Shriya Saran: ತನ್ನ ವೈಯಕ್ತಿಕ ಜೀವನದ ಬಹುದೊಡ್ಡ ರಹಸ್ಯವನ್ನು ಕೊನೆಗೂ ಒಪ್ಪಿಕೊಂಡ ಶ್ರೀಯಾ ಸರನ್

Shriya Saran Photo Gallery - ಬಾಲಿವುಡ್ ನಟ ಅಜಯ್ ದೇವಗನ್  (Ajay Devgn) ಅವರ ದೃಶ್ಯಂ (Drishyam) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಶ್ರೀಯಾ ಸರನ್  (Shriya Saran) ತಮ್ಮ ವೈಯಕ್ತಿಕ ಜೀವನದ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ. 

Shriya Saran Photo Gallery - ಬಾಲಿವುಡ್ ನಟ ಅಜಯ್ ದೇವಗನ್  (Ajay Devgn) ಅವರ ದೃಶ್ಯಂ (Drishyam) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಶ್ರೀಯಾ ಸರನ್  (Shriya Saran) ತಮ್ಮ ವೈಯಕ್ತಿಕ ಜೀವನದ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, ಕೆಲವು ಸಮಯದಿಂದ, ಅವರ ವೈಯಕ್ತಿಕ ಜೀವನದ (Shriya Saran Personal Life) ಬಗ್ಗೆ ಅನೇಕ ರೀತಿಯ ಸುದ್ದಿಗಳು ಕೇಳಿಬಂದಿದ್ದವು. ಆದರೆ ಇದೀಗ ಸ್ವತಃ ತಾನೇ ಕೆಲ ಸಂಗತಿಗಳನ್ನು ಬಹಿರಂಗಪಡಿಸಿರುವ ಶ್ರೀಯಾ ಸರನ್(Drishyam Fame Actress), ವದಂತಿಗಳನ್ನು ತಳ್ಳಿಹಾಕಿದ್ದಾಳೆ.

 

ಇದನ್ನೂ ಓದಿ-Photo Gallery: ಗ್ಲಾಮರ್ ಹಾಗೂ ನಟನೆಯಲ್ಲೂ ಸೈ ಎನಿಸಿಕೊಂಡಿರುವ ನಟಿ ಶ್ರೀಯಾ ಸರನ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /7

1. 2020ರಲ್ಲಿಯೇ ತಾಯಿಯಾಗಿದ್ದಾಳೆ - 2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ ಶ್ರಿಯಾ ಸರನ್ ತಾಯಿಯಾಗಿದ್ದಾಳೆ. ಆದರೆ ಈಗ ಶ್ರೀಯಾ ಆ  ಸಂಗತಿಯನ್ನು ತನ್ನ ಅಭಿಮಾನಿಗಳ ಮುಂದೆ ಬಹಿರಂಗಪಡಿಸಿದ್ದಾಳೆ. ಇದಲ್ಲದೇ, ಅವಳು ತನ್ನ  ಕ್ವಾರಂಟೈನ್ ಅನುಭವವನ್ನು ಕೂಡ ಹಂಚಿಕೊಂಡಿದ್ದಾಳೆ.

2 /7

2. ಪತಿ ಹಾಗೂ ಪುತ್ರಿಯ ಜೊತೆಗೆ ಕಾಣಿಸಿಕೊಂಡ ಶ್ರೀಯಾ - ಶ್ರೀಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಅವಳು ತನ್ನ ಪತಿ ಹಾಗೂ ಪುತ್ರಿಯ ಜೊತೆಗೆ ಕಾಣಿಸಿಕೊಂಡಿದ್ದಾಳೆ.

3 /7

3. ಅಭಿಮಾನಿಗಳಿಗೆ ಬಿಗ್ ಶಾಕ್ - ಈ ವಿಡಿಯೋ ಶೀರ್ಷಿಕೆಯಲ್ಲಿ, ಶ್ರೀಯಾ, 'ಹಲೋ ಸ್ನೇಹಿತರೇ, 2020 ರಲ್ಲಿ, ನನ್ನ ಕ್ವಾರಂಟೈನ್ ತುಂಬಾ ಸುಂದರವಾಗಿತ್ತು ಮತ್ತು ಹುಚ್ಚುತನದಿಂದ ಕೂಡಿತ್ತು. ಇಡೀ ಪ್ರಪಂಚವು ವಿಭಿನ್ನ ರೀತಿಯ ಏರಿಳಿತವನ್ನು ಎದುರಿಸುತ್ತಿರುವಾಗ, ನನ್ನ ಪ್ರಪಂಚವು ಬದಲಾಗಿದೆ' ಎಂದು ಬರೆದಿದ್ದಾಳೆ.

