ಮುಂದಿನ ನಾಲ್ಕು ತಿಂಗಳವರೆಗೆ ಈ ರಾಶಿಯವರ ಹತ್ತಿರವೂ ಸುಳಿಯುವುದಿಲ್ಲ ಸಮಸ್ಯೆ, ಮುಟ್ಟಿದ್ದೆಲ್ಲವೂ ಚಿನ್ನ

ಇತ್ತೀಚೆಗೆ, ಗುರು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿ, ಕುಂಭ ರಾಶಿಯನ್ನು ಪ್ರವೇಶಿಸಿದೆ. ಮುಂಬರುವ 4 ತಿಂಗಳುಗಳವರೆಗೆ ಅಂದರೆ ಏಪ್ರಿಲ್ 13, 2022 ರವರೆಗೆ ಈ ರಾಶಿಯಲ್ಲೇ ಇರುತ್ತದೆ.

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ದೇವಗುರು ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಗ್ರಹವು ತುಂಬಾ ಮಂಗಳಕರವಾಗಿದೆ. ಜಾತಕದಲ್ಲಿ ಗುರುವಿನ ಸ್ಥಾನ ಉತ್ತಮವಾಗಿದ್ದರೆ, ವ್ಯಕ್ತಿಯ ಜೀವನದ ಪ್ರತಿಯೊಂದು ಅಂಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇತ್ತೀಚೆಗೆ, ಗುರು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿ, ಕುಂಭ ರಾಶಿಯನ್ನು ಪ್ರವೇಶಿಸಿದೆ. ಮುಂಬರುವ 4 ತಿಂಗಳುಗಳವರೆಗೆ ಅಂದರೆ ಏಪ್ರಿಲ್ 13, 2022 ರವರೆಗೆ ಈ ರಾಶಿಯಲ್ಲೇ ಇರುತ್ತದೆ. ಈ ಸಮಯವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಈ ರಾಶಿಯವರು ಯಶಸ್ಸು ಪಡೆಯುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

1 /5

ಮೇಷ ರಾಶಿ : ಪ್ರತಿಯೊಂದು ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶ ಇರುತ್ತದೆ.  ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ. ಸಂಪತ್ತು ಹೆಚ್ಚಾಗಬಹುದು.  

2 /5

ಮಿಥುನ ರಾಶಿ : ಆರ್ಥಿಕ ಲಾಭವಾಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಮಾಡುವ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ  ಬಡ್ತಿ ಸಿಗಲಿದೆ. ಕೌಟುಂಬಿಕ ಜೀವನವೂ ಸುಖಮಯವಾಗಿರುತ್ತದೆ. ಒಟ್ಟಾರೆಯಾಗಿ ಇದು  4 ತಿಂಗಳುಗಳು ,ಮಿಥುನ ರಾಶಿಯವರ ಪಾಲಿಗೆ ಶುಭಾವಾಗಿರಲಿದೆ.    

3 /5

ಸಿಂಹ : ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಕೊನೆಯಾಗುತ್ತದೆ. ಇದ್ದಕ್ಕಿದ್ದಂತೆ ಹಣ ಲಾಭವಾಗಲಿದೆ. ಹೊಸ ಮನೆ-ಕಾರು ಹೊಂದುವ ಕನಸು ನನಸಾಗಬಹುದು.   

4 /5

ತುಲಾ ರಾಶಿಯ ಜನರ ವೃತ್ತಿಜೀವನಕ್ಕೆ ಈ ಸಮಯವು ಅತ್ಯುತ್ತಮವಾಗಿರುತ್ತದೆ. ಕಠಿಣ ಪರಿಶ್ರಮದ ಫಲವನ್ನು ಪಡೆಯುವ ಸಮಯ ಬಂದಿದೆ. ನೀವು ಬಯಸಿದ ಕೆಲಸ ಸಿಗಲಿದೆ. ಯಾವ ಮೂಲದಿಂದಾದರೂ ಹಣ ಬರುತ್ತಲೇ ಇರುತ್ತದೆ.

5 /5

ವೃಶ್ಚಿಕ ರಾಶಿ : ಬಡ್ತಿ ಪಡೆಯುವ  ಅವಕಾಶ ಹೆಚ್ಚಿದೆ.  ಉದ್ಯಮಿಗಳಿಗೂ ಲಾಭವಾಗಲಿದೆ. ದೀರ್ಘಕಾಲದಿಂದ ಖರೀದಿಸಲು ಯೋಚಿಸುತ್ತಿರುವ ವಸ್ತುಗಳನ್ನು ಖರೀದಿಸಬಹುದು. ಸಮಾಜದಲ್ಲಿ ಗೌರವ ಸಿಗುತ್ತದೆ.