ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಕಸ ಸಂಗ್ರಹಿಸುತ್ತಿದ್ದ ಈತ ಇಂದು 377 ಕೋಟಿ ಆಸ್ತಿಯ ಒಡೆಯ! ಈ ಸ್ಟಾರ್‌ ಕ್ರಿಕೆಟರ್‌ ನಮ್ಮ ನಿಮ್ಮೆಲ್ಲರ ಫೇವರೆಟ್‌ ಕೂಡ..ಯಾರು ಅಂತ ಗೆಸ್‌ ಮಾಡಿ ನೋಡೋಣ?

Happy Birthday Chris Gayle: ವೆಸ್ಟ್ ಇಂಡೀಸ್ ಮಾಜಿ ಆಟಗಾರ ಮತ್ತು 'ಯೂನಿವರ್ಸ್ ಬಾಸ್' ಎಂದೇ ಫೇಮಸ್‌ ಆಗಿರುವ ಕ್ರಿಸ್ ಗೇಲ್ ಅವರಿಗೆ ಇಂದು 45 ನೇ ಹುಟ್ಟುಹಬ್ಬದ ಸಂಭ್ರಮ. ಫೀಲ್ಡ್‌ನಲ್ಲಿ ತಮ್ಮ ಎದುರಿನಲ್ಲಿ ಕ್ರಿಸ್‌ ಗೇಲ್‌ ನಿಂತಿರುವುದನ್ನು ಕಂಡರೆ ಬೌಲರ್ ಗಳು ತಮ್ಮ ಲೈನ್ ಮತ್ತು ಲೆಂತ್ ಮರೆಯುತ್ತಿದ್ದರು. ಗೇಲ್ ಬ್ಯಾಟ್‌ ಬೀಸುತ್ತಿದ್ದಾರೆ ಅಂದರೇನೆ ಬೌಲರ್‌ಗಳ ಎದೆಯಲ್ಲಿ ನಡುಕ ಶುರುವಾಗುತ್ತಿತ್ತು, ಬೆವರು ಸುರಿಯೋಕೆ ಸ್ಟಾರ್ಟ್‌ ಆಗುತ್ತಿತ್ತು. 
 

1 /11

ವೆಸ್ಟ್ ಇಂಡೀಸ್ ಮಾಜಿ ಆಟಗಾರ ಮತ್ತು 'ಯೂನಿವರ್ಸ್ ಬಾಸ್' ಎಂದೇ ಫೇಮಸ್‌ ಆಗಿರುವ ಕ್ರಿಸ್ ಗೇಲ್ ಅವರಿಗೆ ಇಂದು 45 ನೇ ಹುಟ್ಟುಹಬ್ಬದ ಸಂಭ್ರಮ. ಫೀಲ್ಡ್‌ನಲ್ಲಿ ತಮ್ಮ ಎದುರಿನಲ್ಲಿ ಕ್ರಿಸ್‌ ಗೇಲ್‌ ನಿಂತಿರುವುದನ್ನು ಕಂಡರೆ ಬೌಲರ್ ಗಳು ತಮ್ಮ ಲೈನ್ ಮತ್ತು ಲೆಂತ್ ಮರೆಯುತ್ತಿದ್ದರು. ಗೇಲ್ ಬ್ಯಾಟ್‌ ಬೀಸುತ್ತಿದ್ದಾರೆ ಅಂದರೇನೆ ಬೌಲರ್‌ಗಳ ಎದೆಯಲ್ಲಿ ನಡುಕ ಶುರುವಾಗುತ್ತಿತ್ತು, ಬೆವರು ಸುರಿಯೋಕೆ ಸ್ಟಾರ್ಟ್‌ ಆಗುತ್ತಿತ್ತು. 

2 /11

ಸ್ವಾಶ್‌ಬಕ್ಲಿಂಗ್ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ 21 ಸೆಪ್ಟೆಂಬರ್ 1979 ರಂದು ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ಜನಿಸಿದರು.  ವೆಸ್ಟ್ ಇಂಡೀಸ್ ಪರ 483 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ ತಂಡವನ್ನು ಅನೇಕ ಸ್ಮರಣೀಯ ವಿಜಯಗಳತ್ತ ಮುನ್ನಡೆಸಿದ್ದಾರೆ.

3 /11

ಕ್ರಿಕೆಟ್ ಜೀವನದಲ್ಲಿ, ಕ್ರಿಸ್ ಗೇಲ್ ಎಲ್ಲಾ ಸ್ವರೂಪಗಳಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್‌ನಲ್ಲಿ ತ್ರಿಶತಕ, ಏಕದಿನದಲ್ಲಿ ದ್ವಿಶತಕ ಮತ್ತು ಟಿ20ಯಲ್ಲಿ ಹಲವು ಶತಕಗಳು ಅಷ್ಟೆ ಅಲ್ಲದೆ ಹಲವಾರು ದಾಖಲೆಗಳು ಗೇಲ್ ಹೆಸರಿನಲ್ಲಿವೆ.  

