Ginger Water Benefits: Diabetes ನಿಂದ Digestionವರೆಗೆ ಹಲವು ಲಾಭಗಳನ್ನು ನೀಡುತ್ತದೆ ಹಸಿ ಶುಂಠಿ ನೀರು

Ginger Water Benefits - ಶೀತ ಮತ್ತು ಜ್ವರವನ್ನು ನಿವಾರಿಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಲು ಹಸಿ ಶುಂಠಿ ಪ್ರಯೋಜನಕಾರಿಯಾಗಿದೆ. ಆದರೆ ನೀವು ಹಸಿ ಶುಂಠಿ ನೀರನ್ನು ನಿಯಮಿತವಾಗಿ ಕುಡಿಯಲು ಪ್ರಾರಂಭಿಸಿದರೆ ಅದು ನಿಮ್ಮ ಆರೋಗ್ಯಕ್ಕೆಹೆಚ್ಚು ಲಾಭಕಾರಿ ಸಾಬೀತಾಗಲಿದೆ.

ನವದೆಹಲಿ : Ginger Water Benefits - ಆಯುರ್ವೇದದಲ್ಲಿ ಹಸಿ ಶುಂಠಿಯನ್ನು ಒಂದು ಪ್ರಮುಖ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಔಷಧೀಯ ಗುಣಗಳ ಆಗರವಾಗಿರುವ ಹಸಿ ಶುಂಠಿ ಹಸಿವು ಹೆಚ್ಚಿಸಲು ಕೂಡ ಸಹಕಾರಿಯಾಗಿದೆ. ಶೀತ-ಕೆಮ್ಮುಗಳ ಜೊತೆಗೆ ಶ್ವಾಸಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳು, ಕೀಲು ನೋವು, ಆಮ್ಳಪಿತ್ತಗಳಂತಹ ಸಮಸ್ಯೆ ನಿವಾರಣೆಗೂ ಕೂಡ ಇದು ಸಹಕಾರಿಯಾಗಿದೆ. ಹೀಗಿರುವಾಗ ಒಂದು ವೇಳೆ ನೀವೂ ಕೂಡ ಹಸಿ ಶುಂಠಿಯ ಲಾಭಗಳಿಂದ ನಿಮ್ಮ ಆರೋಗ್ಯವನ್ನು (Health) ಉತ್ತಮಗೊಳಿಸಲು ಬಯಸುತ್ತಿದ್ದರೆ, ಹಸಿ ಶುಂಠಿ ನೀರನ್ನು (Ginger Water) ಕುಡಿಯಲು ಪ್ರಾರಂಭಿಸಿ. ಬೆಳಗ್ಗೆ ಖಾಲಿ ಹೊಟ್ಟೆ ಹಸಿ ಶುಂಠಿ ನೀರನ್ನು ಸೇವಿಸಲು ಆರಂಭಿಸಿದರೆ, ಇದು ನಿಮ್ಮ ಪಾಲಿಗೆ ಮತ್ತಷ್ಟು ಲಾಭಕಾರಿ ಸಾಬೀತಾಗುವ ಸಾಧ್ಯತೆ ಇದೆ.

 

ಇದನ್ನೂ ಓದಿ- Does sunlight kill the coronavirus?: ಬಿಸಿಲಿನಲ್ಲಿ ಶಕ್ತಿ ಕಳೆದುಕೊಳ್ಳುತ್ತದೆಯೇ ಕೊರೊನಾ ವೈರಸ್

 

(ಸೂಚನೆ- ಯಾವುದೇ ಉಪಾಯಗಳನ್ನು ಅನುಸರಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ.  ಝೀ ಹಿಂದುಸ್ತಾನ್ ಈ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ )

