ನವಗ್ರಹಗಳಲ್ಲಿ ಬೃಹಸ್ಪತಿಗೆ ದೇವ ಗುರುವಿನ ಸ್ಥಾನಮಾನ ನೀಡಲಾಗಿದೆ. ಪ್ರಸ್ತುತ ಮೇಷ ರಾಶಿಯಲ್ಲಿ ಆಸ್ತಮ ಸ್ಥಿತಿಯಲ್ಲಿರುವ ಗುರುವು ಶೀಘ್ರವೇ ಉದಯಿಸಲಿದ್ದಾನೆ. ಬಳಿಕ ಕೆಲವು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದ್ದು ಅವರ ಜೀವನದಲ್ಲಿ ಭಾಗ್ಯೋದಯವಾಗಲಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 22 ಏಪ್ರಿಲ್ 2023ರಂದು ಗುರು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಅದಾದ ನಾಲ್ಕು ದಿನಗಳ ನಂತರ ಅಂದರೆ 27 ಏಪ್ರಿಲ್ 2023ರಂದು ಗುರು ಉದಯಿಸಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯವರಿಗೆ ನೆಚ್ಚಿನ ಉದ್ಯೋಗ ಪ್ರಾಪ್ತಿಯಾದರೆ, ಇನ್ನೂ ಕೆಲವು ರಾಶಿಯವರಿಗೆ ಭಾಗ್ಯೋದಯವಾಗುತ್ತದೆ ಎಂದು ಹೇಳಲಾಗುತ್ತಿದೆ.
ಗುರು ಉದಯವು ಮೇಷ ರಾಶಿಯವರ ಜೀವನದಲ್ಲಿ ಒಂದರ ನಂತರ ಒಂದರಂತೆ ಖುಷಿ-ಸಂತೋಷವನ್ನು ತುಂಬಲಿದ್ದಾನೆ. ಈ ಸಮಯದಲ್ಲಿ ನೀವು ಬಯಸಿದ ಉದ್ಯೋಗ ಪ್ರಾಪ್ತಿಯಾಗಲಿದೆ.
ಗುರು ಉದಯದ ಪರಿಣಾಮವಾಗಿ ಮಿಥುನ ರಾಶಿಯವರಿಗೆ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸಮಸ್ಯೆಗಳು ದೂರವಾಗಲಿವೆ.
ಗುರು ಉದಯದ ಬಳಿಕ ಸಿಂಹ ರಾಶಿಯವರಿಗೆ ವೃತ್ತಿ ರಂಗದಲ್ಲಿ ಪ್ರಮೋಷನ್ ಭಾಗ್ಯವಿದೆ. ನೀವು ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಶೀಘ್ರದಲ್ಲೇ ನೀವು ಬಯಸಿದ ಉದ್ಯೋಗ ನಿಮಗೆ ದೊರೆಯಲಿದೆ.
ಗುರು ಉದಯವು ಕುಂಭ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದೆ. ಇಷ್ಟು ದಿನಗಳ ನಿಮ್ಮ ಕಷ್ಟಕ್ಕೆ ಮುಕ್ತಿ ದೊರೆಯುವ ಸಮಯ ಇದಾಗಿದೆ. ಈ ಸಮಯದಲ್ಲಿ ನೀವು ಕೈ ಹಾಕಿದ ಕೆಲಸಗಾಲಲ್ಲೆಲ್ಲಾ ಯಶಸ್ಸು, ಕೀರ್ತಿ ನಿಮ್ಮದಾಗಲಿದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.