Healthy Teeth: ನಿಮ್ಮ ಹಲ್ಲುಗಳ ಆರೋಗ್ಯಕ್ಕಾಗಿ ಈ 4 ಆಹಾರಗಳನ್ನು ಸೇವಿಸಿರಿ

Foods for healthy teeth: ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಾವು ದಿನನಿತ್ಯ ಸೇವಿಸುವ ಆಹಾರ ನಮ್ಮ ಹ್ಲಲುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಯಾವ ಆಹಾರ ಹಲ್ಲುಗಳ ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದನ್ನು ತಿಳಿಯಿರಿ.

ಆರೋಗ್ಯಕರ ಹಲ್ಲುಗಳಿಗೆ ಆಹಾರಗಳು: ಹಲ್ಲುಗಳ ಸುರಕ್ಷತೆಯು ನಮಗೆ ಬಹಳ ಮುಖ್ಯ, ಇಲ್ಲದಿದ್ದರೆ ಆಹಾರ ಸೇವಿಸಲು ತುಂಬಾ ಕಷ್ಟವಾಗುತ್ತದೆ. ಆಗಾಗ ನಮ್ಮ ಅಜಾಗರೂಕತೆಯಿಂದ ಹಲ್ಲುಗಳು ದುರ್ಬಲವಾಗುತ್ತವೆ ಮತ್ತು ಅವುಗಳಲ್ಲಿ ಕೊಳೆತ ಪ್ರಾರಂಭವಾಗುತ್ತದೆ. ಹೀಗಾಗಿ ನಾವು ಏನು ತಿನ್ನುತ್ತೇವೆ ಎಂಬುದರ ಬಗ್ಗೆ ಗಮನ ಹರಿಸಬೇಕು. ನಮ್ಮ ಆರೋಗ್ಯ ಸ್ಥಿತಿಯನ್ನು ಆಹಾರದ ಮೂಲಕ ನಿರ್ಧರಿಸಲಾಗುತ್ತದೆ, ಬಾಯಿಯ ಆರೋಗ್ಯವೂ ಇದನ್ನು ಅವಲಂಬಿಸಿರುತ್ತದೆ. ಹಲ್ಲುಗಳ ಆರೋಗ್ಯಕ್ಕೆ ನಾವು ಯಾವ ರೀತಿಯ ಆಹಾರ ಸೇವಿಸಬೇಕು ಅನ್ನೋದನ್ನು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನೀವು ಸಿಹಿ ಮತ್ತು ಪಿಷ್ಟ ಆಹಾರವನ್ನು ಸೇವಿಸಿದರೆ ಸುಲಭವಾಗಿ ಪ್ಲೇಕ್ ಮತ್ತು ಕುಳಿಗಳು ಉಂಟಾಗುತ್ತವೆ. ಹೀಗಾಗಿ ಉತ್ತಮ ಹಲ್ಲಿನ ಆರೋಗ್ಯಕ್ಕಾಗಿ ನಾವು ಏನು ತಿನ್ನಬೇಕು ಅನ್ನೋದು ಮುಖ್ಯ. ಹಲ್ಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ರೆ ನಮ್ಮ ನಗು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಯಂತೆ ಆಗುತ್ತದೆ.

2 /5

ಬಾದಾಮಿಯು ತುಂಬಾ ಪೌಷ್ಟಿಕಾಂಶದ ಒಣ ಹಣ್ಣಾಗಿದ್ದು, ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಮ್ಮ ಹಲ್ಲುಗಳನ್ನು ಆರೋಗ್ಯವಾಗಿಡಲು ಬಯಸಿದರೆ, ಖಂಡಿತ ಇದನ್ನು ನೀವು ಸೇವಿಸಬೇಕು. ಏಕೆಂದರೆ ಇದು ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ ಮತ್ತು ಇದರಲ್ಲಿರುವ ಸಕ್ಕರೆಯ ಪ್ರಮಾಣವು ಅತ್ಯಲ್ಪವಾಗಿದೆ.

3 /5

ಕ್ಯಾರೆಟ್ ಅನ್ನು ವಿಟಮಿನ್ A ಮತ್ತು ಫೈಬರ್‌ನ ಶ್ರೀಮಂತ ಮೂಲವೆಂದು ಪರಿಗಣಿಸಲಾಗಿದೆ. ನೀವು ಕಚ್ಚಾ ಕ್ಯಾರೆಟ್ ಸೇವಿಸಿದರೆ, ಬಾಯಿಯಲ್ಲಿ ಹೆಚ್ಚು ಲಾಲಾರಸವು ಉತ್ಪತ್ತಿಯಾಗುತ್ತದೆ. ಇದರಿಂದಾಗಿ ಆಹಾರದ ಜೀರ್ಣಕ್ರಿಯೆಯು ಸುಲಭವಾಗುತ್ತದೆ ಮತ್ತು ಅದೇ ರೀತಿ ಇದು ಪ್ಲೇಕ್-ರೂಪಿಸುವ ಬ್ಯಾಕ್ಟೀರಿಯಾವನ್ನು ತಡೆಯುತ್ತದೆ. ಇದರಿಂದ ಹಲ್ಲು ಕೊಳೆಯುವ ಅಪಾಯ ತಪ್ಪುತ್ತದೆ.

4 /5

ಮೊಸರು ನಮ್ಮ ಹಲ್ಲುಗಳಿಗೆ ಪ್ರಯೋಜನಕಾರಿಯಾದ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಇದು ಸೂಕ್ಷ್ಮಜೀವಿಗಳನ್ನು ದೂರವಿರಿಸಲು ಸಹಾಯ ಮಾಡುವ ಉತ್ತಮ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದು ಪ್ಲೇಕ್ ಮತ್ತು ಕುಳಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿನ್ನಬಾರದು.

5 /5

ಹಸಿರು ಎಲೆಗಳ ತರಕಾರಿಗಳನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇವುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಜೊತೆಗೆ ವಿಟಮಿನ್ಗಳು ಮತ್ತು ಖನಿಜಗಳು ಸಾಕಷ್ಟು ಇರುತ್ತವೆ. ನಿಮ್ಮ ಆಹಾರದಲ್ಲಿ ಪಾಲಕ್ ಮತ್ತು ಎಲೆಕೋಸು ಮುಂತಾದ ತರಕಾರಿಗಳನ್ನು ಸೇರಿಸಿದರೆ ದೇಹಕ್ಕೆ ಕ್ಯಾಲ್ಸಿಯಂ ದೊರೆಯುತ್ತದೆ. ಇದು ಹಲ್ಲುಗಳ ದಂತಕವಚ ರಚನೆಗೆ ಸಹಾಯ ಮಾಡುತ್ತದೆ. (ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)