಇಟ್ಟಿಬಿಡಿ. ಸಂಪೂರ್ಣ ಚಾರ್ಜ್ ಖಾಲಿ ಆಗುವವರೆಗೂ ಕಾಯಲು ಹೋಗಬೇಡಿ. ಹೀಗೆ ಮಾಡುವುದರಿಂದ ಬ್ಯಾಟರಿ ಬೇಗನೆ ಹಾಳಾಗುವುದಿಲ್ಲ. 

4 /5

ಇನ್ನು ಕೆಲವರು ಪೋನ್ ಅನ್ನು ಚಾರ್ಜ್ ಗೆ ಇಡುವಾಗ ಪೋನ್ ಕವರ್ ಜೊತೆಗೇ ಚಾರ್ಜ್ ಗೆ ಇಡುತ್ತಾರೆ. ಪೋನ್ ಕವರ್ ನೊಂದಿಗೆ ಪೋನ್ ಚಾರ್ಜ್ ಗೆ ಇಡುವುದರಿಂದ ಬ್ಯಾಟರಿ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಬ್ಯಾಟರಿ ಬಹುಬೇಗ ಹಾಳಾಗುವ ಸಾಧ್ಯತೆ ಇರುತ್ತದೆ. 

5 /5

ಪೋನ್ ಅನ್ನು ಬಹಳ ಬೇಗ ಚಾರ್ಜ್ ಮಾಡುವ ಉದ್ದೇಶದಿಂದ ಫಾಸ್ಟ್ ಚಾರ್ಜಿಂಗ್ ಆಪ್ ಅನ್ನು ಡೌನ್ ಲೋಡ್ ಮಾಡಿಬಿಡುತ್ತೇವೆ. ಆದರೆ ನಿಜವಾಗಿಯೂ ,ಈ ಆಪ್  ಬ್ಯಾಕ್ ಗ್ರೌಂಡ್ ನಲ್ಲಿ ಸದಾ ಕಾರ್ಯನಿರ್ವಹಿಸುತ್ತಿರುತ್ತದೆ. ಹಾಗಾಗಿ ಫೋನಿನ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಹಾಗಾಗಿ ಯಾವತ್ತೂ ಇಂತಹ ಥರ್ಡ್ ಪಾರ್ಟಿ ಆಪ್ ಅನ್ನು ಬಳಸಲು ಹೋಗಬೇಡಿ..