ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ʼಖ್ಯಾತ ಗಾಯಕ ಕೈಲಾಶ ಖೇರ್‌ʼ..! ಏನಾಯ್ತು ಸ್ಟಾರ್‌ ಸಿಂಗರ್‌ ಬದುಕಿನಲ್ಲಿ..?

Kailash Kher suicide : ಪ್ರತಿಯೊಬ್ಬ ನಟನೂ ಬಾಲಿವುಡ್‌ಗೆ ಕಾಲಿಡಲು ಬಯಸುತ್ತಾನೆ. ಆ ದಿಸೆಯಲ್ಲಿಯೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಒಂದೊಂದೆ ಹೆಜ್ಜೆಗಳನ್ನು ಇಡುತ್ತಾರೆ. ಪ್ರತಿದಿನ ಅನೇಕ ಜನರು ಹಲವಾರು ಕನಸುಗಳೊಂದಿಗೆ ಬಣ್ಣದ ಲೋಕಕ್ಕೆ ಬರುತ್ತಾರೆ.. ಆದರೆ ಇಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ.. 

1 /7

ಪ್ರತಿಯೊಬ್ಬ ನಟನೂ ಬಾಲಿವುಡ್‌ಗೆ ಕಾಲಿಡಲು ಬಯಸುತ್ತಾನೆ. ಆ ದಿಸೆಯಲ್ಲಿ ಶ್ರಮ ವಹಿಸುತ್ತಾರೆ.. ಆದರೆ ಅದು ಅಷ್ಟು ಸರಳವಲ್ಲ. ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಲ್ಲವನ್ನೂ ಎದುರಿಸಿ, ಏಳುಬೀಳುಗಳನ್ನು ಗೆದ್ದು, ಯಶಸ್ಸು ಗಳಿಸುವುದ ಸಾಮಸ್ಯವಲ್ಲ.. ಸಧ್ಯ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು, ಬಿದ್ದು ಎದ್ದು ಸ್ಟಾರ್‌ಗಿರಿ ಪಡೆದ ಈ ಸಿಂಗರ್‌ ಕಥೆ ನಿಮಗೆ ಸ್ಪೂರ್ತಿ ನೀಡುತ್ತೆ..

2 /7

ಕೈಲಾಶ್ ಖೇರ್ ಈ ಹೆಸರನ್ನು ದೇಶದ ಜನ ಕೇಳಿಯೇ ಇರುತ್ತಾರೆ.. ಕನ್ನಡಿಗರಿಗೂ ಇವರ ಹಾಡುಗಳು ಅಚ್ಚು ಮೆಚ್ಚು. ಕೈಲಾಶ್‌ ತಮ್ಮ ಹಾಡುಗಳ ಮೂಲಕ ಕೋಟ್ಯಂತರ ಜನರ ಪ್ರೀತಿಯನ್ನ ಗಳಿಸಿದಸ್ದಾರೆ. ಇಂತಹ ಸಿಂಗರ್‌  ಬದುಕು ಇದ್ದಕ್ಕಿದ್ದಂತೆ ಕತ್ತಲೆ ಕೂಪದಲ್ಲಿ ಮುಳುಗಿತ್ತು.

3 /7

ಗಾಯಕ ಕೈಲಾಶ್ ಖೇರ್ ಗಾಯನವನ್ನು ತಮ್ಮ ತಂದೆಯಿಂದ ಕಲಿತರು. 14ನೇ ವಯಸ್ಸಿನಲ್ಲಿ ಏನಾದರೂ ಮಾಡಬೇಕೆಂಬ ಕನಸನ್ನು ಹೊತ್ತು ಮನೆ ಬಿಟ್ಟ, ಸಿಂಗರ್‌ ಪ್ರಯಾಣ ಅಷ್ಟು ಸರಳವಾಗಿರಲಿಲ್ಲ. ಊಟ, ನಿದ್ದೆ, ಇರಲು ಸರಿಯಾದ ಸ್ಥಳ ಇಲ್ಲದೆ ಹೋರಾಡಬೇಕಾಯಿತು..

4 /7

20-21ನೇ ವಯಸ್ಸಿನಲ್ಲಿ.. ಕೈಲಾಶ್‌ ಖೇರ್ ಹಾಡುವುದನ್ನು ಬಿಟ್ಟು ರಫ್ತು ಉದ್ಯಮಕ್ಕೆ ಸೇರಿದರು. ಆದರೆ ಅವರ ಹಣೆಬರಹದಲ್ಲಿ ಬೇರೆಯೇ ಬರೆದಿತ್ತು. ಆ ವ್ಯವಹಾರವು ನಷ್ಟ ಅನುಭವಿಸಿತು. ಇದರಿಂದಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದ ಕೈಲಾಶ್‌ ಆತ್ಮಹತ್ಯೆಗೂ ಪ್ರಯತ್ನಿ ನದಿಗೆ ಹಾರಿ ಬದುಕುಳಿದರು..

5 /7

ಕೈಲಾಶ್ ಖೇರ್ 2001 ರಲ್ಲಿ ಮುಂಬೈಗೆ ಬಂದರು. ಇಲ್ಲಿಂದ ಅವರ ಬದುಕು ಬದಲಾಯಿತು. ಜಾಹೀರಾತಿಗೆ ಜಿಂಗಲ್ಸ್ ಬರೆಯುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಕ್ರಮೇಣ ಸಂಗೀತದ ಹಾದಿಯನ್ನು ಹಿಡಿದರು. 'ರಬ್ಬಾ ಇಷ್ಕ್ ನಾ ಹೋ' ಹಾಡಿನ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರು. ಆ ನಂತರ ಅವರು ಅನೇಕ ಹಿಟ್ ಹಾಡುಗಳನ್ನು ನೀಡಿದರು.

6 /7

ಕೈಲಾಸ್ ಖೇರ್ ಹಾಡಿದ ‘ಅಲ್ಲಾ ಕೆ ಬಂದೆ’ ಹಾಡು ಬಹಳ ಜನಪ್ರಿಯವಾಯಿತು. ಈ ಹಾಡು ಅವರನ್ನು ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ಮಾಡಿತು. ಇಂದು ಕೈಲಾಶ್ ಖೇರ್ ತಮ್ಮ ವೈವಿಧ್ಯಮಯ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ. ಗಾಯಕನ ದೊಡ್ಡ ವಿಶೇಷತೆಯೆಂದರೆ.. ಅವರ ಧ್ವನಿ, ಅವರ ಹಾಡುಗಳು ಇಂದಿಗೂ ಪ್ರಪಂಚದಾದ್ಯಂತ ಕೇಳುಗರ ಹೃದಯವನ್ನು ಗೆಲ್ಲುತ್ತವೆ.

7 /7

ಪ್ರತಿ ಹಾಡಿಗೆ ರೂ.50 ಚಾರ್ಜ್ ಮಾಡುತ್ತಿದ್ದ ಕೈಲಾಶ್ ಖೇರ್ ಈಗ ಪ್ರತಿ ಹಾಡಿಗೆ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಈ ಗಾಯಕ ತನ್ನ ಪ್ರತಿ ಹಾಡಿಗೆ 10 ರಿಂದ 20 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಕೈಲಾಶ್‌ ಒಟ್ಟು ಸಂಪತ್ತು 292 ಕೋಟಿ ರೂ.