ಪಾರ್ಥಿವ್ ಪಟೇಲ್

  • Jul 16, 2024, 11:05 AM IST
1 /6

ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಪ್ರಸಿದ್ಧ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌’ಸಿಬಿ) ಬಗ್ಗೆ ಮಾತನಾಡಿದ್ದಾರೆ.

2 /6

ಬೆಂಗಳೂರು ತಂಡದ ಕರಾಳ ಕಥೆಗಳನ್ನು ಬಿಚ್ಚಿಟ್ಟ ಪಾರ್ಥಿವ್, ತಂಡದಲ್ಲಿ ಸ್ಟಾರ್ ಆಟಗಾರರಿಗೆ ಮಾತ್ರ ಗೌರವ ಸಿಗುತ್ತದೆ ಮತ್ತು ಇತರ ಆಟಗಾರರಿಗೆ ವಿಶೇಷ ಗಮನ ನೀಡುವುದಿಲ್ಲ ಎಂದು ಹೇಳಿದ್ದಾರೆ.

3 /6

ಈ ಕಾರಣಗಳಿಂದಾಗಿ ತಂಡಕ್ಕೆ ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಪಾರ್ಥಿವ್ ಅಭಿಪ್ರಾಯಪಟ್ಟಿದ್ದಾರೆ.

4 /6

ಸೈರಸ್ ಸೇಸ್ ಪಾಡ್‌ಕಾಸ್ಟ್‌’ನಲ್ಲಿ ಮಾತನಾಡಿರುವ ಅವರು, “ತಂಡದ ಭಾಗವಾಗಿದ್ದಾಗ ಅಲ್ಲಿ ತಂಡದ ಸಂಸ್ಕೃತಿ ಇರಲಿಲ್ಲ. ಸ್ಟಾರ್ ಆಟಗಾರರಿಗೆ ಮಾತ್ರ ಗೌರವ ಸಿಗುತ್ತದೆ ಮತ್ತು ಇತರ ಆಟಗಾರರಿಗೆ ವಿಶೇಷ ಗಮನ ನೀಡುವುದಿಲ್ಲ. ಈ ಎಲ್ಲ ಕಾರಣಗಳಿಂದ ತಂಡಕ್ಕೆ ಇಲ್ಲಿಯವರೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ” ಎಂದು ಹೇಳಿದ್ದಾರೆ.

5 /6

"ನಾನು RCB ಪರ ಆಡಿದ್ದೇನೆ. ನಾನು ತಂಡದಲ್ಲಿದ್ದಾಗ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿತ್ತು. ಅಲ್ಲಿ ತಂಡವೆಂಬ ಸಂಸ್ಕೃತಿ ಇಲ್ಲ. ಅದಕ್ಕಾಗಿಯೇ ಇಲ್ಲಿಯವರೆಗೆ ಟ್ರೋಫಿಯನ್ನು ಗೆದ್ದಿಲ್ಲ” ಎಂದಿದ್ದಾರೆ.

6 /6

RCB ಇಲ್ಲಿಯವರೆಗೆ ಒಂದೇ ಒಂದು IPL ಟ್ರೋಫಿಯನ್ನು ಗೆದ್ದಿಲ್ಲ. ಆದರೆ, ಇದರ ಹೊರತಾಗಿಯೂ ತಂಡಕ್ಕೆ ಅಪಾರ ಅಭಿಮಾನಿ ಬಳಗವಿದೆ. ಪ್ರತಿ ವರ್ಷ ತಂಡವು ಟ್ರೋಫಿ ಗೆಲ್ಲುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಾರೆ, ಆದರೆ ಇದುವರೆಗೆ ಆಡಿದ 17 ಐಪಿಎಲ್ ಸೀಸನ್‌’ಗಳಲ್ಲಿ ಇದು ಸಂಭವಿಸಿಲ್ಲ.