4 /11

ಕ್ರಿಕೆಟ್ ಮೈದಾನದಲ್ಲಿ ಗೇಲ್ ಮಾಡಿದ ಸಾಧನೆಗಳು ಲೆಕ್ಕವಿಲ್ಲದಷ್ಟು.ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಇವರು, T-20 ಸ್ವರೂಪದಲ್ಲಿ 14,000 ಕ್ಕೂ ಹೆಚ್ಚು ರನ್ ಗಳಿಸಿರುವುದಷ್ಟೆ ಅಲ್ಲದೆ 1,000 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಭಾರಿಸಿದ್ದಾರೆ.

5 /11

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್, ಕ್ರಿಸ್ ಗೇಲ್ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 215 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಈ ಸಾಧನೆ ಮಾಡಿದ್ದರು.

6 /11

1999 ರಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಗೇಲ್, ವೆಸ್ಟ್ ಇಂಡೀಸ್ ಅನ್ನು ಎಲ್ಲಾ ಸ್ವರೂಪಗಳಲ್ಲಿ ಪ್ರತಿನಿಧಿಸಿದ್ದಾರೆ, 103 ಟೆಸ್ಟ್, 301 ODI ಮತ್ತು 79 T20 ಪಂದ್ಯಗಳನ್ನು ಆಡಿದ್ದಾರೆ.

7 /11

ವೃತ್ತಿಜೀವನದುದ್ದಕ್ಕೂ ಅವರು 42 ಶತಕಗಳನ್ನು ಒಳಗೊಂಡಂತೆ 19,593 ರನ್ ಗಳಿಸಿರುವ ಗೇಲ್‌ ಕ್ರಿಕೆಟ್ ದಂತಕಥೆಯಾಗಿ ತನ್ನ ಸ್ಥಾನಮಾನವನ್ನು ಭದ್ರಪಡಿಸಿಕೊಂಡಿದ್ದಾರೆ.

8 /11

ಕ್ರಿಸ್ ಗೇಲ್ ಅವರ ಕಥೆಯು ಬಡತನದಿಂದ ವಿಶ್ವದ ಶ್ರೀಮಂತ ಕ್ರಿಕೆಟಿಗರಾದ ಆಟಗಾರರ ಪಟ್ಟಿಯಲ್ಲಿ ಒಂದಾಗಿದೆ, ಕ್ರಿಸ್ ಗೇಲ್ ತನ್ನ ಆರಂಭಿಕ ದಿನಗಳಲ್ಲಿ ಸಾಕಷ್ಟು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಕುಟುಂಬವನ್ನು ಪೋಷಿಸಲು ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡಬೇಕಾಗಿತ್ತು. ಈ ಸಮಯದಲ್ಲಿ ಅವರು ಗುಡಿಸಲಿನಲ್ಲಿ ವಾಸಿಸುತ್ತಿದ್ದರು.

9 /11

ಕ್ರಿಸ್ ಗೇಲ್ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಈ ಹೋರಾಟದ ಕಥೆಯನ್ನು ಹೇಳಿಕೊಂಡಿದ್ದರು, ಕ್ರಿಸ್ ಗೇಲ್ ಈ ಸಂದರ್ಶನದಲ್ಲಿ ತಮ್ಮ ತಾಯಿ ಹೇಗೆ ಕುಟುಂಬನ್ನು ಪೋಷಿಸಲು ಚಿಪ್ಸ್‌ ಮಾರಾಟ ಮಾಡುತ್ತಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.  

10 /11

ತನ್ನ ಬಾಲ್ಯದಲ್ಲಿ ಮೂಲಭೂತ ಅಗತ್ಯಗಳಿಗಾಗಿ ಹೋರಾಡುತ್ತಿದ್ದ ಗೇಲ್‌ ತೀವ್ರ ಬಡತನವನ್ನು ಎದುರಿಸುತ್ತಿದ್ದರೂ ಸಹ ಎಂದಿಗೂ ಕೂಡ ತಮ್ಮ ಧೈರ್ಯವನ್ನು ಕಳೆದುಕೊಂಡಿಲ್ಲ. ಒಂದು ಕಾಲದಲ್ಲಿ ಹಸಿವಿನಿಂದ ಕದಿಯಬೇಕಾಗಿದ್ದ ಈತ  ಇಂದು ಹಲವಾರು ಬಡವರಿಗೆ ಊಟ ಒದಗಿಸುತ್ತಿದ್ದಾರೆ.

11 /11

ಇಂದು ಕ್ರಿಸ್ ಗೇಲ್ ತಮ್ಮ ಕುಟುಂಬದೊಂದಿಗೆ ಅದ್ಭುತ ಜೀವನ ನಡೆಸುತ್ತಿದ್ದಾರೆ. ಅವರ ನಿವ್ವಳ ಮೌಲ್ಯ ಸುಮಾರು 377 ಕೋಟಿ ರೂ. ರಾಗ್‌ಪಿಕರ್‌ನಿಂದ ಕ್ರಿಕೆಟ್ ಸೂಪರ್‌ಸ್ಟಾರ್ ಆಗುವವರೆಗಿನ ಅವರ ಪ್ರಯಾಣವು ಅನೇಕ ಜನರಿಗೆ ಸ್ಫೂರ್ತಿಯಾಗಿದೆ.