IPL 2021 : ಈ ಆಟಗಾರರು ಮತ್ತು ಸಿಬ್ಬಂದಿಗೆ ತಗುಲಿದೆ ಕರೋನಾ ಸೋಂಕು ; ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಐಪಿಎಲ್‌ನಲ್ಲಿ ಕರೋನಾ ವೈರಸ್ ಸೋಂಕಿಗೆ ಗುರಿಯಾದ ಆಟಗಾರರು ಯಾರು ನೋಡೋಣ

ನವದೆಹಲಿ : ಕರೋನಾ ಕರಿಛಾಯೆ ಐಪಿಎಲ್ 2021ರ ಮೇಲೂ ಬಿದ್ದಿದೆ. ಈ ಕಾರಣಕ್ಕಾಗಿಯೇ ಈ ಬಾರಿಯ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.  ಆಟಗಾರರು ಮತ್ತು ತಂಡಗಳ ಸದಸ್ಯರುಗಳಲ್ಲಿ ನಿರಂತರವಾಗಿ ಕರೋನಾ ಸೋಂಕು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.   ಐಪಿಎಲ್‌ನಲ್ಲಿ ಕರೋನಾ ವೈರಸ್ ಸೋಂಕಿಗೆ ಗುರಿಯಾದ ಆಟಗಾರರು ಯಾರು ನೋಡೋಣ .. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /11

ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಅವರಿಗೆ ಮಂಗಳವಾರ ಕರೋನಾ ಸೋಂಕು ಕಾಣಿಸಿಕೊಂಡಿದೆ. ಐಪಿಎಲ್‌ನಲ್ಲಿ ಕರೋನಾ ವೈರಸ್‌ ಸೋಂಕಿಗೆ ಗುರಿಯಾದ ಇತ್ತೀಚಿನ ಪ್ರಕರಣ ಇದಾಗಿದೆ. ಈ ವರದಿ ಹೊರ ಬರುತ್ತಿದ್ದಂತೆ, ಬಿಸಿಸಿಐ ಐಪಿಎಲ್ 2021 ಅನ್ನು ರದ್ದು ಮಾಡಿದೆ.   

2 /11

ದೆಹಲಿ ಕ್ಯಾಪಿಟಲ್ಸ್ ಆಟಗಾರ ಅಮಿತ್ ಮಿಶ್ರಾ ಅವರಲ್ಲೂ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದಾದ ನಂತರ ಅವರನ್ನು  ಆಸ್ಪತ್ರೆಗೆ ದಾಖಲಿಸಲಾಯಿತು. ಈ ವಿಚಾರವನ್ನು ದೆಹಲಿ ಕ್ಯಾಪಿಟಲ್ಸ್  ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.   

3 /11

ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮತ್ತು ಆಸ್ಟ್ರೇಲಿಯಾದ ಮಾಜಿ ಅನುಭವಿ ಬ್ಯಾಟ್ಸ್‌ಮನ್ ಮೈಕೆಲ್ ಹಸ್ಸಿ ಕೂಡ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ವರದಿಯ ಪ್ರಕಾರ, ತಂಡದ ಮೂವರು ಸದಸ್ಯರಲ್ಲಿ ಮೊದಲೇ ಈ ವೈರಸ್‌ ಕಾಣಿಸಿಕೊಂಡಿತ್ತು. ಇದಾದ ನಂತರ,  ಹಸ್ಸಿಯ ಪರೀಕ್ಷೆ ವರದಿ ಕೂಡಾ ಪಾಸಿಟಿವ್ ಬಂದಿದೆ. 

4 /11

ಇಬ್ಬರು ಕೋಲ್ಕತಾ ನೈಟ್ ರೈಡರ್ಸ್ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರು ಕೂಡಾ ಕರೋನಾ ಸೋಂಕಿಗೆ ತುತ್ತಾಗಿದ್ದಾರೆ. ಕರೋನಾ  ನಂತರ ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯವನ್ನು ಮುಂದೂಡಲಾಯಿತು.

