Astro Tips: ಗುರುವಿನ ಹಿಮ್ಮುಖ ಸಂಚಾರದಿಂದ ಒಂದೇ ವರ್ಷದಲ್ಲಿ ಈ 3 ರಾಶಿಯವರಿಗೆ ರಾಜಯೋಗ ಸಿಗಲಿದೆ!

Jupiter Retrograde 2024: ಪ್ರಸ್ತುತ ಗುರು ಗ್ರಹವು ವೃಷಭ ರಾಶಿಯಲ್ಲಿದ್ದು, ಈ ರಾಶಿಯಲ್ಲಿ ಗುರು 2025ರವರೆಗೆ ಇರುತ್ತದೆ. ಆದರೆ ಅಕ್ಟೋಬರ್ 9ರಂದು ಗುರುವು ಮೇಷ ರಾಶಿಯಲ್ಲಿ ಸಾಗಲು ಪ್ರಾರಂಭಿಸುತ್ತದೆ. ಫೆಬ್ರವರಿ 2025ರವರೆಗೆ ಗುರು ಈ ಸ್ಥಾನದಲ್ಲಿರಲಿದ್ದು, ಗುರುವಿನ ಈ ಸಂಕ್ರಮಣ ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶ ನೀಡಲಿದೆ.

Jupiter Retrograde 2024: ನವಗ್ರಹಗಳಲ್ಲಿ ಗುರುವನ್ನು ದೇವಗುರು ಎಂದು ಕರೆಯಲಾಗುತ್ತದೆ. ಜೀವನದಲ್ಲಿ ಸುಖ-ದುಃಖಗಳು, ಬೆಳವಣಿಗೆ, ಶಾಂತಿ ಮತ್ತು ಜ್ಞಾನ, ಸಂತತಿ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಅದೃಷ್ಟದಂತಹ ಎಲ್ಲಾ ಸಂತೋಷಗಳಿಗೆ ಗುರುದೇವ ಕಾರಣವೆಂದು ನಂಬಲಾಗುತ್ತದೆ. ಯಾರ ಜಾತಕದಲ್ಲಿ ಗುರು ಉತ್ತಮವಾಗಿ ಸ್ಥಿತನಾದರೆ ಅಂಥವರ ಶಿಕ್ಷಣ, ವಿದೇಶ ಪ್ರವಾಸ, ವ್ಯಾಪಾರದಲ್ಲಿ ಬಡ್ತಿ, ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ಗುರುವಿನ ನೇರ ಮತ್ತು ಓರೆಯಾದ ಚಲನೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

ಪ್ರಸ್ತುತ ಗುರು ಗ್ರಹವು ವೃಷಭ ರಾಶಿಯಲ್ಲಿದ್ದು, ಈ ರಾಶಿಯಲ್ಲಿ ಗುರು 2025ರವರೆಗೆ ಇರುತ್ತದೆ. ಆದರೆ ಅಕ್ಟೋಬರ್ 9ರಂದು ಗುರುವು ಮೇಷ ರಾಶಿಯಲ್ಲಿ ಸಾಗಲು ಪ್ರಾರಂಭಿಸುತ್ತದೆ. ಫೆಬ್ರವರಿ 2025ರವರೆಗೆ ಗುರು ಈ ಸ್ಥಾನದಲ್ಲಿರಲಿದ್ದು, ಗುರುವಿನ ಈ ಸಂಕ್ರಮಣ ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶ ನೀಡಲಿದೆ. ಮೇಷ ರಾಶಿಯಲ್ಲಿ ಗುರುವಿನ ವಕ್ರ ಸಂಚಾರದಿಂದ ಯಾರಿಗೆ ಲಾಭವಾಗುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.

