Good News: SUV ಸೆಗ್ಮೆಂಟ್ ನಲ್ಲಿ ಧಮಾಲ್ ಮಾಡಲು ಬರುತ್ತಿವೆ Maruti Suzukiಯ ನಾಲ್ಕು ಕಾರುಗಳು

Maruti Suzuki Upcoming SUV Launch India: ನೀವೂ ಕೂಡ ಒಂದು ವೇಳೆ SUV ಕಾರನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ಶೀಘ್ರದಲ್ಲೇ 4 ಹೊಸ ಎಸ್ ಯುವಿಗಳನ್ನು ಬಿಡುಗಡೆ ಮಾಡಲಿದೆ. ಅವುಗಳ ವೈಶಿಷ್ಟ್ಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

ನವದೆಹಲಿ: Maruti Suzuki Upcoming SUV Launch India - ನೀವೂ ಕೂಡ ಹೊಸ ಕಾರನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ನಿಮಗಾಗಿ.  ಪ್ರಸಿದ್ಧ ಆಟೋಮೊಬೈಲ್ ಕಂಪನಿ ಮಾರುತಿ ಸುಜುಕಿ ಭಾರತದಲ್ಲಿ 4 ಹೊಸ ಎಸ್ಯುವಿಗಳನ್ನು (SUV Cars) ಶೀಘ್ರದಲ್ಲೇ ಪರಿಚಯಿಸಲಿದೆ. ಈ ಕಾರುಗಳ ನೋಟವು ತುಂಬಾ ಅದ್ಭುತವಾಗಿರಲಿದೆ. ಇದರ ಹೊರತಾಗಿ, ಕಾರಿನ ವೈಶಿಷ್ಟ್ಯಗಳು ಗ್ರಾಹಕರಿಗೆ ಇಷ್ಟವಾಗಳಿವೆ. ಇದರಲ್ಲಿನ  2 ಎಸ್ಯುವಿಗಳಿಗಾಗಿ ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ನಾಲ್ಕು ಎಸ್ಯುವಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Cheapest Electric Scooter: ಒಂದು ಸ್ಕೂಟರಿನ ಬೆಲೆಗೆ ನೀವು 2 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಬಹುದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

1. New Generation Vitara Brezza - Maruti-Suzukiಯ Next Generation Maruti Suzuki Vitara Brezza ಕಾರು ಬಿಡುಗಡೆಗೆ ಜನರು ದೀರ್ಘ ಕಾಲದಿಂದ ಕಾಯುತ್ತಿದ್ದಾರೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿ ಅನೇಕ ಬದಲಾವಣೆಗಳೊಂದಿಗೆ ಉತ್ತಮ ಲುಕ್  ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ Brezza ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇದರಲ್ಲಿ, ಆಧುನಿಕ ವಿನ್ಯಾಸದ ಅಂಶಗಳ ಜೊತೆಗೆ, ಇತ್ತೀಚಿನ ಗುಣಮಟ್ಟ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಕಾಣಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸನ್ ರೂಫ್ ಅನ್ನು ಸಹ ಈ ಕಾರಿನಲ್ಲಿ ನೀವು ನೋಡಬಹುದು. ಈ ಮಧ್ಯಮ ಗಾತ್ರದ ಎಸ್‌ಯುವಿಯು ಹೈಬ್ರಿಡ್ ಎಂಜಿನ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬರಲಿದೆ.

