Fashion Tips: ಮಹಿಳೆಯರೇ ಬೇಸಿಗೆಯಲ್ಲಿ ಸ್ಲಿಮ್‌ ಆಗಿ ಕಾಣಲು ಬಳಸಿ ಈ ತರಹದ ಬಟ್ಟೆಗಳನ್ನು...!

ಪುರುಷರಿಗಿಂತ ಮಹಿಳೆಯರು ಬಟ್ಟೆಯ ವಿಷಯದಲ್ಲಿ ಹೆಚ್ಚು ಕುತುಹಲಕಾರಿ ಹಾಗೂ ಜಾಗರೂಕರಾಗಿರುತ್ತಾರೆ.  ಅದರಲ್ಲೂ ದಪ್ಪಗಿರುವ ಮಹಿಳೆಯರು ತಾವು ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು ಅದು ಹೇಗೆ ಕಾಣುತ್ತದೆ ಎಂದು ಗೊಂದಲಗಳಲ್ಲಿರುತ್ತಾರೆ. 
 

ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. ಈ ವಾತಾವರಣಕ್ಕೆ ತಕ್ಕಂತೆ ಬಟ್ಟೆ ಬದಲಾಯಿಸಿಕೊಳ್ಳದಿದ್ದರೆ ಸುಡು ಬಿಸಿಲನ್ನು ತಡೆದುಕೊಳ್ಳುವುದಕ್ಕೆ ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ. ಹಾಗಾದ್ರೆ ಇದಕ್ಕೆ ಏನು ಮಾಡಬೇಕು ಅಂತ ಯೋಚಿಸುತ್ತಿದ್ದೀರಾ? ಡೋಂಟ್ವರಿ ದಪ್ಪಗಿರುವ ಮಹಿಳೆಯರು ಸ್ಲಿಮ್ ಆಗಿ ಕಾಣಲು ನಿಮ್ಮ ಸೈಜ್ಗೆ ಸರಿಹೊಂದುವಂತಹ ಬಟ್ಟೆಯನ್ನು ಹುಡುಕುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಯಾವ ರೀತಿಯ ಬಟ್ಟೆಗಳನ್ನು ನೀವು ಸ್ಲಿಮ್ ಆಗಿ ಕಾಣಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

 

(Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ಜೀ ಕನ್ನಡ ನ್ಯೂಸ್ ಇದಕ್ಕೆ ಜವಾಬ್ದಾರಿಯಲ್ಲ)
 

1 /4

ತಿಳಿ ಬಣ್ಣದ ಬಟ್ಟೆಗಳು ಬೇಸಿಗೆಯಲ್ಲಿ ತೆಳ್ಳಗೆ ಕಾಣಲು ನಿಮಗೆ ಸಹಾಯ ಮಾಡುತ್ತದೆ. ಮೃದುವಾದ ಬಣ್ಣಗಳು ಆರ್ದ್ರ ವಾತಾವರಣದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ ಮತ್ತು ನಿಮ್ಮ ಲುಕ್ ಅನ್ನೇ ಚೇಂಜ್ ಮಾಡುತ್ತದೆ.  

2 /4

ಕಪ್ಪು ಅಥವಾ ಗಾಢ ಬಣ್ಣದ, ದೊಡ್ಡ ಸೊಂಟದ ಸೈಜ್, ಸ್ಲಿಮ್ ಫಿಟ್ ಜೀನ್ಸ್ ಅನ್ನು ಟ್ರೈ ಮಾಡಿ. ಶಾರ್ಟ್ ಟಾಪ್ ಅಥವಾ ಕ್ರಾಪ್ ಟಾಪ್ ಜೊತೆಗೆ ಈ ಜೀನ್ಸ್ ಪ್ಯಾಂಟ್ ಧರಿಸಿದಾಗ, ಇದು ನಿಮ್ಮ ಕಾಲುಗಳನ್ನು ಸ್ಲಿಮ್ ಕಾಣಲು ಸಹಾಯ ಮಾಡುತ್ತದೆ.  

3 /4

ಎ-ಲೈನ್ ಉಡುಪುಗಳು ನಿಸ್ಸಂದೇಹವಾಗಿ ಎಲ್ಲಾ ಮಹಿಳೆಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಉದ್ದನೆಯ ಉಡುಪುಗಳು ನಿಮ್ಮ ಸೊಂಟವನ್ನು ತೆಳ್ಳಗೆ ಕಾಣುವಂತೆ ಮಾಡಬಹುದು. ಆದ್ದರಿಂದ ಇದು ಬೇಸಿಗೆಯಲ್ಲಿ ಪರಿಪೂರ್ಣ ಉಡುಗೆಯಾಗಿದೆ ಮತ್ತು ನಿಮ್ಮ ದೇಹವನ್ನು ಸ್ಲಿಮ್ ಆಗಿ ಕಾಣಲು ಸಹಾಯ ಮಾಡುತ್ತದೆ.  

4 /4

ಪುರುಷರಿಗಿಂತ ಮಹಿಳೆಯರು ಬಟ್ಟೆಯ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರೆ. ಇನ್ನೂ ದಪ್ಪಗಿರುವ ಕೆಲವು ಮಹಿಳೆಯರು ಯಾವುದರಲ್ಲಿ ಉತ್ತಮವಾಗಿ ಕಾಣುತ್ತಾರೆ? ಯಾವುದರಲ್ಲಿ ದಪ್ಪಗೆ ಕಾಣುವುದಿಲ್ಲ ಎಂದು ಬಟ್ಟೆಯನ್ನು ಹುಡುಕುವುದು ಸಾಮಾನ್ಯ ಸಂಗತಿಯಾಗಿದೆ. ನಿಮ್ಮ ದೇಹಕ್ಕೆ ಶೇಪ್ ನೀಡಲು ನೀವು ಬಯಸಿದರೆ, ವಿ-ನೆಕ್ಲೈನ್ ಹೊಂದಿರುವ ಉಡುಪುಗಳನ್ನು ಆಯ್ಕೆ ಮಾಡಬಹುದು. ಇದು ನಿಮ್ಮ ತಲೆ ಎತ್ತರವಾಗಿ ಕಾಣುವಂತೆ ಮಾಡುತ್ತದೆ ಮತ್ತು ನಿಮಗೆ ತೆಳ್ಳಗಿನ ಲುಕ್ ನೀಡುತ್ತದೆ.