Apple ಉತ್ಪನ್ನಗಳ ಖರೀದಿಯಲ್ಲಿ ಪಡೆಯಿರಿ ಭಾರೀ ಕ್ಯಾಶ್‌ಬ್ಯಾಕ್

                     

ನೀವೂ ಸಹ ಅಮೆರಿಕದ ಆಪಲ್ ಟೆಕ್ ಕಂಪನಿಯಿಂದ ಉತ್ತಮ ಉತ್ಪನ್ನಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ಸರಿಯಾದ ಸಮಯ. ಇತ್ತೀಚೆಗೆ ಕಂಪನಿಯು ಉತ್ಪನ್ನಗಳ ಖರೀದಿಗೆ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು (Cashback Offer) ಪ್ರಕಟಿಸಿದೆ. ಇದು ಸೀಮಿತ ಕೊಡುಗೆಯಾಗಿದ್ದು, ಇದು ಜನವರಿ 21 ರಿಂದ ಪ್ರಾರಂಭವಾಗಲಿದ್ದು, ಜನವರಿ 28 ರವರೆಗೆ ಗ್ರಾಹಕರು ಈ ಕೊಡುಗೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಭಾರತದ ಯಾವುದೇ ಆಪಲ್ ಅಂಗಡಿಯಿಂದ ಆನ್‌ಲೈನ್ ಆರ್ಡರ್ ಮೂಲಕ ಖರೀದಿಸಲು ಕಂಪನಿಯು ಗ್ರಾಹಕರಿಗೆ 5000 ರೂ.ಗಳ ಕ್ಯಾಶ್‌ಬ್ಯಾಕ್ ನೀಡುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಕೊಡುಗೆಯ ಅಧಿಸೂಚನೆಗಳನ್ನು ಆಪಲ್ ಸ್ಟೋರ್ ಇಂಡಿಯಾ ವೆಬ್‌ಪುಟದಲ್ಲಿ ನೋಡಬಹುದು.  

2 /4

ಆದಾಗ್ಯೂ ಆಪಲ್ ಕಂಪನಿಯು ನೀಡುತ್ತಿರುವ ಕೊಡುಗೆಯ ಲಾಭ ಪಡೆಯಲು  ಕೆಲವು ಷರತ್ತುಗಳಿವೆ. ಮೊದಲ ಷರತ್ತಿನ ಪ್ರಕಾರ ಈ ಕ್ಯಾಶ್‌ಬ್ಯಾಕ್ ಕೊಡುಗೆ ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಎಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್ ಇಎಂಐಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಎರಡನೆಯ ಷರತ್ತು 44,900 ಅಥವಾ ಅದಕ್ಕಿಂತ ಅಧಿಕ ಮೌಲ್ಯದ ಪ್ರಾಡಕ್ಟ್ ಗಳ ಮೇಲೆ ಈ ಕೊಡುಗೆ ಲಭ್ಯವಿದೆ. ಬಹು ಆದೇಶಗಳನ್ನು ಒಟ್ಟುಗೂಡಿಸಿ 5,000 ರೂ.ಗಳ ಕ್ಯಾಶ್ ಬ್ಯಾಕ್ ಅನ್ನು ನೀಡಲಾಗುವುದಿಲ್ಲ ಎಂಬುದನ್ನು ನೆನಪಿಡಿ. ಇದನ್ನೂ ಓದಿ - Antarctica Ice Bergs Melting - ಭೂಮಿಗೆ ಹಿಮಯುಗದ ಆಗಮನ! ಆತಂಕ ವ್ಯಕ್ತಪಡಿಸಿದ ವಿಜ್ಞಾನಿಗಳು

3 /4

ಕಂಪನಿಯ ಪ್ರಕಾರ, ನೀವು ಆದೇಶಕ್ಕಾಗಿ ಸಂಪೂರ್ಣವಾಗಿ ಚೆಕ್ ಔಟ್ ಮಾಡಿದ ತಕ್ಷಣ ಕ್ಯಾಶ್‌ಬ್ಯಾಕ್ ಹಣವನ್ನು ಬಳಕೆದಾರರ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ (Credit Card) ಖಾತೆಗೆ 7 ದಿನಗಳಲ್ಲಿ ಜಮಾ ಮಾಡಲಾಗುತ್ತದೆ. ನೀವು 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಯನ್ನು ಹೊಂದಿರುತ್ತೀರಿ. ಇದನ್ನೂ ಓದಿ - ಶೀಘ್ರದಲ್ಲೇ ಬರಲಿದೆ iPhone 13 ಈವರೆಗಿನ ಅತಿ ಸ್ಲಿಮ್ Smartphone

4 /4

ಆಪಲ್ ಇಂಡಿಯಾ ಆನ್‌ಲೈನ್ ಸ್ಟೋರ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಯಿತು ಮತ್ತು ಆಪಲ್‌ನ ಎಲ್ಲಾ ಉತ್ಪನ್ನಗಳು Apple India online Storeನಲ್ಲಿ ಲಭ್ಯವಿದೆ.