2 /4

ಗುರು ಮಿಥುನ ರಾಶಿಯಲ್ಲಿ 10ನೇ ಮನೆಗೆ ಸಾಗುತ್ತದೆ. ಮಿಥುನ ರಾಶಿಯವರು ಸಾಮಾನ್ಯವಾಗಿ ಜೀವನದಲ್ಲಿ ಉತ್ತಮ ಫಲಿತಾಂಶ ಅನುಭವಿಸುವ ಸಮಯ ಬರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಅದೃಷ್ಟದ ಸಾಧ್ಯತೆಯಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ & ಮೌಲ್ಯ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಕುಟುಂಬ ಸದಸ್ಯರು ಸಂಪೂರ್ಣ ಬೆಂಬಲ ಪಡೆಯುತ್ತಾರೆ. ಮಿಥುನ ರಾಶಿಯವರು ಗುರುದೇವನ ಬೆಂಬಲದಿಂದ ಗುರಿ ಸಾಧಿಸಬಹುದು. ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಇದರ ಮೂಲಕ ನೀವು ಹೆಚ್ಚಿನ ಹಣ ಗಳಿಸುತ್ತೀರಿ.

3 /4

ಗುರುವಿನ ಸಂಚಾರ ಕರ್ಕ ರಾಶಿಯವರಿಗೆ ಅನುಕೂಲಕರ ಫಲಿತಾಂಶ ನೀಡುತ್ತದೆ. ನಿಮ್ಮ ದೀರ್ಘ ತೊಂದರೆಗಳು ದೂರವಾಗುತ್ತವೆ. ನಿಮ್ಮ ಸಾಲವನ್ನು ನೀವು ಮರಳಿ ಪಡೆಯಬಹುದು. ಉನ್ನತ ಶಿಕ್ಷಣದ ನಿಮ್ಮ ಆಸೆ ಈಡೇರಲಿದೆ. ವಿದೇಶ ಪ್ರವಾಸಕ್ಕೆ ಹೋಗುವ ನಿಮ್ಮ ಕನಸು ಶೀಘ್ರವೇ ನನಸಾಗುತ್ತದೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಕುಟುಂಬ ಸಂತೋಷದಿಂದ ಕೂಡಿರುತ್ತದೆ. ಕಾನೂನುಬದ್ಧ ಕಾರಣಗಳಿಗಾಗಿ ಹಣ ಖರ್ಚು ಮಾಡುತ್ತೀರಿ ಮತ್ತು ಜೀವನದಲ್ಲಿ ತೃಪ್ತಿ ಹೆಚ್ಚುತ್ತದೆ.

4 /4

ಧನು ರಾಶಿಯಲ್ಲಿ ಜನಿಸಿದವರಿಗೆ ಗುರುವಿನ ಸಂಚಾರದಿಂದ ಭರ್ಜರಿ ಲಾಭವಾಗುತ್ತದೆ. ಈ ರಾಶಿಯವರಿಗೆ ಗುರು 6ನೇ ಮನೆಗೆ ಸಾಗಲಿದ್ದು, ಧನು ರಾಶಿಯವರಿಗೆ ಈ ಅವಧಿಯಲ್ಲಿ ಪೂರ್ಣ ಅದೃಷ್ಟ ಸಿಗುತ್ತದೆ. ಬಹಳ ದಿನಗಳಿಂದ ತಡೆ ಹಿಡಿದಿದ್ದ ಹಣ ನಿಮಗೆ ಸಿಗಲಿದೆ. ನಿಮ್ಮ ಆತ್ಮವಿಶ್ವಾಸ ಸುಧಾರಿಸುತ್ತದೆ & ವ್ಯವಹಾರ ಲಾಭದಾಯಕವಾಗಿರುತ್ತದೆ. ಅನಿರೀಕ್ಷಿತ ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ವೃತ್ತಿಯಲ್ಲಿ ನಿರೀಕ್ಷಿತ ಬೆಳವಣಿಗೆಯ ಸಾಧ್ಯತೆಯಿದೆ. ಹೊಸ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಗಳು ದೊರೆಯಲಿದೆ. ಇದು ಆರೋಗ್ಯಕ್ಕೆ ಉತ್ತಮ ಅವಧಿಯಾಗಿದೆ.