"ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ" ಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ ವೈರಲ್!!

Star Actor Sensatinal Comment on Aishwarya Rai: ಇತ್ತೀಚೆಗೆ ವೃತ್ತಿಗಿಂತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿರುವ ನಟಿ ಐಶ್ವರ್ಯ ರೈ ಬಗ್ಗೆ ಖ್ಯಾತ ನಟ ಸೆನ್ಸೇಷನಲ್‌ ಹೇಳಿಕೆಯೊಂದನ್ನು ನೀಡಿದ್ದಾರೆ.. 
 

1 /7

ನಟಿ ಐಶ್ವಯಾ ರೈ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಐಶ್ವರ್ಯಾ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ನಟಿ ಬಾಲಿವುಡ್‌ನಿಂದ ದೂರ ಉಳಿದಿದ್ದಾರೆ. ಆದರೆ ಯಾವುದೋ ಕಾರಣಕ್ಕೆ ನಟಿ ಸುದ್ದಿಯಲ್ಲಿದ್ದಾರೆ.  

2 /7

ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಖ್ಯಾತ ನಟ ಐಶ್ವರ್ಯಾ ಬಗ್ಗೆ 'ಐಶ್ವರ್ಯಾ ಯಾವಾಗಲೂ ಬೇರೆಯವರ ಹೆಂಡತಿಯಾಗಿಯೇ ಇರುತ್ತಿದ್ದಳು...' ಎಂದು ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಐಶ್ವರ್ಯಾ ರೈ ಜೊತೆಗೆ ಆ ನಟ ಕೂಡ ಚರ್ಚೆಗೆ ಬಂದಿದ್ದಾರೆ.  

3 /7

ಐಶ್ವರ್ಯ ರೈ ಬಗ್ಗೆ ಈ ರೀತಿ ಹೇಳಿಕೆ ನೀಡಿರುವ ನಟ ಬೇರೆ ಯಾರೂ ಅಲ್ಲ ಚಿಯಾನ್ ವಿಕ್ರಮ್. ಸದ್ಯ ಚಿಯಾನ್ 'ತಂಗಲಾನ್' ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. 'ಪೊನ್ನಿಯಿನ್ ಸೆಲ್ವನ್ 2' ಚಿತ್ರದಲ್ಲಿ ಚಿಯಾನ್ ಮತ್ತು ಐಶ್ವರ್ಯ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಕೂಡ ಅಭಿಮಾನಿಗಳಿಗೆ ಸಖತ್‌ ಇಷ್ಟವಾಗಿತ್ತು..   

4 /7

ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ಅಭಿಷೇಕ್ ನನಗೆ ತುಂಬಾ ಒಳ್ಳೆಯ ಸ್ನೇಹಿತ. ಹಾಗಾಗಿ ಬಚ್ಚನ್ ಕುಟುಂಬದ ಜೊತೆಗೆ ಒಂದೊಳ್ಳೆ ಬಾಂಧವ್ಯ ಇದೆ. ಐಶ್ವರ್ಯಾ ಮತ್ತು ನನ್ನದು ತೆರೆಯಲ್ಲಿ ಉತ್ತಮ ಕೆಮಿಸ್ಟ್ರಿ ಇದೆ.  ಪೊನ್ನಿಯಿನ್ ಸೆಲ್ವನ್ ಎರಡರಲ್ಲೂ, ನಮ್ಮ ಪ್ರೇಮಕಥೆಯು ಅಪೂರ್ಣವಾಗಿ ಉಳಿದಿದೆ... ಎರಡೂ ಚಿತ್ರಗಳಲ್ಲಿ, ಐಶ್ವರ್ಯ ಇನ್ನೊಬ್ಬನ ಹೆಂಡತಿ ಉಳಿದುಕೊಂಡಳು.. ನಾನು ತೀರಿಕೊಂಡೆ ...'  

5 /7

'ಮುಂದಿನ ಚಿತ್ರದಲ್ಲಿ ಐಶ್ವರ್ಯಾ ಮತ್ತು ನನಗೆ ಸುಖಾಂತ್ಯವಿರಲಿ ಎಂದು ನಿರ್ದೇಶಕ ಮಣಿರತ್ನಂ ಅವರಿಗೆ ಹೇಳಿದ್ದೇನೆ... ಕನಿಷ್ಠ ಅಭಿಮಾನಿಗಳಿಗೆ ಹ್ಯಾಪಿ ಎಂಡಗ್‌ ನಿಡೋಣವೆಂದು..' ಎಂದಿದ್ದಾರೆ.. ಅಲ್ಲದೇ ಚಿಯಾನ್ ಐಶ್ವರ್ಯಾ ಅವರನ್ನು ಹೊಗಳಿದ್ದಾರೆ. 'ಐಶ್ವರ್ಯಾ ದೊಡ್ಡ ನಟಿ. ಐಶ್ವರ್ಯಾ ತನ್ನ ಕೆಲಸದ ಬಗ್ಗೆ ಪ್ರಾಮಾಣಿಕಳು ವಿಶೇಷವೆಂದರೇ ನಾವು ಒಳ್ಳೆಯ ಸ್ನೇಹಿತರಾಗಿದ್ದೇವೆ...' ಎಂದು ನಟ ಹೇಳಿದ್ದಾರೆ.  

6 /7

ಇನ್ನು ಚಿಯಾನ್ ಸಿನಿಮಾಗಳ ಬಗ್ಗೆ ಮಾತನಾಡುವುದಾದರೇ 'ತಂಗಲಾನ್' ಎಲ್ಲೆಡೆ ಜನಪ್ರಿಯತೆ ಗಳಿಸುತ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ 100 ಕೋಟಿ ರೂ.ಗಳ ಗಡಿ ದಾಟಿದೆ.  

7 /7

ಇನ್ನು ಐಶ್ವರ್ಯಾ ರೈ 2007 ರಲ್ಲಿ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಮದುವೆಯ ನಂತರ, ನಟಿ 2011 ರಲ್ಲಿ ಆರಾಧ್ಯ ಅವರಿಗೆ ಜನ್ಮ ನೀಡಿದರು. ಆರಾಧ್ಯ ಮತ್ತು ಐಶ್ವರ್ಯಾ ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.