ಚಿನ್ನದ ಉಂಗುರ ಹಾಕಿದರೆ ಮಾತ್ರ ಈ ರಾಶಿಯವರಿಗೆ ಗುರು ಬಲ! ಅದೃಷ್ಟ ಕೈ ಹಿಡಿಯಬೇಕಾದರೆ ಇವರು ಧರಿಸಲೇ ಬೇಕು ಬಂಗಾರದುಂಗುರ

Gold Ring Astrology : ಕೆಲವು ರಾಶಿಯವರು ಜೀವನದ ಮೇಲೆ ಅದೃಷ್ಟದ ನೆರಳು ಬೀಳಬೇಕಾದರೆ ಅವರು ಚಿನ್ನದ ಉಂಗುರವನ್ನು ಧರಿಸಲೇ ಬೇಕಂತೆ.   

ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನವನ್ನು ಧರಿಸುವುದು ತುಂಬಾ ಮಂಗಳಕರ. ಚಿನ್ನ, ಬೆಳ್ಳಿ ಅಥವಾ ಇತರ ಲೋಹಗಳಲ್ಲಿ ಅನೇಕ ರತ್ನಗಳ ಪ್ರಾಮುಖ್ಯತೆಯನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.ಜ್ಯೋತಿಷ್ಯದಲ್ಲಿ ಗ್ರಹ ದೋಷಗಳು, ಅದೃಷ್ಟದ ಬೆಳವಣಿಗೆ ಅಥವಾ ರೋಗಗಳ ತಡೆಗಟ್ಟುವಿಕೆಗಾಗಿಯೂ ಒಂದೊಂದು ಲೋಹಗಳ ಪ್ರಾಮುಖ್ಯತೆಯನ್ನು ಹೇಳಲಾಗಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಗುರು ಗ್ರಹದ ಮೇಲೆ ಚಿನ್ನದ ಪ್ರಭಾವವಿದೆ.ಹಾಗಾಗಿ ಚಿನ್ನವನ್ನು ಧರಿಸುವುದರಿಂದ ಗುರು ಬಲ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.ಅದರಲ್ಲಿಯೂ ಕೆಲವು ರಾಶಿಯವರ ಜೀವನದ ಮೇಲೆ ಅದೃಷ್ಟದ  ನೆರಳು ಬೀಳಬೇಕಾದರೆ ಅವರು ಚಿನ್ನದ ಉಂಗುರವನ್ನು ಧರಿಸಲೇ ಬೇಕಂತೆ. 

2 /6

ಮೇಷ ರಾಶಿ :ಈ ರಾಶಿಯವರಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಅನುಕೂಲವಾಗುತ್ತದೆ. ಈ ಮೂಲಕ ಅವರ ಜೀವನದಲ್ಲಿ ಸಾಲದಿಂದ ಮುಕ್ತಿ ಪಡೆಯುತ್ತಾರೆ. ಚಿನ್ನದ ಉಂಗುರ ಹಾಕುತ್ತಿದ್ದಂತೆಯೇ  ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ.ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ.    

3 /6

ಸಿಂಹ ರಾಶಿ :ಸಿಂಹ ರಾಶಿಯವರಿಗೂ ಚಿನ್ನದ ಉಂಗುರ ಅತ್ಯಂತ ಮಂಗಳಕರ.  ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯ ಅಧಿಪತಿ ಸೂರ್ಯ. ಆದ್ದರಿಂದ, ಸಿಂಹ ರಾಶಿಯ ಜನರು ಚಿನ್ನದ ಉಂಗುರವನ್ನು ಧರಿಸಿದರೆ ಆಗುವುದೇ ಇಲ್ಲ ಎನ್ನುವ ಕೆಲಸ ಕೂಡಾ ಕೈ ಹಿಡಿಯುವುದಂತೆ. 

4 /6

ಕನ್ಯಾ ರಾಶಿ : ಈ ರಾಶಿಯವಿಗೆ ಸುಖ ಸಮೃದ್ದಿಯ ಜೀವನ ಬಹಳ ಇಷ್ಟ. ಕನ್ಯಾ ರಾಶಿಯವರು ಚಿನ್ನದ ಒಡವೆ ಧರಿಸಿದರೆ ಅವರ ಅದೃಷ್ಟದ ಬಾಗಿಲು ತೆರೆಯುವುದು. ಈ ರಾಶಿಯವರು ಚಿನ್ನದ ಉಂಗುರ, ಚೈನ್ ಹೀಗೆ ಚಿನ್ನದಿಂದ ಮಾಡಿದ ಯಾವುದಾದರೂ ಆಭರಣವನ್ನು ಧರಿಸಿದರೆ ಅವರಿಗೆ ಶುಭ.     

5 /6

ತುಲಾ ರಾಶಿ : ತುಲಾ ರಾಶಿಯ ಜನರಿಗೂ ಚಿನ್ನ ಶುಭವೇ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನದ ಉಂಗುರವು ತುಲಾ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಈ ರಾಶಿಯ ಅಧಿಪತಿ ಶುಕ್ರ ದೇವ. ಹಾಗಾಗಿ ಇವರಿಗೆ ಬಂಗಾರದ ಭಾರೀ ಅದೃಷ್ಟ.  

6 /6

ಮೀನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನವನ್ನು ಧರಿಸುವುದು ಮೀನ ರಾಶಿಯವರಿಗೆ  ಅತ್ಯಂತ ಶುಭ. ಚಿನ್ನವನ್ನು ಧರಿಸುವುದು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.  ( ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)