Health Tips: ಹೊಟ್ಟೆನೋವಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಮನೆಮದ್ದುಗಳು ಇಲ್ಲಿವೆ

Home Remedies for Stomach Pain: ಹೊಟ್ಟೆ ನೋವು ಅನೇಕ ಕಾರಣಗಳಿಂದ ಎದುರಾಗುತ್ತದೆ. ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆಯ ಸೋಂಕು, ವಿಪರೀತ ಉಷ್ಣ ಇತ್ಯಾದಿಗಳಿಂದ ಹೊಟ್ಟೆ ನೋವು ಉಂಟಾಗುತ್ತದೆ.

Home Remedies for Stomach Pain: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜಂಕ್‌ಫುಡ್‌ ಸೇವನೆ, ಹೆಚ್ಚಾಗಿ ಹೊರಗಡೆ ಆಹಾರ ತಿನ್ನುವುದರಿಂದ ಹೊಟ್ಟೆನೋವಿನ ಸಮಸ್ಯೆ ಕಾಡುತ್ತದೆ. ಹೊಟ್ಟೆ ನೋವು ಅನೇಕ ಕಾರಣಗಳಿಂದ ಎದುರಾಗುತ್ತದೆ. ಕೆಲವರಿಗೆ ಊಟ ಹೆಚ್ಚಾಗಿ ಹೊಟ್ಟೆ ನೋವು ಬಂದರೆ, ಇನ್ನೂ ಕೆಲವರಿಗೆ ಹೊಟ್ಟೆ ಹಸಿದು ನೋವು ಬರುತ್ತದೆ. ಇದರ ಜೊತೆಗೆ ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆಯ ಸೋಂಕು, ವಿಪರೀತ ಉಷ್ಣ ಇತ್ಯಾದಿಗಳಿಂದ ಹೊಟ್ಟೆ ನೋವು ಉಂಟಾಗುತ್ತದೆ. ಈ ಹೊಟ್ಟೆನೋವಿಗೆ ಮನೆಯಲ್ಲಿ ಮಾಡಬಹುದಾದ ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನಿಂಬೆ ಹಣ್ಣಿನಲ್ಲಿ ವಿಟಮಿನ್ ʼCʼ ಅಂಶ ಹೆಚ್ಚಾಗಿದೆ. ಇದು ಪ್ರಬಲ ಆಂಟಿ-ಆಕ್ಸಿಡೆಂಟ್ ಆಗಿದ್ದು, ನಮ್ಮ ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಊಟ ಮಾಡಿ ಜೀರ್ಣ ಆಗದೆ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ನಿಂಬೆ ಜ್ಯೂಸ್‌ ಸೇವಿಸಬೇಕು.

2 /5

ನಿಂಬೆರಸಕ್ಕೆ ಸ್ವಲ್ಪ ಪುದೀನಾ ರಸ, ಶುಂಠಿ ರಸ ಹಾಗೂ ಸ್ವಲ್ಪ ಮೆಣಸುಪುಡಿ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶಮನಗೊಳ್ಳುತ್ತದೆ. 

3 /5

ಹೊಟ್ಟೆ ನೋವು ಬಂದಾಗ ದ್ರವ ಪದಾರ್ಥಗಳು ಅಂದರೆ ಆರೋಗ್ಯಕರ ಜ್ಯೂಸ್‌ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನೋವು ಶಮನಗೊಳ್ಳುತ್ತದೆ. 

4 /5

ಹೊಟ್ಟೆನೋವು ಬಂದ ಸಂದರ್ಭದಲ್ಲಿ ಚಾಕೋಲೇಟ್‌ ಹಾಗೂ ಡೈರಿ ಪದಾರ್ಥಗಳನ್ನು ತಿನ್ನಬಾರದು. ಇಂತಹ ಪದಾರ್ಥಗಳನ್ನು ತಿಂದಾಗ ಅಜೀರ್ಣ ಸಮಸ್ಯೆ ಎದುರಾಗಿ ನೋವು ಮತ್ತಷ್ಟು ಉಲ್ಭಣಗೊಳ್ಳುತ್ತದೆ.

5 /5

ಹೊಟ್ಟೆನೋವಿನ ಸಮಸ್ಯೆ ಬರಬಾರದು ಎಂದರೆ ಸಾಧ್ಯವಾದಷ್ಟು ಮನೆಯಲ್ಲಿ ಮಾಡಿದ ಆರೋಗ್ಯಕರ ಆಹಾರ ಪದಾರ್ಥಗಳನ್ನೇ ಸೇವಿಸಬೇಕು. ಆರೋಗ್ಯಕರ ಆಹಾರ ಸೇವಿಸುವುದರಿಂದ ಹೊಟ್ಟೆ ಸೇರಿದಂತೆ ದೇಹದ ಸಮಗ್ರ ಆರೋಗ್ಯವೂ ಚೆನ್ನಾಗಿರುತ್ತದೆ.