ಹೀಗಿತ್ತು ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅರಶಿನ ಶಾಸ್ತ್ರದ ಸಂಭ್ರಮ..!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅರಶಿನ ಶಾಸ್ತ್ರ ವಿಧಿ ವತ್ತಾಗಿ ನೆರವೇರಿತು. ಫೆ. 14 ರಂದು ಐಶ್ವರ್ಯ  ಮತ್ತು ಅಮರ್ಥ್ಯ ವಿವಾಹ ನೆರವೇರಲಿದೆ.
 

ಬೆಂಗಳೂರು :  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪುತ್ರಿ ಐಶ್ವರ್ಯ ವಿವಾಹ ಫೆ. 14 ರಂದು ನೆರವೇರಲಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ (SM Krishna) ಅವರ ಮೊಮ್ಮಗ, ಕಾಫಿಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗಡೆ ಪುತ್ರ ಅಮರ್ಥ್ಯ ಜೊತೆ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಕಲ್ಯಾಣ ನೆರವೇರಲಿದೆ.  ಮದುವೆಗೆ ಪೂರ್ವಭಾವಿಯಾಗಿ ನಡೆದ ಅರಶಿಣ ಶಾಸ್ತ್ರದ ಫೋಟೋ ಝಲಕ್ ಇಲ್ಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಐಶ್ವರ್ಯಾ ಶಿವಕುಮಾರ್ ಅರಶಿಣ ಶಾಸ್ತ್ರ ವಿಧಿವತ್ತಾಗಿ ನಡೆಯಿತು. ಫೆ. 14 ರಂದು ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ವಾಲೈಂಟೆನ್ ಡೇ ದಿನವೇ ಮದುವೆ ನಡೆಯುತ್ತಿರುವುದು ವಿಶೇಷ.  ಬೆಂಗಳೂರಿನ ಪ್ರತಿಷ್ಠಿತ ಹೊಟೇಲಿನಲ್ಲಿ ಫೆ. 17ರಂದು ಆರತಕ್ಷತೆ ಕಾರ್ಯಕ್ರಮ ನಿಗದಿಗೊಂಡಿದೆ.

2 /6

ಮನೆ ಮಗಳ ಅರಶಿಣ ಶಾಸ್ತ್ರಕ್ಕೆ  ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ಸೇರಿದಂತೆ ಪರಿವಾರದ ಗಣ್ಯರು ಪಾಲ್ಗೊಂಡಿದ್ದರು.   

3 /6

ಡಿಕೆ ಶಿವಕುಮಾರ್ ಪುತ್ರಿಯಾಗಿದ್ದರೂ, ಐಶ್ವರ್ಯಾ ಸುಮ್ಮನೆ ಕುಳಿತಿಲ್ಲ. ಅಪ್ಪ ಕಟ್ಟಿರುವ ಗ್ಲೋಬಲ್ ಇಂಜನೀಯರಿಂಗ್ ಕಾಲೇಜನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.   

4 /6

ಐಶ್ವರ್ಯಾ ಕೈಹಿಡಿಯಲಿರುವ ಅಮರ್ಥ್ಯ ತಮ್ಮ ತಂದೆ ಸಿದ್ದಾರ್ಥ್ ಹೆಗಡೆ ಕಟ್ಟಿರುವ ಕಾಫಿ ಡೇ ಸಾಮ್ರಾಜ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೂ ಮೊದಲು ಅವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಮರ್ಥ್ಯ ಹೆಗಡೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮೊಮ್ಮಗ.  

5 /6

ಬ್ಯುಸಿ ರಾಜಕೀಯದ ನಡುವೆಯೂ ಡಿಕೆ ಶಿವಕುಮಾರ್ ಮತ್ತು ಸಹೋದರ ಡಿಕೆ ಸುರೇಶ್ ಬಿಡುವು ಮಾಡಿಕೊಂಡು ಗಣ್ಯರಿಗೆ ಆಮಂತ್ರಣ ಹಂಚುತ್ತಿದ್ದಾರೆ. ರಾಹುಲ್ ಗಾಂಧಿ, ಯಡಿಯೂರಪ್ಪ ಮದುವೆಗೆ ಬರುವ ಸಾಧ್ಯತೆ ಇದೆ. 

6 /6

ಹೈಪ್ರೊಫೈಲ್ ಮದುವೆಯಾಗಿದ್ದರೂ, ಕಾರ್ಯಕ್ರಮಗಳಲ್ಲಿ ಕರೋನಾ ಮಾರ್ಗಸೂಚಿ ಪಾಲಿಸಲೇಬೇಕಾಗಿದೆ.  ಕರೋನಾ ಕಾರಣದಿಂದಾಗಿ ಮದುವೆಗೆ 800 ಮಂದಿ ಹಾಗೂ ಆರತಕ್ಷತೆಗೆ 1400 ಮಂದಿ ಪಾಲ್ಗೊಳ್ಳಲು ಅವಕಾಶವಿದೆ