PHOTOS: 2019ರ ಲೋಕಸಭಾ ಚುನಾವಣೆಯಲ್ಲಿ ಮೊದಲು ಮತ ಹಾಕಿದವರು ಯಾರು?

ಐಟಿಬಿಪಿಯ ಅನಿಮಲ್ ಟ್ರಾನ್ಸ್ಪೋರ್ಟ್ ಸ್ಕೂಲ್ ಸಂಸ್ಥೆಯ ಸಿಬ್ಬಂದಿ, ರಹಸ್ಯ ಮತಪತ್ರದ ಮೂಲಕ ಮತ ಚಲಾಯಿಸಿದರು. ಇನ್ಸ್ಟಿಟ್ಯೂಟ್ನ ಉಪ ಇನ್ಸ್ಪೆಕ್ಟರ್ ಜನರಲ್, ಸುಧಾಕರ ನಟರಾಜನ್ ಮೊದಲ ಪೋಸ್ಟಲ್ ಮತದಾನವನ್ನು ಮಾಡಿದರು.

  • Apr 06, 2019, 17:28 PM IST

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಇಂದು ಐಟಿಬಿಪಿ ಸೇವೆಯಲ್ಲಿರುವವರು ಮೊದಲು ಮತ ಚಲಾಯಿಸಿದರು. ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಜಾವಾನ್ಗಳು 2019 ರ ಲೋಕಸಭೆ ಚುನಾವಣೆಯಲ್ಲಿ ಮೊದಲು ಮತದಾನ ಮಾಡಿದ್ದಾರೆ. ಐಟಿಬಿಪಿಯ ಅನಿಮಲ್ ಟ್ರಾನ್ಸ್ಪೋರ್ಟ್ ಸ್ಕೂಲ್ ಸಂಸ್ಥೆಯ ಸಿಬ್ಬಂದಿ, ರಹಸ್ಯ ಮತಪತ್ರದ ಮೂಲಕ ಮತ ಚಲಾಯಿಸಿದರು. ಇನ್ಸ್ಟಿಟ್ಯೂಟ್ನ ಉಪ ಇನ್ಸ್ಪೆಕ್ಟರ್ ಜನರಲ್, ಸುಧಾಕರ ನಟರಾಜನ್ ಮೊದಲ ಪೋಸ್ಟಲ್ ಮತದಾನವನ್ನು ಮಾಡಿದರು.

1 /5

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಟ್ರಾನ್ರ್ಸ್‍ಮಿಟೆಡ್ ಪೋಸ್ಟಲ್ ಅಂಚೆ ಮತದಾನ (ಇಟಿಪಿಬಿಎಸ್) ವಿಧಾನದಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ 1 ಲಕ್ಷದ 34 ಸಾವಿರಕ್ಕೂ ಹೆಚ್ಚು ಜವಾನ್ ಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶಸಿಕ್ಕಂತಾಗಿದೆ.

2 /5

ಸ್ಪೀಡ್ ಪೋಸ್ಟ್ ಮೂಲಕ ಈ ಮತಗಳನ್ನು ರಾಷ್ಟ್ರದ ವಿವಿಧ ಲೋಕಸಭಾ ಕ್ಷೇತ್ರಗಳ ಅನೇಕ ರಾಜ್ಯಗಳಿಗೆ ಕಳುಹಿಸಲಾಗುತ್ತದೆ ಮತ್ತು ಈ ಮತಗಳನ್ನು ಕೂಡ ಎಣಿಕೆಗೆ ಪರಿಗಣಿಸಲಾಗುವುದು.

3 /5

30 ಲಕ್ಷಕ್ಕೂ ಅಧಿಕ ಸೇವಾ ಮತದಾರರು ಈ ವರ್ಷದ ಪೋಸ್ಟಲ್ ಮತದಾನ ಮೂಲಕ ಮತ ಚಲಾಯಿಸುವ ಸಾಧ್ಯತೆಯಿದೆ ಎಂದು ನಂಬಲಾಗಿದೆ.  

4 /5

ರಾಜೀವ್ ಚಂದ್ರಶೇಖರ್ ಅವರ ಅರ್ಜಿಯನ್ನು ಕೇಳಿದ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೈನಿಕರ ಬಗೆಗೆ ಮಹತ್ವದ ನಿರ್ಣಯವನ್ನು ನೀಡಿದೆ. ಅದರಲ್ಲಿ ನ್ಯಾಯಾಲಯವು ದೇಶದ ನಿಯೋಜಿತ ಪ್ರದೇಶಗಳ ಸೈನಿಕರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಿದೆ.

5 /5

Pics Courtesy: ANI