ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಉದ್ಯಮಿ ಮೋದಿ ಅವರು ಮಾಜಿ ವಿಶ್ವ ಸುಂದರಿ ಜೊತೆಗಿರುವ ಕೆಲವು ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಡೇಟಿಂಗ್ ಮಾಡುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, "ಅಂತಿಮವಾಗಿ ಹೊಸ ಜೀವನಕ್ಕೆ ಹೊಸ ಆರಂಭ" ಎಂದು ಶೀರ್ಷಿಕೆ ನೀಡಿದ್ದಾರೆ.
ಲಲಿತ್ ಮೋದಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಥಾಪಕ. ಮೋದಿ ಅವರು ಗಾಡ್ಫ್ರೇ ಫಿಲಿಪ್ಸ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿದ್ದಾರೆ. ಪ್ರಸ್ತುತ ಲಂಡನ್ನಲ್ಲಿ ನೆಲೆಸಿರುವ ಲಲಿತ್ ಮೋದಿ ಬಳಿ ಅಪಾರ ಬೆಲೆಬಾಳುವ ಕಾರುಗಳಿವೆ. ಅದರ ಬೆಲೆ ಕೇಳಿದರೆ ಎಂತಹವರಿಗೂ ಶಾಕ್ ಆಗುತ್ತದೆ. ಕಾರುಗಳ ಮೇಲಿನ ಪ್ರೀತಿಯಿಂದಾಗಿ ಲಲಿತ್ ಮೋದಿ ಅನೇಕ ವಿದೇಶಿ ಬ್ರ್ಯಾಂಡ್ನ ಕಾರುಗಳನ್ನು ಖರೀದಿ ಮಾಡಿದ್ದಾರೆ.
ಲಲಿತ್ ಮೋದಿ ಅವರು ಫೆರಾರಿ ಎಫ್12 ಬರ್ಲಿನೆಟ್ಟಾ ಸ್ಪೋರ್ಟ್ಸ್ ಕಾರನ್ನು ತಮ್ಮ ಪುತ್ರನಿಂದ 50ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಪಡೆದಿದ್ದಾರೆ. ಕಾರಿಗೆ ‘CRI3KET’ ಎಂದು ಬರೆದ ವಿಶೇಷ ನಂಬರ್ ಪ್ಲೇಟ್ ಇದೆ. ಈ ಕಾರು ಭಾರತದ ಮಾರುಕಟ್ಟೆಗೆ ಇನ್ನೂ ಮಾರಾಟವಾಗಿಲ್ಲ. ಇದರ ಬೆಲೆ ಸುಮಾರು 4.72 ಕೋಟಿ.
ಬ್ಲೂ ಟಿಡಿಎಫ್ ಪೇಂಟ್ ಕಲರ್ನ ಫೆರಾರಿ 488 ಪಿಸ್ತಾ ಸ್ಪೈಡರ್ ಅರ್ಜೆಂಟೊ ಲಿವರಿಯ ಒಡೆಯ ಲಲಿತ್ ಮೋದಿ, ಡಿಸೆಂಬರ್ 2020 ರಲ್ಲಿ ಈ ಕಾರನ್ನು ಖರೀಸಿದ್ದಾರೆ. 'MOD IR' ಎಂದು ಬರೆದಿರುವ ವಿಶೇಷ ನಂಬರ್ ಪ್ಲೇಟ್ ಅನ್ನು ಇದು ಹೊಂದಿದೆ. ಫೆರಾರಿ 488 ಪಿಸ್ತಾ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತದೆ.
ಲಲಿತ್ ಮೋದಿ ಒಡೆತನದ ವಿಶೇಷ ನಂಬರ್ ಪ್ಲೇಟ್ ಹೊಂದಿರುವ ಮತ್ತೊಂದು ವಿಶೇಷ ಕಾರು ಎಂದರೆ ಅದು ಬೆಂಟ್ಲಿ ಮುಲ್ಸಾನ್ನೆ ಸ್ಪೀಡ್. ಇದು ತುಂಬಾ ಅಪರೂಪದ ಕಾರು. ಕೇವಲ 4.8 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗವನ್ನು ತಲುಪುತ್ತದೆ.
ಲಲಿತ್ ಮೋದಿ ಅವರು ಭಾರತದಲ್ಲಿ ತಮ್ಮ BMW 7 ಸಿರೀಸ್ನ ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಇದರ ಬೆಲೆ ಸುಮಾರು 1.95 ಕೋಟಿ ರೂ.
McLaren 720S ಲಲಿತ್ ಮೋದಿ ಅವರ ಮಗ ಒಡೆತನದಲ್ಲಿದೆ ಮತ್ತು ಉದ್ಯಮಿ ತಮ್ಮ Instagram ಖಾತೆಯಲ್ಲಿ ಸೂಪರ್ ಕಾರಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕಾರು 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್ನಿಂದ ಚಾಲಿತವಾಗಿದೆ.