ನವೆಂಬರ್ 20ರಂದು ಭಾರತೀಯ ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ 51 ನೇ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ಡೈರೆಕ್ಟೊರೇಟ್ ಪ್ರಶಸ್ತಿ' ನೀಡಲಾಗಿದೆ.
ಏಕ್ತಾ ಕಪೂರ್ ಅಂತಾರಾಷ್ಟ್ರೀಯ 'ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ' ಪಡೆದ ಮೊದಲ ಭಾರತೀಯ ಮಹಿಳಾ ಚಲನಚಿತ್ರ ನಿರ್ಮಾಪಕಿಯಾಗಿದ್ದಾರೆ.
ಏಕ್ತಾ ಕಪೂರ್ ಅವರ ಗೆಲುವು ಟೆಲಿವಿಷನ್ ಉದ್ಯಮಕ್ಕೆ ಅವರು ನೀಡಿರುವ ಕೊಡುಗೆಗಳು ಮತ್ತು ಈ ಕ್ಷೇತ್ರದಲ್ಲಿ ಅವರ ಹೊಸ ಹೊಸ ಐಡಿಯಾಗಳು, ಸಾಂಪ್ರದಾಯಿಕ ಮನಸ್ಥಿತಿಯನ್ನು ಮುರಿಯುವ ಹಲವು ವಿಚಾರಗಳಿಗೆ ಸಿಕ್ಕ ಗೆಲುವಾಗಿದೆ.
51ನೇ ಇಂಟರ್‌ನ್ಯಾಶನಲ್ ಎಮ್ಮಿ ಅವಾರ್ಡ್ಸ್‌ನಲ್ಲಿ ಏಕ್ತಾ ಕಪೂರ್ ಕಿತ್ತಳೆ ಬಣ್ಣದ ಹೆವಿ ವರ್ಕ್ ಇರುವ ಡ್ರೆಸ್ ಧರಿಸಿದ್ದರು.
ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ನಂತರ ಅವರು ಅವರು ತಮ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಟ ಜೀತೇಂದ್ರ ಕಪೂರ್ ಮತ್ತು ಶೋಭಾ ಕಪೂರ್ ಪುತ್ರಿಯಾದ ಏಕ್ತಾ ಕಪೂರ್, 1994 ರಲ್ಲಿ ಏಕ್ತಾ ಕಪೂರ್ ಬಾಲಾಜಿ ಟೆಲಿಫಿಲ್ಮಂ ಪ್ರಾರಂಭಿಸಿದರು.
ಏಕ್ತಾ ಕಪೂರ್‌ರವರ ಬಾಲಾಜಿ ಬ್ಯಾನರ್‌ನಿಂದ ಭಾರತದ ಟಿವಿ ಇತಿಹಾಸದಲ್ಲಿ ಹೊಸ ಬದಲಾವಣೆಗಳು ಶುರುವಾಗಿ, 17,000 ಗಂಟೆಗಳ ಟಿವಿ ಸೀರಿಯಲ್ಸ್ ಮತ್ತು 45 ಚಲನಚಿತ್ರಗಳನ್ನು ನಿರ್ಮಿಸಲಾಗಿದೆ.