Guava leaves For White Hair: ಪ್ರತಿಯೊಬ್ಬರಿಗೂ ಉದ್ದ, ದಪ್ಪ ಮತ್ತು ಗಾಢ ಕಪ್ಪು ಕೂದಲನ್ನು ಪಡೆಯುಬೇಕೆಂಬ ಆಸೆ ಇರುತ್ತದೆ.. ಇದಕ್ಕಾಗಿ ಅವರು ತಮಗೆ ಗೊತ್ತಿರುವ ಎಲ್ಲ ವಿಧಾನಗಳಿಂದಲೂ ಪ್ರಯತ್ನಿಸುತ್ತಾರೆ.. ದುಬಾರಿ ಹೇರ್ ಪ್ರಾಡಕ್ಟ್ಗಳ ಮೇಲೆ ಖರ್ಚು ಮಾಡುತ್ತಾರೆ.. ಆದರೆ ಇದರಿಂದ ಅಷ್ಟಾಗಿ ಪರಿಹಾರ ಸಿಗವುದಿಲ್ಲ..
ಸದ್ಯದ ಜಮಾನದಲ್ಲಿ ಚಿಕ್ಕವರನ್ನು ಕಾಡುತ್ತಿರುವ ಈ ಬಿಳಿಕೂದಲಿನ ಸಮಸ್ಯೆಗೆ ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್ ಕಲರ್ ತಂದು ಹಚ್ಚಿಕೊಳ್ಳುತ್ತಾರೆ.. ಅದರಿಂದ ತಕ್ಷಣಕ್ಕೆ ಕೂದಲು ಕಪ್ಪಾಗಬಹುದು.. ಆದರೆ ಅದು ಶಾಶ್ವತ ಪರಿಹಾರವಂತೂ ಅಲ್ಲ..
ಅಷ್ಟೇ ಅಲ್ಲ ಈ ದುಬಾರಿ ಶಾಂಪೂ, ಕಂಡೀಷನರ್, ಹೇರ್ಕಲರ್ ಇವುಗಳಲ್ಲಿ ಹೆಚ್ಚು ರಾಸಾಯನಿಕಗಳೇ ತುಂಬಿ ಹೋಗಿರುತ್ತವೆ.. ಇವುಗಳನ್ನು ಕೂದಲಿಗೆ ಹಚ್ಚಿದರೇ ಕೂದಲು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತೆದೆ.. ಹಾಗಾಗಿ ಕೂದಲಿನ ಎಲ್ಲಾ ಸಮಸ್ಯೆಗೆ ಈ ಎಲೆ ತುಂಬಾ ಸಹಕಾರಿಯಾಗಿದೆ..
ಹೌದು ಪೇರಳೆ ಎಲೆಗಳಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು.. ಜೀವಸತ್ವ, ಖನಿಜವನ್ನು ಹೊಂದಿದೆ.. ಇವು ಕೂದಲನ್ನು ಬುಡದಿಂದ ಸ್ಟ್ರಾಂಗ್ ಆಗುವಂತೆ ಮಾಡುತ್ತವೆ. ಪೇರಳೆ ಎಲೆಗಳನ್ನು ಕೂದಲಿಗೆ ನಾನಾ ರೀತಿಯಲ್ಲಿ ಬಳಸಬಹುದಾಘಿದೆ.. ಇದು ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿರುವಂತೆ ನೋಡಿಕೊಂಡು, ಕೂದಲು ಉದುರುವುದನ್ನು ತಡೆಯುತ್ತದೆ..
ಈ ಪರಿಹಾರಕ್ಕಾಗಿ 15 ರಿಂದ 20 ಪೇರಳೆ ಎಲೆಗಳನ್ನು ಒಣಗಿಸಿ ನಂತರ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.. ಬಳಿಕ ಅದನ್ನು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ, ಬೆರಳುಗಳಿಂದ ಮಸಾಜ್ ಮಾಡಿ 30-40 ನಿಮಿಷ ಬಿಟ್ಟು, ಶಾಂಪೂ ಬಳಸಿ ತೊಳೆಯಿರಿ.. ಇದರಿಂದ ಕೂದಲು ಉದುರುವುದನ್ನು ಹಾಗೇ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು..
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.