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

>>Improves Digestion - ಸಾಕಷ್ಟು ಜನರ ಪಚನ ಕ್ರಿಯೆ (Digestion) ಸರಿಯಾಗಿರುವುದಿಲ್ಲ. ಅವರು ಏನೇ ಸೇವಿಸಿದರೂ ಕೂಡ ಅವರ ಹೊಟ್ಟೆ ಹಾಳಾಗುತ್ತದೆ ಅಥವಾ ಅವರಿಗೆ ಕಾನ್ಸ್ಟಿಪೇಶನ್ ಸಮಸ್ಯೆ ಎದುರಾಗುತ್ತದೆ. ಇಂತಹ ಜನರ ಪಾಲಿಗೆ ಹಸಿ ಶುಂಠಿ ನೀರು ಸೇವನೆ ತುಂಬಾ ಲಾಭಕಾರಿಯಾಗಿದೆ.

2 /5

>>Reduces Morning Sickness - ಹಸಿ ಶುಂಠಿ ನೀರಿನಲ್ಲಿ ಸ್ವಲ್ಪ ನಿಂಬೆ ರಸ ಹಾಗೂ ಜೇನುತುಪ್ಪ ಬೆರೆಸಿ ಸೇವಿಸಿದರೆ, ಗರ್ಭಾವಸ್ಥೆಯ ವೇಳೆ ಎದುರಾಗುವ ಮಾರ್ನಿಂಗ್ ಸಿಕ್ ನೆಸ್ ಅಥವಾ ವಾಂತಿ ಸಮಸ್ಯೆ ದೂರಾಗುತ್ತದೆ.

3 /5

>>Good For Diabetes - ಹಸಿ ಶುಂಠಿ ನೀರು ಜಿಂಕ್ ಆಗರವಾಗಿದೆ. ಇದು ಶರೀರದಲ್ಲಿ ಇನ್ಸುಲಿನ್ ಸ್ರವಿಕೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದಲ್ಲಿ ಬ್ಲಡ್ ಶುಗರ್ ಲೆವಲ್ ಅನ್ನು ಸರಿಯಾಗಿಡಲು ಸಹಕರಿಸುತ್ತದೆ. ಹೀಗಾಗಿ ಡಯಾಬಿಟಿಸ್  ರೋಗಿಗಳಿಗೆ ಶುಂಠಿ ನೀರು ತುಂಬಾ ಲಾಭಕಾರಿಯಾಗಿದೆ.

4 /5

>>Reduces Heart Stroke Risk - ಹೃದ್ರೋಗದ ಉಪಚಾರದಲ್ಲಿಯೂ ಕೂಡ ಶುಂಠಿ ಮಿಶ್ರಿತ ನೀರು ಲಾಭಕಾರಿಯಾಗಿದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಮತ್ತು ಬ್ಲಡ್ ಪ್ರೆಶರ್ ನಿಯಂತ್ರಣಕ್ಕೆ ಇದು ತುಂಬಾ ಪರಿಣಾಮಕಾರಿಯಾಗಿದೆ. ಈ ಎಲ್ಲ ಸಂಗತಿಗಳು ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ನ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ.

5 /5

>>Helps During Muscle Pain - ಹಲವು ಜನರು ಮಸಲ್ ಪೈನ್ (Muscle Pain) ನಿಂದ ಬಳಲುತ್ತಿರುತ್ತಾರೆ. ಇದಕ್ಕಾಗಿ ಅವರು ನೋವು ನಿವಾರಕ ಮಾತ್ರೆಗಳನ್ನೂ ಸೇವಿಸುತ್ತಾರೆ. ಆದರೆ, ಇಂತಹ ಮಾತ್ರೆಗಳು ಶರೀರಕ್ಕೆ ಹಾನಿಯನ್ನು ತಲುಪಿಸುತ್ತವೆ. ಹೀಗಾಗಿ ಹಸಿ ಶುಂಠಿ ನೀರನ್ನು ಸೇವಿಸಲು ಆರಂಭಿಸಿ. ಖಂಡಗಳ ನೋವು ಸಮಸ್ಯೆ ಇದರಿಂದ ನಿವಾರಣೆಯಾಗುತ್ತದೆ.