2 /4

2.Maruti Suzuki Jimny - ಮಾರುತಿ ಸುಜುಕಿಯಾ ರೋಡಿಂಗ್ SUV ಜಿಮ್ನಿಗಗಿಯೂ ಕೂಡ  ಜನರು ಸಹ ಕಾತುರದಿಂದ ಕಾಯುತ್ತಿದ್ದರು. ಈ ಕಾರು ಒಟ್ಟು 5 ಬಾಗಿಲಿನ ಆಯ್ಕೆಯೊಂದಿಗೆ ಬಿಡುಗಡೆಯಾಗುತ್ತಿದೆ. ಇದರೊಂದಿಗೆ, ಈ ಕಾರು ಮಹೀಂದ್ರ ಥಾರ್ ಮತ್ತು ಫೋರ್ಸ್ ಗೂರ್ಖಾದಂತಹ ಕಾರುಗಳೊಂದಿಗೆ ಸ್ಪರ್ಧಿಸಲಿದೆ. ಈ ಕಾರಿನ ಲುಕ್ ಅತ್ಯುತ್ತಮವಾಗಿರಲಿದ್ದು, ಅದರ ಉದ್ದ ಕೂಡ ಹೆಚ್ಚು ಇರಲಿದೆ. ಜಿಮ್ನಿಯನ್ನು 1.5-ಲೀಟರ್ ಕೆ 15 ಬಿ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ, ಇದನ್ನು ಹೈಬ್ರಿಡ್ ಸಿಸ್ಟಮ್‌ಗೆ ಜೋಡಿಸಲಾಗಿದೆ ಹಾಗೂ ಇದು 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ. ಇದರ ಎಂಜಿನ್ 100bhp ಪವರ್ ಮತ್ತು 130Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.  

3 /4

3. Maruti YTB  - ಮಾರುತಿ ಸುಜುಕಿ ಶೀಘ್ರದಲ್ಲೇ ಭಾರತದಲ್ಲಿ ಸಬ್-ಕಾಂಪ್ಯಾಕ್ಟ್ 4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ಹೊಸ ಕಾರನ್ನು ಪರಿಚಯಿಸಲಿದೆ. ಇದು ಎಸ್-ಪ್ರೆಸ್ಸೊ ಮತ್ತು ಮಾರುತಿ BREZZA ಆವೃತ್ತಿಗಳ ಮಧ್ಯದ ಮಾದರಿ ಇರಲಿದೆ. ಈ ಕಾರು ನೋಡಲು ಸಾಕಷ್ಟು ಚಿಕ್ಕದಾಗಿರುತ್ತದೆ. ವೈಶಿಷ್ಟ್ಯಗಳ ದೃಷ್ಟಿಯಿಂದ ಈ ಕಾರು ತುಂಬಾ ಪ್ರಚಂಡವಾಗಿರಲಿದೆ. ನೀವು ಒಂದು ಸಣ್ಣ ಕಾರನ್ನು ಖರೀದಿಸುವ ಮನಸ್ಥಿತಿಯಲ್ಲಿದ್ದರೆ, ಇದು ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಇದು ಬಲೆನೊ ಮತ್ತು ಸ್ವಿಫ್ಟ್ ನಂತಹ ಹ್ಯಾಚ್ ಬ್ಯಾಕ್ ಕಾರುಗಳ ಎಂಜಿನ್ ಶಕ್ತಿಯನ್ನು ಹೊಂದಿರಲಿದೆ.

4 /4

4. Maruti Suzuki ಹಾಗೂ  Toyota ಹೊಸ SUV ಬಿಡುಗಡೆಗೊಳಿಸಲಿವೆ - ಮಾರುತಿ ಸುಜುಕಿ ಮತ್ತು ಟೊಯೋಟಾ ಜಂಟಿಯಾಗಿ ಹೊಸ ಎಸ್ ಯುವಿಯನ್ನು ಬಿಡುಗಡೆ  ಮಾಡಲಿವೆ. ಎರಡೂ ಕಂಪನಿಗಳು ಶೀಘ್ರದಲ್ಲೇ ಹೊಸ ಮಧ್ಯಮ ಗಾತ್ರದ ಎಸ್ಯುವಿಗಳು ಮತ್ತು MPV ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿವೆ. ಎರಡೂ ಕಂಪನಿಗಳ ಗುರಿ ಹ್ಯುಂಡೈನ ಕ್ರೆಟಾ ವಿಭಾಗದ ಎಸ್‌ಯುವಿ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವುದಾಗಿದೆ. ಹಲವು ವಿಶೇಷತೆಗಳನ್ನು ನೀವು ಇದರಲ್ಲಿ ಕಾಣಬಹುದು.