5 /11

ಚೆನ್ನೈ ಸೂಪರ್ ಕಿಂಗ್ಸ್ ನ  ಸಿಇಒ ಕಾಶಿ ವಿಶ್ವನಾಥ್, ಬಾಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಮತ್ತು ಬಸ್ ಕ್ಲೀನರ್ ನಲ್ಲೂ ಕರೋನಾ ವೈರಸ್ ಕಾಣಿಸಿಕೊಂಡಿದೆ.   

6 /11

ಆರ್ ಸಿಬಿ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಸಾಂಕ್ರಮಣಕ್ಕೊಳಗಾದ ಎರಡನೇ ಆಟಗಾರ. ಸ್ಯಾಮ್ಸ್ ನ ಮೊದಲ ವರದಿ ನೆಗೆಟಿವ್ ಬಂದಿತ್ತಾದರೂ ಎರಡನೇ ವರದಿಯಲ್ಲಿ ಪಾಸಿಟಿವ್ ಬಂದಿತ್ತು

7 /11

ಮುಂಬಯಿ ಇಂಡಿಯನ್ಸ್  ವಿಕೆಟ್ ಕೀಪಿಂಗ್ ಕೋಚ್ ಕಿರಣ್ ಮೋರೆ ಅವರ ಕರೋನಾ ವರದಿ ಕೂಡಾ ಏಪ್ರಿಲ್ 6ರಂದು ಪಾಸಿಟಿವ್ ಬಂದಿತ್ತು. ಇದಾದ ನಂತರ ಕ್ವಾರಂಟೈನ್ ನಲ್ಲಿದ್ದರು. ನಂತರ ಅವರು ಸಂಪೂರ್ಣ ಗುಣಮುಖರಾಗಿದ್ದರು.

8 /11

ದೆಹಲಿ ಕ್ಯಾಪಿಟಲ್ಸ್ ನ ಫಾಸ್ಟ್ ಬೌಲರ್ Enrich Nortz ಏಪ್ರಿಲ್ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯನ್ನು ಅರ್ಧಕ್ಕೆ ಬಿಟ್ಟು ಭಾರತಕ್ಕೆ ಬಂದಿದ್ದರು. ಇದಾದ ನಂತರ ಟೆಸ್ಟ್ ವೇಳೆ ಕರೋನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು.  

9 /11

ಅಕ್ಷರ್ ಪಟೇಲ್ ಕರೋನಾ ಸೋಂಕಿಗೆ ಒಳಗಾದ ದೆಹಲಿ ಕ್ಯಾಪಿಟಲ್ಸ್ ತಂಡದ ಎರಡನೇ ಆಟಗಾರ. ಮಾರ್ಚ್ 28ಕ್ಕೇ ಇವರ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಇದಾಧ ನಂತರ ಸಂಪೂರ್ಣ ಗುಣಮುಖರಾದ ಅವರು ಮತ್ತೆ ಆಟ ಮುಂದುವರೆಸಿದ್ದರು.  

10 /11

ಆರ್ ಸಿಬಿ ತಂಡದ  ಓಪನರ್ ದೇವದತ್ತ ಪಡಿಕ್ಕಲ್ ಐಪಿಎಲ್ ಆರಂಭಕ್ಕೂ ಮೊದಲೇ ಕರೋನಾ ವೈರಸ್ ಗೆ ತುತ್ತಾಗಿದ್ದರು. ಇದಾದ ನಂತರ ಅವರು ತಮ್ಮ ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದರು. 

11 /11

 ಕೆಕೆಆರ್ ಓಪನಿಂಗ್ ಬ್ಯಾಟ್ಸ್ ಮ್ಯಾಣ್ ನಿತೀಶ್  ರಾಣಾ ಕೂಡಾ ಐಪಿಎಲ್ ಆರಂಭಕ್ಕೂ ಮುನ್ನವೇ ಕರೋನಾ ಸೋಂಕಿಗೆ ತುತ್ತಾಗಿದ್ದರು. ಇದಾದ ನಂತರ ಅವರು ಗುಣಮುಖರಾಗಿದ್ದರು.