Foods To Avoid in Thyroid: ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ದೈಹಿಕ ಚಟುವಟಿಕೆ ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದಿರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.
Foods To Avoid in Thyroid: ಬದಲಾದ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದ ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಾಗಿ ಮಹಿಳೆಯರಲ್ಲೇ ಕಂಡುಬರುವ ಈ ಸಮಸ್ಯೆಯಿಂದ ಕೆಲವರು ದಪ್ಪವಾಗುತ್ತಾರೆ, ಇನ್ನೂ ಕೆಲವರು ಸಣ್ಣವಾಗುತ್ತಾರೆ. ಇಂದಿನ ಜಡ ಜೀವನ ಶೈಲಿ ಮತ್ತು ಆಹಾರದಲ್ಲಿನ ಬದಲಾವಣೆಯೇ ಈ ಸಮಸ್ಯೆಯ ಮೂಲ. ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ಬಗೆಯ ದೈಹಿಕ ಚಟುವಟಿಕೆಗಳು ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದಿರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ. ಥೈರಾಯ್ಡ್ ಸಮಸ್ಯೆ ಹೊಂದಿರುವವರು ಯಾವ ಆಹಾರಗಳಿಂದ ದೂರವಿರಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಆಲ್ಕೋಹಾಲ್ ಸೇವನೆಯು ದೇಹದಲ್ಲಿನ ಥೈರಾಯ್ಡ್ ಹಾರ್ಮೋನ್ ಮಟ್ಟಗಳು ಮತ್ತು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸುವ ಸಾಮರ್ಥ್ಯ ಎರಡರ ಮೇಲೂ ಹಾನಿಯನ್ನುಂಟು ಮಾಡುತ್ತವೆ. ಹೀಗಾಗಿ ಆಲ್ಕೋಹಾಲ್ ಸೇವನೆಯಿಂದ ದೂರವಿರುವುದು ಉತ್ತಮ.
ಸಂಸ್ಕರಿಸಿದ ಆಹಾರಗಳು ಬಹಳಷ್ಟು ಸೋಡಿಯಂ ಅನ್ನು ಹೊಂದಿರುತ್ತವೆ. ಹೈಪೋಥೈರಾಯ್ಡಿಸಮ್ ಹೊಂದಿರುವವರು ಸೋಡಿಯಂ ಸೇವನೆಯಿಂದ ದೂರವಿರಬೇಕು.
ಕೊಬ್ಬುಗಳು ಹಾರ್ಮೋನ್ ಅನ್ನು ಉತ್ಪಾದಿಸುವ ಥೈರಾಯ್ಡ್‌ನ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತವೆ. ಹೀಗಾಗಿ ಮಾಂಸ ಸೇವನೆಯಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ಈ ಆಹಾರಗಳು ಸಣ್ಣ ಕರುಳಿನ ಆರೋಗ್ಯವನ್ನು ಹದಗೆಡಿಸಬಹುದು. ಇದಲ್ಲದೆ ಥೈರಾಯ್ಡ್ ಹಾರ್ಮೋನ್ ಬದಲಿ ಔಷಧಿಗಳ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸಬಹುದು.
ಈ ತರಕಾರಿಗಳನ್ನು ಜೀರ್ಣಿಸಿಕೊಳ್ಳುವುದರಿಂದ ಥೈರಾಯ್ಡ್ ಸಾಮಾನ್ಯ ಥೈರಾಯ್ಡ್‌ಗೆ ಅಗತ್ಯವಾದ ಆಯೋಡಿನ್ ಬಳಸಿಕೊಳ್ಳುವ ಸಾಮರ್ಥ್ಯವನ್ನು ನಿರ್ಬಂಧಿಸಬಹುದು.
ಚಾಕೊಲೇಟ್ ಮತ್ತು ಕೇಕ್ ಯಾವುದೇ ಪೋಷಕಾಂಶಗಳಿಲ್ಲದ ಕ್ಯಾಲೊರಿಗಳನ್ನು ಹೊಂದಿವೆ. ಆದ್ದರಿಂದ ಥೈರಾಯ್ಡ್ ಇರುವವರು ಇವುಗಳನ್ನು ತ್ಯಜಿಸುವುದು ಉತ್ತಮ.
ಸೋಯಾ ಸೇವನೆಯು ಥೈರಾಯ್ಡ್ ಔಷಧಿಗಳನ್ನು ಹೀರಿಕೊಳ್ಳುವ ನಿಮ್ಮ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತವೆ. ಹೀಗಾಗಿ ಸೋಯಾ ಆಹಾರಗಳ ಸೇವನೆಯಿಂದ ಆದಷ್ಟು ದೂರವಿರಿ.