ಮಧುಮೇಹ ಹೆಚ್ಚುತ್ತಿದೆ ಆದರೆ ಅನ್ನ ತಿನ್ನಬೇಕೆ? ಈ ಅಕ್ಕಿಯನ್ನು ಸೇವಿಸುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ

How much rice do you eat per day?: ದಿನಕ್ಕೆ ಎಷ್ಟು ಅನ್ನ ತಿನ್ನಬೇಕು? ಕೆಂಪು, ಬಿಳಿ, ಕಪ್ಪು ಇವುಗಳಲ್ಲಿ ಯಾವ ಬಗೆಯ ಅಕ್ಕಿಯನ್ನು ತಿನ್ನುವುದು ಉತ್ತಮ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಿರಿ.

How much rice do you eat per day?: ಮನುಷ್ಯನಿಗೂ ಅನ್ನಕ್ಕೂ ವಿಭಿನ್ನ ಸಂಬಂಧವಿದೆ. ಹಿಂದೆ ಶ್ರೀಮಂತರಷ್ಟೇ ಸೇವಿಸುತ್ತಿದ್ದ ಅನ್ನವನ್ನು ಇಂದು ಪ್ರತಿಯೊಬ್ಬರೂ ಸೇವಿಸುತ್ತಿದ್ದಾರೆ. ಹಿಂದೆ ಹಬ್ಬ-ಹರಿದಿನಗಳಲ್ಲಿ ಮಾತ್ರ ಅನ್ನ ಮಾಡುತ್ತಿದ್ದ ಜನರು ಇಂದು ಅದನ್ನೇ ಮುಖ್ಯ ಆಹಾರವನ್ನಾಗಿಸಿಕೊಂಡಿದ್ದಾರೆ. ಅನ್ನ ತಿನ್ನದಿದ್ದರೆ ಊಟ ಮಾಡಿದಂತಾಗುವುದಿಲ್ಲವೆಂಬ ಮಾತಿದೆ. ದಾಲ್, ತರಕಾರಿ ಸಾರು, ಪಲ್ಯ ಅಥವಾ ಗ್ರೇವಿ ಹೀಗೆ ಅನ್ನವನ್ನು ಎಲ್ಲದರ ಜೊತೆಗೆ ಸೇವಿಸಲಾಗುತ್ತದೆ. ಆದರೆ ಹೆಚ್ಚುತ್ತಿರುವ ರೋಗಗಳು ಮತ್ತು ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ, ನಾವು ಸೇವಿಸಬೇಕಾದ ಆಹಾರದ ಪ್ರಮಾಣವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇಂದು ನಾವು ಒಂದು ದಿನದಲ್ಲಿ ಎಷ್ಟು ಅನ್ನವನ್ನು ತಿನ್ನಬೇಕೆಂಬ ವಿವರವಾದ ಮಾಹಿತಿ ತಿಳಿಸಲಿದ್ದೇವೆ. ಇಷ್ಟು ಮಾತ್ರವಲ್ಲದೆ ಕೆಂಪು, ಬಿಳಿ, ಕಪ್ಪು ಯಾವ ರೀತಿಯ ಅನ್ನವನ್ನು ತಿನ್ನಬೇಕು ಎಂಬುದರ ಬಗ್ಗೆಯೂ ಇಲ್ಲಿ ಮಾಹಿತಿ ಇದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಬಿಳಿ ಅಕ್ಕಿಯನ್ನು ಭಾರತದಾದ್ಯಂತ ವ್ಯಾಪಕವಾಗಿ ಸೇವಿಸಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಂದು ಮತ್ತು ಕೆಂಪು ಅಕ್ಕಿಗೆ ಹೋಲಿಸಿದರೆ ಬಿಳಿ ಅಕ್ಕಿಯಲ್ಲಿ ಕಡಿಮೆ ಫೈಬರ್ ಮತ್ತು ಇತರ ಪೋಷಕಾಂಶಗಳಿವೆ. ಈ ಅಕ್ಕಿಯಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ನೀವು ಪ್ರತಿದಿನ ಅನ್ನವನ್ನು ತಿನ್ನುತ್ತಿದ್ದರೆ, ಬಿಳಿ ಅಕ್ಕಿಯ ಬದಲಿಗೆ ಕಂದು ಅಥವಾ ಕೆಂಪು ಅಕ್ಕಿಯನ್ನು ತಿನ್ನಲು ಪ್ರಾರಂಭಿಸಿ. ಏಕೆಂದರೆ ಇದು ಹೆಚ್ಚು ಫೈಬರ್, ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುತ್ತದೆ.

2 /6

WHO ಪ್ರಕಾರ, ದಿನಕ್ಕೆ 200-300 ಗ್ರಾಂ ಅಕ್ಕಿ ತಿನ್ನುವುದು ಸೂಕ್ತವಾಗಿದೆ. ICMR ಪ್ರಕಾರ, ಒಬ್ಬರು ದಿನಕ್ಕೆ 250-300 ಗ್ರಾಂ ಅನ್ನ ತಿನ್ನಬಹುದು. ಆದರೆ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​(AHA) ಪ್ರಕಾರ ದಿನಕ್ಕೆ 100-150 ಗ್ರಾಂ ಅನ್ನವನ್ನು ಮಾತ್ರ ತಿನ್ನುವುದು ಉತ್ತಮ. 

3 /6

ಸೋನಾ ಮಸ್ಸೂರಿಯನ್ನು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಪೊನ್ನಿ ಅಕ್ಕಿ ಹಗುರವಾಗಿದ್ದು ಇಡ್ಲಿ ಮತ್ತು ದೋಸೆ ಮಾಡಲು ಬಳಸಲಾಗುತ್ತದೆ.

4 /6

ಭಾರತದಲ್ಲಿ ಹಲವು ಬಗೆಯ ಅಕ್ಕಿಗಳಿವೆ. ಬಾಸ್ಮತಿ ಅಕ್ಕಿಯು ಉದ್ದವಾದ ಮತ್ತು ಹೆಚ್ಚು ಸುಗಂಧಭರಿತ ಅಕ್ಕಿಯಾಗಿದ್ದು, ಇದನ್ನು ಬಿರಿಯಾನಿ ಮತ್ತು ಪುಲಾವ್‌ನಂತಹ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸೋನಾ ಮಸ್ಸೂರಿ ಮತ್ತು ಪೊನ್ನಿ ಅಕ್ಕಿಯನ್ನು ಹೆಚ್ಚು ಸೇವಿಸಲಾಗುತ್ತದೆ. 

5 /6

ಕೆಂಪು ಅಕ್ಕಿಯು ಕೇರಳ, ಅಸ್ಸಾಂ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಕಂಡುಬರುತ್ತದೆ. ಈ ಅಕ್ಕಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಇದನ್ನು ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. 

6 /6

ಇದಲ್ಲದೆ ಭಾರತದಲ್ಲಿ ಕಪ್ಪು ಅಕ್ಕಿ ಸಹ ಸಿಗುತ್ತದೆ. ಇದನ್ನು ಮಣಿಪುರದಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ಜನರು ಇದನ್ನು "ಚಖಾವೋ" ಎಂದು ಕರೆಯುತ್ತಾರೆ. ಇದು ಬಹಳಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಬ್ರೌನ್ ರೈಸ್ ಸ್ವಲ್ಪ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆದಾಗ್ಯೂ, ಇದು ದೀರ್ಘಕಾಲೀನ ಶಕ್ತಿಯನ್ನು ಒದಗಿಸಲು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಅಧಿಕವಾಗಿದೆ.