Endangered Sea Mammal: ಜಗತ್ತಿನಲ್ಲಿ ಈ ಜಾತಿಯ ಮೀನು ಉಳಿದಿರೋದು ಕೇವಲ 10 ಮಾತ್ರ!

ಡಾ. ಜಾಕ್ವೆಲಿನ್ ಪ್ರಕಾರ, ಈ ಜೀವಿಯನ್ನು ಉಳಿಸುವುದು ಮನುಷ್ಯರಿಂದ ಸಾಧ್ಯ. ಅಳಿವಿನ ಅಂಚಿನಲ್ಲಿರುವ ಈ ಜೀವಿಗಳಿಗೆ ಬದುಕುಳಿಯಲು ಅವಕಾಶ ನೀಡುವ ಅಗತ್ಯತೆ ಸದ್ಯದ ಪರಿಸ್ಥಿತಿಯಲ್ಲಿದೆ. 
 

ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಸಸ್ಯ, ಮರ, ಮೀನುಗಳ ಬಗ್ಗೆ ನಾವು ಈಗಾಗಲೇ ಕೇಳಿದ್ದೇವೆ. ಅಂತಹ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ವಕ್ವಿಟಾ ಪೋರ್ಪೊಯಿಸ್ ಎಂಬ ಜೀವಿಯೂ ಒಂದು. ಈ ಜಾತಿಯ ಮೀನು ಇಡೀ ಜಗತ್ತಿನಲ್ಲಿ ಉಳಿದಿರುವುದು ಕೇವಲ 10 ಮಾತ್ರ ಎಂಬುದು ಆಶ್ಚರ್ಯಕರ ಸಂಗತಿ. ಈ ಜಾತಿಯ ಮೀನಿನ ಬಗ್ಗೆ ನಿಮಗೆ ಕೆಲವು ವಿಶೇಷ ವಿಷಯಗಳನ್ನು ಇಲ್ಲಿ ತಿಳಿಯಪಡಿಸುತ್ತೇವೆ. 
 

1 /5

ಅಳಿವಿನಂಚಿನಲ್ಲಿರುವ ವಕ್ವಿಟಾ ಪೋರ್ಪೊಯಿಸ್ ಅನ್ನು ಭಾರತದಲ್ಲಿ ಸೂರ್ಯ ಎಂದು ಕರೆಯಲಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಅಳಿವಿನ ಅಂಚಿನಲ್ಲಿರುವ ಈ ಜೀವಿಯನ್ನು ಉಳಿಸಬಹುದಂತೆ. ಈ ಜೀವಿಗಳ ಬಣ್ಣ ಬೂದು ಮತ್ತು ಬೆಳ್ಳಿ. ಇವು 5 ಅಡಿ ಉದ್ದ ಮತ್ತು 54 ಕೆಜಿ ತೂಕವಿರುತ್ತವೆ. ಅವುಗಳ ದೇಹದ ಕೆಳಭಾಗವು ಬಿಳಿ ಮತ್ತು ಮೇಲಿನ ಭಾಗ ಬೂದು ಬಣ್ಣದಿಂದ ಕೂಡಿರುತ್ತದೆ. ಜೊತೆಗೆ ಈ ಜೀವಿಯ ಕಣ್ಣಿನ ಸುತ್ತ ಕಾಜಲ್‌ ಲೇಪಿಸಿದಂತೆ ನೈಸರ್ಗಿಕವಾದ ಬಣ್ಣ ಕಂಡುಬರುತ್ತದೆ. 

2 /5

ಈ ಅಳಿವಿನಂಚಿನಲ್ಲಿರುವ ಪ್ರಭೇದಗಳು ಮೆಕ್ಸಿಕೋದ ಕ್ಯಾಲಿಫೋರ್ನಿಯಾ ಕೊಲ್ಲಿಯಲ್ಲಿ ಮಾತ್ರ ಕಂಡುಬರುತ್ತವೆ. ಇವುಗಳ ಅಳಿವಿಗೆ ದೊಡ್ಡ ಕಾರಣವೆಂದರೆ ಟೊಟೊಬಾ ಮೀನುಗಳ ಬೇಟೆ. ವಾಸ್ತವವಾಗಿ ವಿಸಿಟಾ ಪೊರ್ಪೊಯಿಸ್‌ಗಳು ಟೊಟೊಬಾ ಮೀನುಗಳನ್ನು ತಿನ್ನುತ್ತವೆ. ವಿಕಿಟಾ ಪೋರ್ಪೊಯಿಸ್ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ.  

3 /5

ವಿಸಿಟಾ ಪೋರ್ಪೊಯಿಸ್ ಅನ್ನು ಉಳಿಸಲು ಸಾಧ್ಯ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ. ಆದರೆ ಇದಕ್ಕಾಗಿ, ಭಾರವಾದ ಬಲೆಯಾಗಿರುವ ಗಿಲ್ನೆಟ್‌ಗಳನ್ನ ಬಳಕೆ ಮಾಡದಿರಬೇಕು. ಗಿಲ್ನೆಟ್‌ ಬಲೆಗಳನ್ನು ದೊಡ್ಡ ಮೀನುಗಳ ಬೇಟೆಗೆ ಬಳಸಲಾಗುತ್ತದೆ. 

4 /5

 ‘ಸೈನ್ಸ್ ಜರ್ನಲ್’ನಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ, ಈ ಜೀವಿಗಳಲ್ಲಿ ಕಡಿಮೆ ಆನುವಂಶಿಕ ವ್ಯತ್ಯಾಸವಿದೆ ಎಂದು ಡಾ.ಜಾಕ್ವೆಲಿನ್ ಹೇಳುತ್ತಾರೆ. ಈ ಜೀವಿಯನ್ನು ಉಳಿಸುವುದು ಸುಲಭವಲ್ಲ ಆದರೆ ಅಸಾಧ್ಯವೂ ಅಲ್ಲ. ಅದನ್ನು ಉಳಿಸುವಲ್ಲಿ, ಮೆಕ್ಸಿಕೋ ಸರ್ಕಾರದ ರಾಜತಾಂತ್ರಿಕರು, ಸ್ಥಳೀಯ ಜನರು, ಪರಿಸರವಾದಿಗಳ ಕಾಳಜಿ ಅಗತ್ಯವಾಗಿರುತ್ತದೆ

5 /5

ಡಾ.ಜಾಕ್ವೆಲಿನ್ ಪ್ರಕಾರ, ಈ ಜಾತಿಯ ರಕ್ಷಣೆಗೆ ಅವಕಾಶ ನೀಡಿದರೆ ಮುಂದಿನ 50 ವರ್ಷಗಳಲ್ಲಿ ವಿಸಿಟಾ ಮೀನುಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಅದರ ಡಿಎನ್ಎ ಮೂಲಕ ಜೀವಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಪರಿಸರವನ್ನು ಅವುಗಳಿಗೆ ಬೇಕಾದ ರೀತಿಯಲ್ಲಿ ಅನುಕೂಲಕರವಾಗಿ ಮಾಡಿದರೆ, ಅದರ ಸಂಖ್ಯೆಯನ್ನು ವಿನಾಶದಿಂದ ಉಳಿಸಬಹುದು ಎಂದು ಹೇಳಿದ್ದಾರೆ.