4 /7

4. ಲಾಕ್ಡೌನ್ ನಲ್ಲಿ ಗರ್ಭಿಣಿಯಾದೆ (Shriya Saran About Pregnancy) - 'ನಮ್ಮ ಜೀವನವು ಸಾಹಸ, ಉತ್ಸಾಹ ಮತ್ತು ಕಲಿಕೆಯಿಂದ ತುಂಬಿದೆ. ಈ ಸಮಯದಲ್ಲಿ ನಾವು ಒಂದು ಸುಂದರ ದೇವತೆಯನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದೇವೆ. ನಾವು ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ' ಎಂದು ಶ್ರೀಯಾ ಹೇಳಿದ್ದಾಳೆ.  

5 /7

5. ಪ್ರೇಮ ಕಥೆ ಹೇಗೆ ಮುಂದುವರೆದಿದೆ  (Shriya Saran Big Announcement) - 2018ರಲ್ಲಿ ಶ್ರೀಯಾ ಸರನ್ ರಾಜಸ್ಥಾನದಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಆಕೆ ಮಾಲ್ಡೀವ್ಸ್ ನಲ್ಲಿ ಮೊದಲಬಾರಿಗೆ ತನ್ನ ಪತಿಯನ್ನು ಭೇಟಿಯಾಗಿದ್ದಾಳೆ ಎನ್ನಲಾಗಿದೆ. ಅಂದಿನಿಂದ ಈವರೆಗೆ ಆಕೆ ಗರ್ಭಿಣಿಯಾಗಿರುವ ಕುರಿತು ಸುದ್ದಿಗಳು ಹರಿದಾಡುತ್ತಿವೆ.  

6 /7

6. ಬಾರ್ಸಿಲೋನಾದಿಂದ ಭಾರತಕ್ಕೆ ಮರಲಿದ್ದಳು ಶ್ರೀಯಾ - ದೀರ್ಘಕಾಲದವರೆಗೆ ಶ್ರೀಯಾ ತನ್ನ ಪತಿಯೊಂದಿಗೆ ಬಾರ್ಸಿಲೋನಾದಲ್ಲಿ ವಾಸಿಸುತ್ತಿದ್ದಳು ಆದರೆ ನಂತರ 2020 ರಲ್ಲಿ ಭಾರತಕ್ಕೆ ಮರಳಲು ನಿರ್ಧರಿಸಿದ್ದಾಳೆ. ಪ್ರಸ್ತುತ ಆಕೆ  ಮಗುವಿನ ತಾಯಿಯಾಗಿದ್ದು ಭಾರತದಲ್ಲಿಯೇ ವಾಸಿಸುತ್ತಿದ್ದಾಳೆ.

7 /7

7. ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಶ್ರೀಯಾ - ಶ್ರೀಯಾ ವೃತ್ತಿಜೀವನದ ಕುರಿತು ಹೇಳುವುದಾದರೆ, ಶ್ರೀಯಾ ದಕ್ಷಿಣ ಚಿತ್ರರಂಗದ ಜನಪ್ರೀಯ ಹಾಗೂ ಭಾರಿ ಚರ್ಚೆಗಿಟ್ಟಿಸಿದ ನಟಿಯಾಗಿದ್ದಾಳೆ. ಆದರೆ ಭಾರತದಲ್ಲಿ ಶ್ರೀಯಾ ಕೆಲ ಆಯ್ದ ಪ್ರಾಜೆಕ್ಟ್ ಗಳಲ್ಲಿ ಮಾತ್ರ ಕೆಲಸ ಮಾಡಿದ್ದಾಳೆ. ಆದರೆ, ಆಕೆ ನಟಿಸಿರುವ ಎಲ್ಲಾ ಚಿತ್ರಗಳು ಸಕತ್ ಬಿಸ್ನೆಸ್ ಮಾಡಿವೆ.