Silence health benefits : ದೊಡ್ಡ ಶಬ್ದ, ಜೋರಾಗಿ ಕೂಗುವುದು ನಮ್ಮ ದೇಹದ ಜೊತೆಗೆ ನಮ್ಮ ಮನಸ್ಸು ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಿಂದ ನಮ್ಮಲ್ಲಿ ಒತ್ತಡ ಹೆಚ್ಚುತ್ತದೆ ಎನ್ನಲಾಗಿದೆ. ಮಾನಸಿಕ ಆರೋಗ್ಯಕ್ಕೆ ಮೌನವು ತುಂಬಾ ಪ್ರಯೋಜನಕಾರಿ... ಬನ್ನಿ ಈ ಕುರಿತು ಹೆಚ್ಚಿನ ವಿಷಯ ತಿಳಿಯೋಣ..
ಮೌನವಾಗಿರುವುದು ನಮ್ಮಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮನ್ನು ಶಾಂತವಾಗಿರಿಸುತ್ತದೆ. ಇದರಿಂದ ನೀವು ಆರಾಮವಾಗಿ ನಿದ್ದೆ ಮಾಡಲು ಮತ್ತು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ.. ಬನ್ನಿ ಮೌನದ ಆರೋಗ್ಯ ಗುಟ್ಟನ್ನ ತಿಳಿಯೋಣ..
ಮೌನವಾಗಿರುವುದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಮೌನವು ನಿಮ್ಮ ಜ್ಞಾಪಕಶಕ್ತಿಯನ್ನು ಸಹ ಸುಧಾರಿಸುತ್ತದೆ. ದಿನಕ್ಕೆ ಒಂದು ಗಂಟೆ ಮೌನವಾಗಿರುವುದು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮೌನವಾಗಿರುವುದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮನ್ನು ಶಾಂತಗೊಳಿಸುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆರಾಮವಾಗಿ ಮತ್ತು ಶಾಂತಿಯುತವಾಗಿ ಮಲಗಬಹುದು. ಇದಲ್ಲದೆ, ಮೌನವು ಸಂವಹನವನ್ನು ಹೆಚ್ಚಿಸುತ್ತದೆ. ಸಂವಹನ ಕೌಶಲ್ಯವನ್ನು ಸುಧಾರಿಸಬಹುದು.
ಪ್ರತಿದಿನ ಸ್ವಲ್ಪ ಹೊತ್ತು ಮೌನವಾಗಿರುವುದು ಮೆದುಳು ಮತ್ತು ಮನಸ್ಸಿಗೆ ತುಂಬಾ ಒಳ್ಳೆಯದು. ಇದು ನಿಮ್ಮನ್ನ ಒತ್ತಡದಿಂದ ಹೊರತರುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳೂ ಬರುವುದಿಲ್ಲ ಎನ್ನುತ್ತಾರೆ ತಜ್ಞರು. ಇದಲ್ಲದೆ, ಮೌನವು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆಯಂತೆ.
ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಲು ಮೌನವಾಗಿರುವುದು ಉತ್ತಮ. ಪ್ರತಿದಿನ ಸ್ವಲ್ಪ ಹೊತ್ತು ಮೌನವಾಗಿದ್ದರೆ ಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು. ಮೌನ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ದಾರಿ ತೋರುತ್ತದೆ. ಸಮಸ್ಯೆಗಳಿಗೆ ನೀವೇ ದಾರಿ ಕಂಡುಕೊಳ್ಳಬಹುದು.
ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ಮೌನವಾಗಿರಿ, ಈ ಮೂಲಕ ನಮ್ಮ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ಮಾನಸಿಕ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.. ಅಲ್ಲದೆ ಅದೇಷ್ಟೋ ಕೌಟುಂಬಿಕ ಮತ್ತು ಕಚೇರಿಯಲ್ಲಿರು ಜಗಳಕ್ಕೆ ಕೋಪ ಕಾರಣವಾಗುತ್ತದೆ.. ಮೌನದಿಂದ ಇರಿ ಎಲ್ಲವೂ ಸರಿಯಾಗುತ್ತದೆ..