ಧುಮ್ಮುಕ್ಕಿ ಹರಿಯುತ್ತಿದೆ ಗೋಕಾಕ್‌ ಫಾಲ್ಸ್‌: ಜನಮನ ಸೆಳೆಯುತ್ತಿದೆ ಜಲಪಾತದ ವೈಯಾರ

ಬೆಳಗಾವಿ ಜಿಲ್ಲೆ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಇಲ್ಲಿನ ಗೋಕಾಕ್‌ ಫಾಲ್ಸ್‌ ತುಂಬಿ ಹರಿಯುತ್ತಿದೆ.  ಭಾರತದ ನಯಾಗರ ಜಲಪಾತ ಎಂದೇ ಖ್ಯಾತಿ ಪಡೆದ ಗೋಕಾಕ ಫಾಲ್ಸ್ ನೋಡಲು ಜನಸಾಗರವೇ ಹರಿದುಬರುತ್ತಿದೆ. ಈ ನಯನ ಮನೋಹರ ದೃಶ್ಯದ ಕೆಲವೊಂದು ಫೋಟೋಗಳನ್ನು ಇಲ್ಲಿ ನೀಡಲಾಗಿದೆ. 

1 /5

ಭಾರತದ ನಯಾಗರ ಫಾಲ್ಸ್‌ ಎಂದೇ ಗೋಕಾಕ್‌ ಜಲಪಾತವನ್ನು ಕರೆಯಲಾಗುತ್ತದೆ. ಈ ಜಲಪಾತದ ಸೊಬಗು ನೋಡಲು ಎರಡು ಕಣ್ಣುಗಳು ಸಾಲದು. ದಿನೇ ದಿನೇ ಗೋಕಾಕ ಫಾಲ್ಸ್ ವೈಯಾರ ಹೆಚ್ಚಳವಾಗುತ್ತಿದ್ದು, ಈ ಪ್ರಕೃತಿ ಸೌಂದರ್ಯ ನೋಡಲು ಜನ ಸಾಗರವೇ ಹರಿದುಬರುತ್ತಿದೆ. 

2 /5

ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಗೋಕಾಕ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಧುಮುಕ್ಕಿ ಹರಿಯುತ್ತಿರುವ ಗೋಕಾಕ ಫಾಲ್ಸ್‌ನ ಅಂದವನ್ನು ಹೆಚ್ಚಳ ಮಾಡುತ್ತಿದೆ ಸುತ್ತಲಿರುವ ಪರಿಸರ. 

3 /5

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕರ್ನಾಟಕ ಗಡಿ ಪ್ರದೇಶದ ಜಿಲ್ಲೆಗಳ ಜಲಪಾತಗಳು ತುಂಬಿ ಹರಿಯುತ್ತಿವೆ. 

4 /5

ಬೆಳಗಾವಿ ಜಿಲ್ಲೆಯ ಸಪ್ತ ನದಿಗಳ ಒಳ ಹರಿವು ಹೆಚ್ಚಾಗುತ್ತಿದೆ. ಗೋಕಾಕ ಫಾಲ್ಸ್ ಸೇರಿದಂತೆ ಅನೇಕ ಜಲಪಾತಗಳು ಮೈದುಂಬಿ ಹರಿಯುತ್ತಿವೆ. 

5 /5

ಬೆಳಗಾವಿಯ ಸಪ್ತನದಿಗಳಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ ನದಿಗಳ ಒಳ ಹರಿವು ಹೆಚ್ಚಳವಾಗುತ್ತಿದೆ.